ಭಾಗಮಂಡಲ, ಫೆ. 19: ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕøತಿಕ ಅಕಾಡೆಮಿ ಮತ್ತು ಭಾಗಮಂಡಲ ನಾಡು ಗೌಡ ಸಮಾಜ ಇವರ ವತಿಯಿಂದ ಭಾಗಮಂಡಲದಲ್ಲಿ ಜಿಲ್ಲಾಮಟ್ಟದ ಅರೆಭಾಷೆ ಸಾಂಸ್ಕøತಿಕ ಸಿರಿ ಕಾರ್ಯಕ್ರಮ ನಡೆಸುವ ಕುರಿತು ತೀರ್ಮಾನಿಸಲಾಯಿತು.

ಭಾಗಮಂಡಲದ ಗೌಡ ಸಮಾಜದಲ್ಲಿ ಈ ಕುರಿತು ಪೂರ್ವಭಾವಿ ಸಭೆ ನಡೆಯಿತು. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಲೋಕಸಭೆ ಚುನಾವಣೆ ಬಳಿಕ ಎರಡು ದಿನಗಳ ಕಾಲ ಅದ್ಧೂರಿ ಕಾರ್ಯಕ್ರಮ ನಡೆಸುವ ಕುರಿತು ತೀರ್ಮಾನಿಸ ಲಾಯಿತು. ಕಾರ್ಯಕ್ರಮವನ್ನು ಭಾಗಮಂಡಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಭಾಗಮಂಡಲ - ಕರಿಕೆ ಜಂಕ್ಷನ್‍ನಿಂದ ಸಾಂಸ್ಕøತಿಕ ಮೆರವಣಿಗೆ ನಡೆಯಲಿದ್ದು, ಎರಡು ದಿನದ ಕಾರ್ಯಕ್ರಮದಲ್ಲಿ ಮೊದಲನೇ ದಿನ ವಿವಿಧ ಕ್ರೀಡಾ ಕಾರ್ಯಕ್ರಮ ನಡೆಯಲಿದ್ದು, ಮರುದಿನ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವದು. ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ ವಹಿಸಿದ್ದರು. ಅಕಾಡೆಮಿ ನಿರ್ದೇಶಕರಾದ ಕಡ್ಲೇರ ತುಳಸಿ ಮೋಹನ್, ಬಿ.ಆರ್. ಜೋಯಪ್ಪ, ಪ್ರಮುಖರಾದ ಹೊಸೂರು ಸತೀಶ್‍ಕುಮಾರ್, ನಿಡ್ಯಮಲೆ ರವಿ, ಕುದುಪಜೆ ಪ್ರಕಾಶ್, ಹಾಗೂ ಜನಾಂಗ ಬಾಂಧವರು ಪಾಲ್ಗೊಂಡಿದ್ದರು.