ಮಡಿಕೇರಿ: ಹುತಾತ್ಮ ವೀರ ಯೋಧರಿಗೆ ಮಾಜಿ ಸೈನಿಕರ ವತಿಯಿಂದ 7ನೇ ಹೊಸಕೋಟೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ 7ನೇ ಹೊಸಕೋಟೆಯಲ್ಲಿ ಮಾಜಿ ಸೈನಿಕರ ಸಂಘ ಸ್ಥಾಪಿಸಲು ತೀರ್ಮಾನಿಸಲಾಯಿತು.
ಸುಂಟಿಕೊಪ್ಪ ಹೋಬಳಿ ಹಾಗೂ ಸುತ್ತಮುತ್ತಲಿನ ಮಾಜಿ ಸೈನಿಕರು ಸಂಘದ ಸದಸ್ಯರಾಗಲು ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. 9480052278, 9448325825.ಸೋಮವಾರಪೇಟೆ: ಕಾಶ್ಮೀರದ ಪುಲ್ವಮಾದಲ್ಲಿ ನಡೆದ ಭಯೋತ್ಪಾದಕರ ಧಾಳಿಗೆ ಮರಣ ಹೊಂದಿದ ಭಾರತೀಯ ಯೋಧರಿಗೆ ಇಲ್ಲಿನ ಜ್ಞಾನವಿಕಾಸ ಶಾಲೆ ಮತ್ತು ಕಲ್ಕಂದೂರು ಗ್ರಾಮದ ಶ್ರೀ ಶಾಸ್ತ ಯುವಕ ಸಂಘದ ಸದಸ್ಯರುಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಜ್ಞಾನವಿಕಾಸ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯ ಎ.ಎಸ್. ಮಹೇಶ್ ಭಾಗವಹಿಸಿ ಮಾತನಾಡಿದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಮೃತ ಯೋಧರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಕಲ್ಕಂದೂರು ಗ್ರಾಮದ ಶ್ರೀ ಶಾಸ್ತ ಯುವಕ ಸಂಘದ ವತಿಯಿಂದ ಕೂಡುರಸ್ತೆಯ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಲೋಕೇಶ್ ಸೇರಿದಂತೆ ಪದಾಧಿಕಾರಿಗಳು, ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು.ಚೆಟ್ಟಳ್ಳಿ: ಕೊಡಗಿನ ಅನಿವಾಸಿಗಳ ಸಂಘಟನೆ ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯು.ಎ.ಇ. ವತಿಯಿಂದ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ದೇಶಾಭಿಮಾನವನ್ನು ಮೆರೆದಿದ್ದಾರೆ.
ಉಗ್ರರ ಧಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಯು.ಎ.ಇ.ಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಪಾಕಿಸ್ತಾನದ ಹೀನ ಕೃತ್ಯವನ್ನು ಖಂಡಿಸಿದ ಸುನ್ನಿ ವೆಲ್ ಫೇರ್ ಅಸೋಸಿಯೇಷನ್ ಕಾರ್ಯರ್ತರು, ಪಾಕಿಸ್ತಾನದ ವಿರುದ್ಧ ಪ್ರತೀಕಾರವನ್ನು ತೀರಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಭಾರತದ ಅಖಂಡತೆ, ಐಕ್ಯತೆಯನ್ನು ಎತ್ತಿ ಹಿಡಿಯುವದಾಗಿ ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕಾರ್ಯಕರ್ತರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಸುನ್ನಿ ವೆಲ್ಫೇರ್ ಅಸೋಸಿಯೇಷನ್ ವಕ್ತಾರ ಮೂರ್ನಾಡಿನ ಜೆ.ಹೆಚ್. ಇಸ್ಮಾಯಿಲ್, ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಧಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಸೇನಾನಿಗಳು ಮರಣ ಹೊಂದಿದ್ದಾರೆ. ಇದನ್ನು ಸುನ್ನಿ ವೆಲ್ ಫೇರ್ ಸೊಸೈಟಿ ಖಂಡಿಸುತ್ತದೆ. ಪಾಕಿಸ್ತಾನದ ಈ ಹೀನ ಕೃತ್ಯವನ್ನು ಭಾರತ ದೇಶ ಕ್ಷಮಿಸುವದಿಲ್ಲ ಹಾಗೂ ಸಹಿಸುವದಿಲ್ಲ ಎಂದು ಆಗ್ರಹಿಸಿದರು.
ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ಕೊಟ್ಟಮುಡಿಯ ಅಬೂಬಕರ್ ಹಾಜಿ ವಹಿಸಿದ್ದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಕತ್ತೂರಿನ ಮಹ್‍ಹೂದ್, ಉಪಾಧ್ಯಕ್ಷರಾದ ನಾಪೋಕ್ಲುವಿನ ಅರಫಾತ್, ಅಹ್ಮದ್ ಚಾಮಿಯಾಲ್, ಸಲಹಾ ಸಮಿತಿ ಸದಸ್ಯರಾದ ಉಸ್ಮಾನ್ ಹಾಜಿ, ಅಬ್ದುಲ್ ಜಲೀಲ್ ನಿಜಾಮಿ, ಮೊಹಮ್ಮದ್ ಹಾಜಿ, ಕ್ಯಾಬಿನೆಟ್ ಸದಸ್ಯರಾದ ಹಾರಿಸ್ ಕುಂಜಿಲ ಮತ್ತಿತರರು ಹಾಜರಿದ್ದರು.