ಶನಿವಾರಸಂತೆ, ಫೆ. 20: ಶನಿವಾರಸಂತೆಯ ಬೈಪಾಸ್ ರಸ್ತೆಯಲ್ಲಿರು ರಾಘವೇಂದ್ರ ಮೆಡಿಕಲ್ ಮಾಲೀಕ ವಸಂತ್ ಅವರ ಮನೆಯಲ್ಲಿ 38 ಸಾವಿರ ಹಣ ಮತ್ತು 9ಗ್ರಾಂ ಚಿನ್ನ ಕಳವು ಮಾಡಲಾಗಿದ್ದು, ಪಕ್ಕದ ಸತೀಶ್ ಅವರ ಮನೆಯಲ್ಲಿಯೂ 32 ಸಾವಿರ ಹಣ ಮತ್ತು ಒಂದು ಜೊತೆ ಓಲೆ ಕಳ್ಳತನ ನಡೆದಿದೆ. ಸ್ಥಳಕ್ಕೆ ಠಾಣಾಧಿಕಾರಿ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು.