*ಗೋಣಿಕೊಪ್ಪಲು, ಫೆ. 19: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಹಣ್ಣು ತರಕಾರಿ ಖರೀದಿ ಕೇಂದ್ರಕ್ಕೆ (ಹಾಪ್‍ಕಾಮ್ಸ್) ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ರೈತರು ಬೆಳೆದ ಹಣ್ಣು, ತರಕಾರಿ ಬೆಳೆಗಳಿಗೆ ಸೂಕ್ತ ಬೆಲೆ ದೊರಕುವಂತೆ ಮತ್ತು ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಹಣ್ಣು, ತರಕಾರಿ ಸಿಗುವಂತೆ ಮಾರುಕಟ್ಟೆ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಹಾಪ್‍ಕಾಮ್ಸ್ ಶಾಖೆಯನ್ನು ತೆರೆಯಲಾಗಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಆದೆಂಗಡ ವಿನು ಚಂಗಪ್ಪ, ಉಪಾಧ್ಯಕ್ಷ ಚಿಯಕ್‍ಪೂವಂಡ ಸುಬ್ರಮಣಿ, ಕಾರ್ಯದರ್ಶಿ ಹೆಚ್.ಸಿ.ಎಂ. ರಾಣಿ, ನಿರ್ದೇಕರುಗಳಾದ ಗುಮ್ಮಟಿರ ಕಿಲನ್ ಗಣಪತಿ, ಮಾಚಿಮಂಡ ಸುವಿನ್ ಗಣಪತಿ, ಹೆಚ್.ಎನ್. ಮೋಹನ್ ರಾಜ್, ಟೌನ್ ಬ್ಯಾಂಕ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಹಾಪ್‍ಕಮ್ಸ್ ನಿರ್ದೇಶಕ ಕಾಯಪಂಡ ಟಾಟಾ ಚಂಗಪ್ಪ ಹಾಜರಿದ್ದರು.