ಗೋಣಿಕೊಪ್ಪ ವರದಿ, ಫೆ. 19: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಕಾರ್ಯ ಕ್ರಮದ ಮೆರವಣಿಗೆಯಲ್ಲಿ ಕೊಡಗಿನ ಕಲಾವಿದರು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಡಾ. ತೀತರಮಾಡ ದೇವಕ್ಕಿ ಮತ್ತು ಮಲ್ಲಮಾಡ ಶ್ಯಾಮಲ ಅವರ ಮುಂದಾಳತ್ವದಲ್ಲಿ ಕೊಡಗಿನಿಂದ 53 ಕಲಾವಿದರು ಭಾಗವಹಿಸಿದ್ದರು.

ದುಡಿಕೊಟ್ಟ್ ಪಾಟ್, ಉಮ್ಮತ್ತಾಟ್, ಕೋಲಾಟ್, ಕತ್ತಿಯಾಟ್ ಅಲ್ಲದೆ ಕೊಡವ ಮದುವೆಯ ಆಚರಣೆ ಪ್ರದರ್ಶನ ನೀಡುವದರ ಮೂಲಕ ಗಮನಸೆಳೆದರು.