ಮಡಿಕೇರಿ, ಫೆ. 20: ಕುಟ್ಟ ಗ್ರಾಮದಲ್ಲಿ ನೂತನವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಆರಂಭಗೊಂಡಿದೆ. ಗೋಣಿಕೊಪ್ಪಲಿನ ಕಾಮತ್ ಗ್ರೂಪ್ ಅನುಗ್ರಹ ಸರ್ವೀಸ್ ಸ್ಟೇಷನ್ ಹೆಸರಿನಲ್ಲಿ ಪೆಟ್ರೋಲ್ ಬಂಕ್ ಪ್ರಾರಂಭಿಸಿದ್ದಾರೆ.

ಕುಟ್ಟ ಜನತೆಯ ಬಹುದಿನದ ಪೆಟ್ರೋಲ್ ಮತ್ತು ಡೀಸೆಲ್ ಸಮಸ್ಯೆಯು ಇಂದು ಕೊನೆಗೊಂಡಿದೆ ಎಂದು ನೂತನ ಪೆಟ್ರೋಲ್ ಬಂಕ್‍ನ ಉದ್ಘಾಟಿಸಿದ ಪೊನ್ನಂಪೇಟೆಯ ರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ಬೋಧಸ್ವರೂಪಾನಂದಜಿ ನುಡಿದರು.

ಅನುಗ್ರಹ ಸರ್ವಿಸ್ ಸ್ಟೇಷನ್ ವ್ಯವಸ್ಥಾಪಕ ಪಾಲುದಾರ ಎಂ.ಕೆ. ಚಂದನ್ ಕಾಮತ್ ಎಲ್ಲರನ್ನೂ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಕಾಫಿ ಬೆಳೆಗಾರ ಚಕ್ಕೆರ ಧರ್ಮಜ, ಉದ್ಯಮಿ ಮಚ್ಚಮಾಡ ಅನೀಶ್ ಮಾದಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಟ್ಟೆಂಗಡ ಉತ್ತಪ್ಪ, ಸದಸ್ಯರಾದ ಹೆಚ್. ರಾಮಕೃಷ್ಣ, ವಿಜಯ, ಅರುಣ್ ಕಂದಪ್ಪ, ಅಯ್ಯಪ್ಪ ಎಂ.ಸಿ. ಸುಬ್ಬಯ್ಯ, ಚಕ್ಕೇರ ಗಣಪತಿ, ಹೊಟ್ಟೆಂಗಡ ತಿಮ್ಮಯ್ಯ, ಕುಟ್ಟ ಚೇಂಬರ್ ಅಧ್ಯಕ್ಷ ಮುಕ್ಕಾಟಿರ ನವೀನ್, ಕಾಮತ್ ಗ್ರೂಪ್ ಪಾಲುದಾರ ಎಂ.ಪಿ. ಕೇಶವ ಕಾಮತ್, ಎಂ.ಪಿ. ಪ್ರಮೋದ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.