*ಗೋಣಿಕೊಪ್ಪಲು, ಫೆ. 21: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯ (ಕಾಪ್ಸ್) 21ನೇ ಪದವಿ ಪ್ರದಾನ ಸಮಾರಂಭ ಈಚಿಗೆ ಜರುಗಿತು. ಸಂಸ್ಥೆಯ ಕಲಾ ಮಂಚ್ನಲ್ಲಿ ನಡೆದ ಸಮಾರಂಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
ಕಾಲೇಜಿನ ನಾಯಕ, ನಾಯಕಿ ಯರು ಪಡೆದಿದ್ದ ನಾಯಕತ್ವದ ಧ್ವಜವನ್ನು ಪ್ರಾಂಶುಪಾಲ ಕೊರಿಯ ಕೋಸ್ ಅವರಿಗೆ ಹಿಂದಿರುಗಿಸಿದರು.
ಮುಖ್ಯ ಅತಿಥಿಯಾಗಿದ್ದ ಆದಾಯ ತೆರಿಗೆ ಉಪ ಆಯುಕ್ತೆ ಪ್ರೀತ್ ಗಣಪತಿ ಮಾತನಾಡಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಆತ್ಮ ವಿಶ್ವಾಸವನ್ನು ಯಾವತ್ತೂ ಕಳೆದುಕೊಳ್ಳಬಾರದು. ಶ್ರಮ ಮತ್ತು ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ಉತ್ತಮ ಸಾಧನೆ ಮಾಡ ಬಹುದು ಎಂದರು. ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.
- ಎನ್.ಎನ್. ದಿನೇಶ್