ಮಡಿಕೇರಿ, ಫೆ. 19: ವೀರಾಜಪೇಟೆ ಎಸ್.ಎಸ್. ರಾಮಮೂರ್ತಿ ರಸ್ತೆಯ ಎಕ್ಸಲೆನ್ಸ್ ಲರ್ನಿಂಗ್ ಸಲ್ಯೂಷನ್ ಸಂಸ್ಥೆಯಿಂದ ಕೇಂದ್ರ ಸರಕಾರದ ಪ್ರಧಾನಮಂತ್ರಿ ಉದ್ಯೋಗ ಕೌಶಲ್ಯ ತರಬೇತಿ ಹಾಗೂ ಸಹಾಯ ಕಾರ್ಯಕ್ರಮ ಉಚಿತವಾಗಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಆಸಕ್ತ ಅಭ್ಯರ್ಥಿಗಳು 18 ರಿಂದ 35 ವರ್ಷ ವಯೋಮಿತಿ ಯೊಳಗಿದ್ದು, ಅಸಿಸ್ಟೆಂಟ್ ಎಲೆಕ್ಟ್ರಿಷಿಯನ್, ರಿಟೇಲ್ ಸೇಲ್ಸ್ ಅಸೋಸಿಯೇಟ್ ಡೊಮೈಸ್ಟಿಕ್ ಐಟಿ ಹೆಲ್ಪ್‍ಡೆಸ್ಟ್ ಅಟೆಂಡೆಂಟ್ ತರಬೇತಿಯನ್ನು ಉಚಿತವಾಗಿ ಪಡೆಯಬಹುದಾಗಿದ್ದು, 08274-298831 ಗೆ ಸಂಪರ್ಕಿಸಬಹುದಾಗಿದೆ.