ಮಡಿಕೇರಿ, ಫೆ. 20: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂದರ್ಭ ಎದುರಾಗಿರುವ ಅತಿವೃಷ್ಟಿಯಿಂದ ಹಾನಿ ಉಂಟಾಗಿರುವ ಗ್ರಾಮೀಣ ರಸ್ತೆಗಳು ಹಾಗೂ ಇತರ ಕಾಮಗಾರಿಗೆ ಚಾಲನೆ ದೊರೆತಿದೆ. ಜಿಲ್ಲೆಯಲ್ಲಿ ಒಟ್ಟು ರೂ. 33.15 ಕೋಟಿ ವೆಚ್ಚದ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ‘ಶಕ್ತಿ’ಗೆ ತಿಳಿಸಿದ್ದಾರೆ.ಮಡಿಕೇರಿ ತಾಲೂಕಿನಲ್ಲಿ ಸುಮಾರು 42 ಕಾಮಗಾರಿಗಳನ್ನು ಈ ಸಂಬಂಧ ಕೈಗೊಳ್ಳಲಾಗುತ್ತಿದ್ದು, ರೂ. 15 ಕೋಟಿ ವೆಚ್ಚದಲ್ಲಿ ಕೆಲಸ ನಿರ್ವಹಿಸಲಾಗುವದು ಎಂದು ಅವರು ಮಾಹಿತಿ ನೀಡಿದ್ದಾರೆ. ಸೋಮವಾರ ಪೇಟೆ ತಾಲೂಕಿನ ಅಲ್ಲಲ್ಲಿ ರೂ. 6.50 ಕೋಟಿ ವೆಚ್ಚದ 74 ಕಾಮಗಾರಿಗಳು ಹಾಗೂ ವೀರಾಜಪೇಟೆ ವ್ಯಾಪ್ತಿಯ 50 ಕೆಲಸಗಳನ್ನು ರೂ. 6.50 ಕೋಟಿ ಮೊತ್ತದಲ್ಲಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹರೀಶ್ ತಿಳಿಸಿದ್ದಾರೆ. ಅಲ್ಲದೆ ಪಿಎಂಜಿಎಸ್‍ವೈ ಯೋಜನೆ ಅಡಿಯಲ್ಲಿ ರೂ. 5.15 ಕೋಟಿಯ 6 ಕೆಲಸಗಳನ್ನು ಇದೇ ವೇಳೆ ನಿರ್ವಹಿಸಲಿರುವದಾಗಿಯೂ ವಿವರಿಸಿದ್ದಾರೆ.
ಅಲ್ಲಲ್ಲಿ ಭೂಮಿ ಪೂಜೆ : ಇಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಕಗ್ಗೋಡ್ಲು ಅಮ್ಮಾಟಂಡ ಕುಟುಂಬದ ಸಂಪರ್ಕ ರಸ್ತೆ, ಭಗವತಿ ದೇವಾಲಯ ರಸ್ತೆ, ಅಲ್ಲಿನ ಸಮುದಾಯ ಭವನ, ಅರ್ವತ್ತೊಕ್ಲು ತಾಳತ್‍ಮನೆ ರಸ್ತೆ, ಕಗ್ಗೋಡ್ಲು - ಬಿಳಿಗೇರಿ ರಸ್ತೆ, ಬಿಳಿಗೇರಿ - ಮೇಕೇರಿ ರಸ್ತೆ ಮುಂತಾದೆಡೆಗಳಲ್ಲಿ ಹಾಕತ್ತೂರು ಮತ್ತು ಮೇಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ರೂ. 4 ಕೋಟಿ ವೆಚ್ಚದ ವಿವಿಧ ಕಾಮಗಾರಿ ಗಳಿಗೆ ಚಾಲನೆ ನೀಡಲಾಯಿತು.ಈ ಸಂದರ್ಭ ಶಾಸಕರಿಂದ ಭೂಮಿಪೂಜೆ ವೇಳೆ ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಸದಸ್ಯೆ ಕುಮುದ ರಶ್ಮಿ, ಆರ್‍ಎಂಸಿ ಸದಸ್ಯ ಬೆಪ್ಪುರನ ಮೇದಪ್ಪ, ಗ್ರಾ.ಪಂ. ಪ್ರಮುಖರಾದ ಶಾರದಾ, ಜಯಂತಿ, ಕಾಂತರಾಜ್, ಹೇಮಾವತಿ, ವಿಷ್ಣು ಕುಮಾರ್, ಭೀಮಯ್ಯ, ಬೆಳ್ಯಪ್ಪ ಸಹಿತ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇಂಜಿನಿಯರ್‍ಗಳಾದ ಗವಿಸಿದ್ಧಯ್ಯ ಅಶೋಕ್ ಮತ್ತಿತರರು ಹಾಜರಿದ್ದರು. ಭೂಮಿ ಪೂಜೆ ನೆರವೇರಿಸಿ, ಮಾತನಾಡಿದ ಶಾಸಕ ಬೋಪಯ್ಯ, ಕೆಲಸ ಕಳಪೆಯಾಗದಂತೆ ಸ್ಥಳೀಯ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು. ಆದಷ್ಟು ಬೇಗ ಕಾಮಗಾರಿ ಪೂರೈಸಲು ಅಧಿಕಾರಿಗಳಿಗೆ ಸಲಹೆಯಿತ್ತರು.
ವೀರಾಜಪೇಟೆ ತಾಲೂಕು
*ಗೋಣಿಕೊಪ್ಪಲು: ಕುಟ್ಟ ಗ್ರಾ.ಪಂ ವ್ಯಾಪ್ತಿಯ ರೂ. 73 ಲಕ್ಷ ಅನುದಾನದಲ್ಲಿ ರಸ್ತೆ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರೆವೇರಿಸುವ ಮೂಲಕ ಚಾಲನೆ ನೀಡಿದರು.
ಮಳೆ ಹಾನಿ ದುರಸ್ಥಿಯಲ್ಲಿ ಮಂಚಳ್ಳಿ ಪೂಜೆ ಕಲ್ಲು ಸಂಪರ್ಕ ರಸ್ತೆ 15 ಲಕ್ಷ ವೆಚ್ಚದಲ್ಲಿ ನಡೆಯಲಿದ್ದು, ಕಾಯಿಮನೆ ಇರ್ಪು ರಸ್ತೆ ಡಾಂಬರೀಕರಣಕ್ಕೆ 15 ಲಕ್ಷ ಮತ್ತು 7 ಲಕ್ಷ ಅನುದಾನದಲ್ಲಿ ಮಂಚಳ್ಳಿ ರಸ್ತೆ ಬದಿಯ ತಡೆಗೋಡೆ ದುರಸ್ಥಿ ಕಾರ್ಯ ನಡೆಯಲಿದೆ. ಅಲ್ಲದೆ ಶಾಸಕರ ಅನುದಾನದ 3 ಲಕ್ಷ ಮೊತ್ತದಲ್ಲಿ ತೈಲಾ ಗ್ರಾಮದ ತಿತೀರ ಸಂಪರ್ಕ ರಸ್ತೆ ಮತ್ತು 3 ಲಕ್ಷದಲ್ಲಿ ಹೈಸ್ಕೂಲ್ ರಸ್ತೆ ಅಭಿವೃದ್ಧಿ ಗೊಳ್ಳಲಿದೆ.
10 ಲಕ್ಷ ಅನುದಾನದಲ್ಲಿ ಮಂಚಳ್ಳಿ ಪೂಜೆಕಲ್ಲು ಸಂಪರ್ಕ ರಸ್ತೆ, 5 ಲಕ್ಷದಲ್ಲಿ ನಾಥಂಗಲ್ ಬೆಟ್ಟದ ಹಾಡಿ ಸಂಪರ್ಕ ರಸ್ತೆ, 5 ಲಕ್ಷದಲ್ಲಿ ನಾಥಂಗಲ್ ಉಳ್ಳಿಪಾರೆ ಸಂಪರ್ಕ ರಸ್ತೆ ಮತ್ತು ಹತ್ತು ಲಕ್ಷದಲ್ಲಿ ಮಂಚಳ್ಳಿ ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
ಈ ಸಂದರ್ಭ ತಾಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಬೀಮಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಚೋಡುಮಾಡ ಶರಿನ್ ಸುಬ್ಬಯ್ಯ, ಸ್ಥಾನೀಯ ಸಮಿತಿ ಅಧ್ಯಕ್ಷ ದಿನೇಶ್, ಗುತ್ತಿಗೆದಾರ ಚೇತನ್, ವಿ.ಎಸ್.ಎಸ್. ಎನ್. ಅಧ್ಯಕ್ಷ ಹೊಟ್ಟೆಂಗಡ ರಮೇಶ್, ವೀರಾಜಪೇಟೆ ಟೌನ್ ಬ್ಯಾಂಕ್ ನಿದೇರ್ಶಕ ಮಲ್ಲಂಡ ಮಧು ದೇವಯ್ಯ, ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.
ಬಲ್ಯಮುಂಡೂರು
*ಗೋಣಿಕೊಪ್ಪಲು : ಬಲ್ಯಮಂಡೂರು ಗ್ರಾ.ಪಂ ವ್ಯಾಪ್ತಿಯ ವಿವಿದ ಭಾಗಗಳಿಗೆ ಮಳೆ ಹಾನಿ ಪರಿಹಾರ, ಶಾಸಕರ ಅನುಧಾನ ಮತ್ತು ಕೊಡಗು ಪ್ಯಾಕೇಜ್ ಅಡಿಯಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಗೆ ಅಕ್ಷತೆ ಹಾಕುವ ಮೂಲಕ ಚಾಲನೆ ನೀಡಿದರು.
ಮಳೆ ಹಾನಿ ದುರಸ್ಥಿಯಲ್ಲಿ ಅಂದಾಜು ಮೊತ್ತ 15 ಲಕ್ಷದಲ್ಲಿ ಹುದಿಕೇರಿ ಮುಖ್ಯ ರಸ್ತೆಯಿಂದ ನಡಿಕೇರಿ ಸಂಪರ್ಕ ರಸ್ತೆ ಅಭಿವೃದ್ಧಿ, ಶಾಸಕರ ಮೂರು ಲಕ್ಷ ಅನುದಾನದಲ್ಲಿ ತೋಚಮಕೇರಿ ಗ್ರಾಮದ ಮೂಕಳ ಮಾಡ ತನ್ನಿಗೋಡು ಸಂಪರ್ಕ ರಸ್ತೆ ಮತ್ತು ಸಂಸದರ ಎರಡು ಲಕ್ಷ ಅನುದಾನದಲ್ಲಿ ಇಡಿಗೇರಿ ಸಂಪರ್ಕ ರಸ್ತೆ ಡಾಂಬರೀಕರಣ ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ಕೊಡಗು ವಿಶೇಷ ಪ್ಯಾಕೇಜ್ ಅನುದಾನದಲ್ಲಿ 10 ಲಕ್ಷ ಮೊತ್ತದಲ್ಲಿ ಬರಂತೋಡೆ ಕೂತಮಾಡು ರಸ್ತೆ ಡಾಂಬರಿಕರಣ ಮತ್ತು 10 ಲಕ್ಷ ಅನುದಾನದಲ್ಲಿ ಹುದಿಕೇರಿ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ 10 ಲಕ್ಷದಲ್ಲಿ ನಡಿಕೇರಿ ಪೋಸ್ಟ್ ಆಫೀಸ್ ಅಂಬಲ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ತಾಲೂಕು ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಬೀಮಯ್ಯ, ಕಾರ್ಯದರ್ಶಿ ಲಾಲ ಬೀಮಯ್ಯ, ಖಜಾಂಜಿ ಚೋಡುಮಾಡ ಶ್ಯಾಮ್, ಸ್ಥಾನೀಯ ಸಮಿತಿ ಅಧ್ಯಕ್ಷ ಬಾಬು, ಗ್ರಾ.ಪಂ ಸದಸ್ಯ ಚಿಂಡಮಾಡ ಖುಷಿ, ಪ್ರಮುಖರಾದ ತೋರೆರ ವಿನು, ಮಂಜು, ಸುಜಾ, ರೋಶನ್, ಮಾಣಿಪಂಡ ನಳಿನಿ, ಕಳ್ಳೇರ ಬೋಪಣ್ಣ, ನರೇಂದ್ರ, ಮುಕಾಳೇಮಾಡ ನಂಜಪ್ಪ ಸೇರಿದಂತೆ ಹಲವರು ಹಾಜರಿದ್ದರು.
ನಾಲ್ಕೇರಿ
* ಗೋಣಿಕೊಪ್ಪಲು : ನಾಲ್ಕೇರಿ ಗ್ರಾ.ಪಂ ವ್ಯಾಪ್ತಿಯ ರಸ್ತೆ ಮರು ಡಾಂಬರೀಕರಣ
(ಮೊದಲ ಪುಟದಿಂದ) ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರೆವೇರಿಸಿದರು.
57 ಲಕ್ಷದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು, ಮಳೆ ಹಾನಿ ದುರಸ್ಥಿಯಲ್ಲಿ 15 ಲಕ್ಷ ವೆಚ್ಚದಲ್ಲಿ ನಾಲ್ಕೇರಿ ಹರಿಹರ ಸಂಪರ್ಕ ರಸ್ತೆ ದುರಸ್ತಿ ಮತ್ತು ಶಾಸಕರ ಅನುದಾನದ ಮೂರು ಲಕ್ಷ ವೆಚ್ಚದಲ್ಲಿ ನಾಲ್ಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಅಭಿವೃದ್ಧಿ ನಡೆಯಲಿದೆ.
ವಿಶೇಷ ಕೊಡಗು ಪ್ಯಾಕೇಜ್‍ನಲ್ಲಿ ಐದು ಲಕ್ಷದಲ್ಲಿ ಬಿದುರೂರು ಸಂಪರ್ಕ ರಸ್ತೆ ಅಭಿವೃದ್ಧಿ, ಐದು ಲಕ್ಷದಲ್ಲಿ ಮಂದತವ್ವ ದೇವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿ, ಐದು ಲಕ್ಷ ಸುಬ್ರಮಣ್ಯ ಬಣ್ಣಮೊಟ್ಟೆ ಸಂಪರ್ಕ ರಸ್ತೆ ಅಭಿವೃದ್ಧಿ, ಐದು ಲಕ್ಷದಲ್ಲಿ ನಾಲ್ಕೇರಿ- ಪಲ್ಲೇರಿ ಸಂಪರ್ಕ ರಸ್ತೆ ಅಭಿವೃದ್ಧಿ, ಐದು ಲಕ್ಷದಲ್ಲಿ ಸೊಡ್ಲೂರುಕೇರಿ ಸಂಪರ್ಲ ರಸ್ತೆ ಅಭಿವೃದ್ಧಿ ಮತ್ತು ಐದು ಲಕ್ಷದಲ್ಲಿ ನಾಲ್ಕೇರಿ- ಹರಿಹರ ಸಂಪರ್ಕ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ.
ಸಂಸದರ ನಾಲ್ಕು ಲಕ್ಷ ಅನುದಾನದಲ್ಲಿ ಅಲ್ಲುಮಾಡ ಕುಟುಂಬಸ್ಥರ ಮನೆ ರಸ್ತೆ ಅಭಿವೃದ್ಧಿ, ಮುಕ್ಕಾಟಿರ ಕುಟುಂಬಸ್ಥರ ಮನೆ ರಸ್ತೆ ಅಭಿವೃದ್ಧಿ, ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಮುಂದುವರಿದ ಕಾಮಗಾರಿ ಅಭಿವೃದ್ಧಿಗೊಳ್ಳಲಿದೆ.
ಗ್ರಾ.ಪಂ ಅಧ್ಯಕ್ಷ ಅಲ್ಲುಮಾಡ ಮುತ್ತಪ್ಪ, ಸ್ಥಾನೀಯ ಸಮಿತಿ ಅಧ್ಯಕ್ಷ ಅಲ್ಲುಮಾಡ ಪ್ರಕಾಶ್, ತಾಲೂಕು ಬಿಜೆಪಿ ಸಾಮಾಜಿಕ ಜಾಲತಾಣ ಅಧ್ಯಕ್ಷ ಚೆರಿಯಪಂಡ ಸಚಿನ್, ಪ್ರಮುಖರಾದ ಬೂಡಿಯಂಗಡ ನಾಚಪ್ಪ, ಮುಕುಂದ, ಕೀರ್ತಿ, ಶರತ್, ಮುಕ್ಕಾಟಿರ ಆದಿತ್ಯ, ಕಾಡ್ಯಮಾಡ ರಾಬಿನ್, ಜಗದೀಶ್, ದೀಪು, ವೀರಾಜಪೇಟೆ ಟೌನ್ ಬ್ಯಾಂಕ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ ಹಾಜರಿದ್ದರು.
ಮಾಯಮುಡಿ
*ಗೋಣಿಕೊಪ್ಪಲು : ಮಾಯಮುಡಿ ಗ್ರಾ.ಪಂ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾರ್ಯ ಹಾಗೂ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ನೆರೆವೇರಿಸಿದರು.
ಸುಮಾರು ಎರಡು ಕೋಟಿ ಅನುದಾನವನ್ನು ಮಾಯಮುಡಿ ಗ್ರಾ,ಪಂ ವ್ಯಾಪ್ತಿಗೆ ಮೀಸಲಿರಿಸಿದ್ದು, ರಸ್ತೆ ಹಾಗೂ ಸಮುದಾಯ ಭವನ ಪರಿಶಿಷ್ಠ ಕಾಲೋನಿ ಅಭಿವೃದ್ಧಿಗಳು ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ಕೊಡಗು ವಿಶೇಷ ಪ್ಯಾಕೇಜ್‍ನ ಮೂವತ್ತು ಲಕ್ಷ ಅನುದಾನದಲ್ಲಿ, ಹತ್ತು ಲಕ್ಷ ವೆಚ್ಚದಲ್ಲಿ, ಬಲ್ಯಂಡ ಅಂಬಲ ರಸ್ತೆ ಅಭಿವೃದ್ಧಿ, ಹತ್ತು ಲಕ್ಷದಲ್ಲಿ ಮಾಯಮುಡಿ ಮಡಿಕೆಬೀಡು, ಹೊನ್ನಿಕೊಪ್ಪ, ಕಿರುಗೂರು ಲಿಂಕ್ ರಸ್ತೆ, ಹತ್ತು ಲಕ್ಷದಲ್ಲಿ ಮಾಯಮುಡಿ ಬಾಳಾಜಿ, ಜೋಡುಬೀಟಿ ಲಿಂಕ್ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದು ಮಾಹಿತಿಯಿತ್ತರು.
ಮೂವತ್ತು ಲಕ್ಷ ಅನುದಾನದಲ್ಲಿ ಮಲ್ನಾಡ್ ಯೋಜನೆಯಡಿ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಮಳೆ ಹಾನಿ ದುರಸ್ತಿಯಲ್ಲಿ 15 ಲಕ್ಷ ಅನುದಾನದಲ್ಲಿ ಬಾಳಾಜಿ ಜೋಡುಬೀಟಿ ಸಂಪರ್ಕ ರಸ್ತೆ ದುರಸ್ತಿ ನಡೆಯಲಿದೆ ಶಾಸಕರ ಅನುದಾನದ ಮೂರು ಲಕ್ಷದಲ್ಲಿ ಧನುಗಾಲ ಗ್ರಾಮದ ಬೆಮ್ಮತ್ತಿ ಮಠ ಸಂಪರ್ಕ ರಸ್ತೆ ಕಾಮಗಾರಿ ನಡೆಯಲಿದೆ ಎಂದರು.
ಪರಿಶಿಟ ಕಾಲೋನಿ ಅಭಿವೃದ್ಧಿ 11 ಲಕ್ಷ ವೆಚ್ಚದಲ್ಲಿ ನಡೆಯಲಿದ್ದು ಸಂಸದರ ಹತ್ತು ಲಕ್ಷ ಅನುದಾನದಲ್ಲಿ ಧನುಗಾಲ, ಮುರಡೇಶ್ವರ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣ, ಕಮಟೆ ಗ್ರಾಮದ ಶ್ರೀ ಮಹದೇಶ್ವರ ದೇವಸ್ಥಾನ ಸಂಪರ್ಕ ರಸ್ತೆ, ಮಾಯಮುಡಿ ಬಸವೇಶ್ವರ ಯುವಕ ಸಂಘದ ಸಮುದಾಯ ಭವನ ಮುಂದುವರಿದ ಕಾಮಗಾರಿಗಳು ನಡೆಯಲಿದೆ.
ಜಿ.ಪಂ ಸದಸ್ಯ ಬಾನಂಡ ಪ್ರಥ್ಯು, ಸ್ಥಾನೀಯ ಸಮಿತಿ ಅಧ್ಯಕ್ಷ ಲೋಕೇಶ್, ಗ್ರಾ.ಪಂ ಸದಸ್ಯರುಗಳಾದ ಚಪ್ಪುಡೀರ ಪ್ರದೀಪ್, ಆಪ್ಪಟೀರ ಪ್ರದೀಪ್, ವಿ.ಎಸ್.ಎಸ್.ಎನ್. ನಿದೇರ್ಶಕ ಪ್ರತಾಪ್, ಮುಕ್ಕಂಡ ಕಾಳಪಂಡ ಸುದೀರ್, ಗ್ರಾಮಸ್ಥ ಮಣಿಪಂಡ ಸುರೇಶ್, ಬೋಪಣ್ಣ, ಗುತ್ತಿಗೆದಾರ ತನು, ಅಣ್ಣಪ್ಪ ಹಾಜರಿದ್ದರು.
ಹುದಿಕೇರಿ
*ಗೋಣಿಕೊಪ್ಪಲು : ಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಒಂದು ಕೋಟಿ ಐದು ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀಕರಣ, ಸಮುದಾಯ ಭವನ, ಹಾಗೂ ಕೊಡವ ಸಮಾಜದ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶಾಸಕರ ಕೆ,ಜಿ. ಬೋಪಯ್ಯ ಭೂಮಿ ಪೂಜೆ ನೆರೆವೇರಿಸಿದರು.
30 ಲಕ್ಷ ಅನುದಾನದಲ್ಲಿ ತಲಾ 15 ಲಕ್ಷ ವೆಚ್ಚದಲ್ಲಿ ಮಳೆ ಹಾನಿ ದುರಸ್ಥಿಯಡಿ ಕೋಣಗೇರಿ, ಬೆಳ್ಳೂರು ರಸ್ತೆ ಮತ್ತು ಕಳ್ಳತೋಡು ರಸ್ತೆ ಅಭಿವೃದ್ಧಿ ಮತ್ತು ಮೂರು ಲಕ್ಷದಲ್ಲಿ ಹೈಸ್ಕೂಲು ಬಾನಂಗಡ ಚಕ್ಕೇರ ಕುಟುಂಬಸ್ಥರ ರಸ್ತೆ, 1.88 ಲಕ್ಷದಲ್ಲಿ ಮಾರ್ಕೇಟ್ ಹೈಗುಂದ ಸಂಪರ್ಕ ರಸ್ತೆ ಮತ್ತು ಶಾಸಕರ ಅನುದಾನದ ಮೂರು ಲಕ್ಷದಲ್ಲಿ ಹುದಿಕೇರಿ ಕೊಡವ ಸಮಾಜದಲ್ಲಿ ಸಮುದಾಯ ಭವನ ನಿರ್ಮಾಣ ಮತ್ತು ಎರಡು ಲಕ್ಷದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದರು.
ಕೊಡಗು ವಿಶೇಷ ಪ್ಯಾಕೇಜ್ ಅಡಿಯಲ್ಲಿ 65 ಲಕ್ಷ ಅನುದಾನದಲ್ಲಿ, ಬೇಗೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನ ಅಂಬಲ ಮುಂಭಾಗ ಮುಖ್ಯ ರಸ್ತೆ ಅಭಿವೃದ್ಧಿ ಹತ್ತು ಲಕ್ಷದಲ್ಲಿ ನಡೆಯಲಿದೆ. ಹೈಸೊಡ್ಲೂರು ಟೀ ಎಸ್ಟೇಟ್ ಮುಖ್ಯ ರಸ್ತೆ ಡಾಂಬರೀಕರಣ ಹತ್ತು ಲಕ್ಷ, ಬೇಗೂರು ಬೆಂಜಂಡ ಸಾರ್ವಜನಿಕ ರಸ್ತೆ ಅಭಿವೃದ್ಧಿ ಐದು ಲಕ್ಷ, ಬೆಳ್ಳೂರು ತೂಚಮಕೇರಿ ಸಂಪರ್ಕ ರಸ್ತೆ ಹತ್ತು ಲಕ್ಷ, ಹೈಸೊಡ್ಲೂರು ಹೈಗುಂದ ರಸ್ತೆ ಹತ್ತು ಲಕ್ಷ, ಬೇಗೂರು ಕುಂದು ಭಗವತಿ ರಸ್ತೆ ಮತ್ತು ಬೇಗೂರು ಒಣಿಲ್ ರಸೆ ಐದು ಲಕ್ಷ, ಹೈಸೊಡ್ಲೂರು ಮಹದೇವರ ದೇವಸ್ಥಾನ ರಸ್ತೆ ಐದು ಲಕ್ಷ, ಹುದಿಕೇರಿ ಕಳ್ಳತೋಡು ಸಂಪರ್ಕ ರಸ್ತೆ ಹತ್ತು ಲಕ್ಷ ಒಟ್ಟು ಒಂದು ಕೋಟಿ ಐದು ಲಕ್ಷದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದರು.
ಶಾಸಕರಿಂದ ಸಲಹೆ
ವೀರಾಜಪೇಟೆ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯುವ ಸಂದರ್ಭ ರಸ್ತೆಬದಿಯಿರುವ ತೋಟದ ಮಾಲೀಕರು ರಸ್ತೆಗೆ ಜಾಗ ನೀಡಿ ಸಹಕರಿಸಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ವೀರಾಜಪೇಟೆ ಕಾವೇರಿ ಕಾಲೇಜು ಎದುರಿನಿಂದ ಕಿರುಮಕ್ಕಿ ಹಾಗೂ ಕಂಡಿಮಕ್ಕಿ ಗ್ರಾಮಕ್ಕೆ ರಸ್ತೆಗೆ ರೂ. 35 ಲಕ್ಷದ ಅನುದಾನದಲ್ಲಿ ಡಾಂಬರಿಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು ಮಾತನಾಡಿ ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. 35 ಲಕ್ಷ ಅನುದಾನದಲ್ಲಿ ನಡೆಯಲಿದೆ ಗ್ರಾಮಸ್ಥರು ಸ್ಥಳೀಯ ನಿವಾಸಿಗಳು ಕಾಮಗಾರಿ ನಡೆಯುವ ಸಂದರ್ಭ ಕಳಪೆಯಾಗದಂತೆ ಎಚ್ಚರವಹಿಸಿ ನೋಡಿಕೊಳ್ಳುವದು ಉತ್ತಮ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾ. ಪಂ. ಸದಸ್ಯ ಬಿ.ಎಂ.ಗಣೇಶ್, ಆರ್ಜಿ ಗ್ರಾ.ಪಂ. ಸದಸ್ಯ ಉದಯಕುಮಾರ್, ಸ್ಥಳಿಯ ಗ್ರಾಮಸ್ಥರಾದ ಕೀತಿಯಂಡ ಅಪ್ಪಾಜಿ, ಕಾಯಪಂಡ ಟಾಟು ಚಂಗಪ್ಪ, ಕರ್ತಚೀರ ರಮೇಶ್, ಕುಪ್ಪಂಡ ರಾಜು, ಮದುದೇವಯ್ಯ, ಗುತ್ತಿಗೆದಾರ ಹರ್ಷಕುಮಾರ್ ಹಾಗೂ ಗ್ರಾಮಸ್ಥರುಗಳು ಇದ್ದರು.
ಸ್ಥಾನೀಯ ಸಮಿತಿ ಅಧ್ಯಕ್ಷ ಮಲ್ಲಂಗಡ ರಾಜ, ಬೊಳ್ಳುಮಾಡ ಧನು, ಸ್ಥಾನೀಯ ಸಮಿತಿ ಕಾರ್ಯದರ್ಶಿ ದಿನೇಶ್ ಚಿಟ್ಟಿಯಪ್ಪ, ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷ ಬಾನಂಗಡ ಅರುಣ್, ಮಲ್ಲಂಡ ರಂಜಿ, ನೂರೇರ ಮನೋಹರ್, ಇಟ್ಟೀರ ಗಿರಿ ಮೊದಲಾದವರು ಹಾಜರಿದ್ದರು.
ಕೆ. ಬಾಡಗ
*ಗೋಣಿಕೊಪ್ಪಲು : ಕೆ.ಬಾಡಗ ಗ್ರಾ.ಪಂ ವ್ಯಾಪ್ತಿಯಲ್ಲಿ ಒಂದು ಕೋಟಿ ಮೂವತ್ತು ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಮಳೆ ಹಾನಿ ದುರಸ್ತಿ, ಕೊಡಗು ಪ್ಯಾಕೇಜ್ ಶಾಸಕರ ಅನುಧಾನದಲ್ಲಿ ಅಭಿವೃದ್ಧಿ ನಡೆಯಲಿದ್ದು ಶಾಸಕರು ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮಳೆ ಹಾನಿ ದುರಸ್ತಿಯಲ್ಲಿ 15 ಲಕ್ಷ ವೆಚ್ಚದಲ್ಲಿ ಕರಿಯಚ್ಚಿ ಮನೆ ರಸ್ತೆ ಮತ್ತು ಶಾಸಕರ ಅನುದಾನದಲ್ಲಿ ಹೇರ್ಮಾಡು, ಕಾಕೂರು ಲಿಂಕ್ ರಸ್ತೆ 3.50 ಲಕ್ಷ ಹಾಗೂ ಹೇರ್ಮಾಡು ಮುಖ್ಯ ರಸ್ತೆ ಮೂರು ಲಕ್ಷ ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿದೆ. ಲೋಕೋಪಯೋಗಿ ಇಲಾಖೆಯಿಂದ ಕೊಡಗು ವಿಶೇಷ ಪ್ಯಾಕೇಜ್ ಅಡಿಯಲ್ಲಿ ಆಲಂದೋಡು ಪೈಸೇರಿ ಸಂಪರ್ಕ ರಸ್ತೆ ಐದು ಲಕ್ಷ ವೆಚ್ಚದಲ್ಲಿ ಮತ್ತು ಹೇರ್ಮಾಡು ಸಂಪರ್ಕ ರಸ್ತೆ ಅಭಿವೃದ್ಧಿ ಐದು ಲಕ್ಷ ಅನುದಾನದಲ್ಲಿ, ಮುಖ್ಯ ರಸ್ತೆಯಿಂದ ಕರಿಯಚ್ಚಿ ಮನೆ ಸಂಪರ್ಕ ರಸ್ತೆ ಐದು ಲಕ್ಷ ಮೊತ್ತದಲ್ಲಿ ಡಾಂಬರೀಕರಣ ನಡೆಯಲಿದೆ. ಹಾಗೂ ಸಿ.ಎಂ.ಜಿ.ಆರ್.ವೈ ಯೋಜನೆಯಡಿ 83 ಲಕ್ಷದಲ್ಲಿ ಕೆ.ಬಾಡಗ ನಾಲ್ಕೇರಿ ಮುಖ್ಯ ರಸ್ತೆ ಮರು ಡಾಂಬರೀಕರಣ ನಡೆಯಲಿದೆ ಎಂದರು.
ಗ್ರಾ.ಪಂ ಸದಸ್ಯೆ ಕಟ್ಟೇರ ಕುಮಾರಿ, ಜಿ.ಪಂ ಮಾಜಿ ಅಧ್ಯಕ್ಷೆ ಚೋಡುಮಾಡ ಶರಿನ್ ಸುಬ್ಬಯ್ಯ, ಸ್ಥಾನೀಯ ಸಮಿತಿ ಅಧ್ಯಕ್ಷ ಪೆಮ್ಮಣಮಾಡ ನವೀನ್, ವಿ.ಎಸ್.ಎಸ್.ಎನ್. ಅಧ್ಯಕ್ಷ ಹೊಟ್ಟೆಂಗಡ ರಮೇಶ್, ಪ್ರಮುಖರಾದ ಕುಡಿಯಂಗಡ ರಾಜ ವಿನೋದ್, ಸುಜನ್, ರಮೇಶ್, ಬೊಳ್ಳೇರ ವಿನು ಅಪ್ಪಯ್ಯ, ಚೆಪ್ಪುಡಿರ ರೂಪ, ಗುತ್ತಿಗೆದಾರ ಇ.ವೈ. ಸುನಿಲ್ ಸುಬ್ಬಯ್ಯ ಹಾಜರಿದ್ದರು.
ಪೊನ್ನಂಪೇಟೆ
*ಗೋಣಿಕೊಪ್ಪಲು: ಪೊನ್ನಂಪೇಟೆ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಡಾಂಬರೀಕರಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ಪೊನ್ನಂಪೇಟೆ ಮುಖ್ಯ ರಸ್ತೆಯಿಂದ ನೆಹರು ನಗರ ಸಂಪರ್ಕ ರಸ್ತೆಗೆ ಹತ್ತು ಲಕ್ಷ ಅನುದಾನ ಕಾಟ್ರುಕೊಲ್ಲಿ, ಹುದೂರು ಸಂಪರ್ಕ ರಸ್ತೆ ರೂ. 10 ಲಕ್ಷ, ಪೊನ್ನಂಪೇಟೆ ಪಟ್ಟಣದಿಂದ ಸಾಯಿಶಂಕರ್ ಶಾಲೆ ರಸ್ತೆ ಅಭಿವೃದ್ಧಿ ರೂ.10 ಲಕ್ಷ, ಜೋಡುಬೀಟಿ ಸಿ.ಐ.ಟಿ ಕಾಲೇಜು ಸಂಪರ್ಕ ರಸ್ತೆ ಅಭಿವೃದ್ಧಿ ರೂ.10 ಲಕ್ಷ ಸೇರಿದಂತೆ ರೂ. 50 ಲಕ್ಷದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಶಾಸಕರ ಅನುದಾನದಲ್ಲಿ ನಡೆಯಲಿದೆ.
ಮಳೆ ಹಾನಿ ಪರಿಹಾರದಿಂದ ಪೊನ್ನಂಪೇಟೆ ಕೊಡವ ಸಮಾಜ ಮುಂಭಾಗದಿಂದ ಮತ್ತೂರು ಗ್ರಾಮ ಸಂಪರ್ಕ ರಸ್ತೆಗೆ ರೂ.15 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯಲಿದೆ. ಸ್ಪೋಟ್ರ್ಸ್ ಕ್ಲಬ್ ಮುಖಾಂತರ ವಸಂತ ನಗರ ರಸ್ತೆಗೆ ರೂ.1 ಲಕ್ಷ ತ್ಯಾಗರಾಜ ರಸ್ತೆ, ಐತಪ್ಪ ರಸ್ತೆಗೆ ರೂ.1 ಲಕ್ಷ ಹಾಗೂ ಗಣಪತಿ ನಗರ ಸಂಪರ್ಕ ರೂ.1 ಲಕ್ಷ ಅನುದಾನದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯಲಿದೆ ಎಂದು ಶಾಸಕರು ಮಾಹಿತಿ ನೀಡಿದರು. ಸಂಸದರ ಅನುದಾನದಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ರೂ.2 ಲಕ್ಷ, ಕೊಡವ ಸಮಾಜ ನಿರ್ಮಾಣಕ್ಕೆ ರೂ.5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ವರ್ತಕರ ಪ್ರಕೋಷ್ಠದ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಬೀಮಯ್ಯ, ಕಾರ್ಯದರ್ಶಿ ಲಾಲ ಬೀಮಯ್ಯ, ಖಜಾಂಜಿ ಶ್ಯಾಮ್ ಪೂಣಚ್ಚ, ಪೊನ್ನಂಪೇಟೆ ಎ.ಪಿ.ಸಿ.ಎಂ.ಸಿ ಅಧ್ಯಕ್ಷ ಮುದ್ದಿಯಡ ಮಂಜು, ಗ್ರಾ.ಪಂ ಅಧ್ಯಕ್ಷೆ ಮೂಕಳೇರ ಸುಮಿತ,ಸದಸ್ಯರುಗಳಾದ ಅಮ್ಮತ್ತೀರ ಸುರೇಶ್, ಮೂಕಳೇರ ಲಕ್ಷ್ಮಣ, ಕಾವ್ಯಮಧು ಪ್ರಮುಖರಾದ ದಿನೇಶ್ ಚಿಟ್ಟಿಯಪ್ಪ, ಪಂದ್ಯಂಡ ಹರೀಶ್, ಹಿಂದುಳಿದ ವರ್ಗ ಅಧ್ಯಕ್ಷ ಚಂದ್ರಶೇಖರ್, ಜಿ.ಪಂ. ಮಾಜಿ ಸದಸ್ಯ ಕುಶಲಾಪ್ಪ, ಮಧು ದೇವಯ್ಯ ಸೇರಿದಂತೆ ಹಲವರು ಹಾಜರಿದ್ದರು. -ಎನ್.ಎನ್. ದಿನೇಶ್, ರಜಿತಾ ಕಾರ್ಯಪ್ಪ