ಕುಶಾಲನಗರ, ಫೆ. 20: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ದೇವಾಲಯದಲ್ಲಿ ವಿಶೇಷ ಹೋಮ-ಹವನಗಳು ನಡೆದವು. ವೇ.ಬ್ರ. ಸುಬ್ಬರಾಮ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ಜರುಗಿದವು.

ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಮಡಿಕೇರಿಯ ಪ್ರಮೋದ್ ಎಂಬವರಿಗೆ ಈ ಸಂದರ್ಭ ಕನ್ನಿಕಾ ಪರಮೇಶ್ವರಿ ಟ್ರಸ್ಟ್‍ನ ಬೆಂಗಳೂರು ಮತ್ತು ಕುಶಾಲನಗರ ವತಿಯಿಂದ ಸಹಾಯ ಹಸ್ತ ನೀಡಲಾಯಿತು.

ಈ ಸಂದರ್ಭ ಪ್ರಮುಖರಾದ ಕೆ.ಜೆ. ಚಿನ್ನಸ್ವಾಮಿ, ವಿ.ಪಿ. ನಾಗೇಶ್, ಜಿ.ಕೆ. ಅಶ್ವತ್ಥ್, ವಿ.ಎನ್. ವಸಂತಕುಮಾರ್ ಮತ್ತು ಆರ್ಯವೈಶ್ಯ ಕುಲಬಾಂಧವರು ಇದ್ದರು.