ಚೆಟ್ಟಳ್ಳಿ, ಫೆ. 19: ಮರಡಿಯೂರಿನ ನೂತನ ಹೋಲಿ ಕ್ರಾಸ್ ಚರ್ಚ್‍ನ ಉದ್ಘಾಟನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮೈಸೂರಿನ ಬಿಷಪ್ ಡಾ. ವಿಲಿಯಂ ಆಶೀರ್ವ ಚನ ನೀಡಿದರು. ನಿವೃತ್ತ ಬಿಷಪ್ ಡಾ. ತೋಮಸ್ ವಾಳಪ್ಪಳ್ಳಿ ಉದ್ಘಾಟನೆ ಯನ್ನು ನೆರವೇರಿಸಿದರು.

ನಂತರ ಭಕ್ತಾದಿಗಳಿಗೆ ಪ್ರಭೋಧನೆಯನ್ನು ನೀಡಿದ ಡಾ. ವಿಲಿಯಮಂ ಬಲಿಪೂಜೆ ಯನ್ನು ನೆರವೇರಿಸಿದರು. ಬಳಿಕ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ನಂತರ ಭಕ್ತಾದಿಗಳು ಏಸುವಿನ ಗಾಯನಗಳನ್ನು ಹಾಡಿದರು.

ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಚರ್ಚ್‍ಗೆ ದಾನ ಮಾಡಿದವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಬಳಿಕ ಪವಿತ್ರ ಪ್ರಸಾದ ವಿನಿಯೋಗದ ನಂತರ ಸರ್ವ ಭಕ್ತಾದಿಗಳು ಸಹಭೋಜನದಲ್ಲಿ ಪಾಲ್ಗೊಂಡರು.

ಈ ಸಂದರ್ಭ ಫಾ. ವಿನ್ಸೆಂಟ್ ಚಾನ್ಸೆಲರ್, ಡಾ. ಆರೋಗ್ಯ ಸ್ವಾಮಿ ಡೀನ್, ಹಿಂದಿನ ಗುರುಗಳಾದ ಮುತ್ತು ಡೀನ್, ಫಾ. ಆಂಜೆಲೋ ಪಾಯಸ್ಸ್, ಶ್ರೇಷ್ಠ ಗುರು ಸಿ. ರಾಯಪ್ಪ, ಚರ್ಚಿನ ಗುರುಗಳಾದ ಸಿ.ಜೆ. ಜೋಮಿ ಹಾಗೂ 60 ಗುರುಗಳು, ಊರಿನ ಪ್ರಮುಖರಾದ ಜಾರ್ಜ್, ವರ್ಗೀಸ್, ಪಳಣಿಸ್ವಾಮಿ ಹಾಗೂ ಭಕ್ತಾದಿಗಳು ಹಾಜರಿದ್ದರು.