ಮಡಿಕೇರಿ, ಫೆ. 17: ಭಾರತದ ಸಾರ್ವಭೌಮತ್ವದೊಂದಿಗೆ ಏಕತೆಗೆ ಭಂಗವೊಡ್ಡುತ್ತಿರುವ ವಿದ್ರೋಹಿಗಳಿಗೆ; ದೇಶದೊಳಗೆ ಆಸರೆಯೊಂದಿಗೆ ಆರ್ಥಿಕ ನೆರವು ನೀಡುತ್ತಿರುವ ವಿಕೃತ ಮಂದಿಯನ್ನು ಮೊದಲಿಗೆ ಸದೆ ಬಡಿಯುವ ಮೂಲಕ, ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸ ಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಆಗ್ರಹಿಸಿದ್ದಾರೆ. ವಿದ್ರೋಹಿಗಳ ದುಷ್ಕøತ್ಯಕ್ಕೆ ಕಾಶ್ಮೀರದಲ್ಲಿ ಬಲಿದಾನಗೈದಿರುವ ಯೋಧರಿಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಶ್ರದ್ಧಾಂಜಲಿಯೊಂದಿಗೆ ಬಿಜೆಪಿ ಆಯೋಜಿಸಿದ ಪ್ರತಿಭಟನಾ ಸಂದರ್ಭ ಅವರು ಮಾತನಾಡುತ್ತಿದ್ದರು.ಈ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇನೆಗೆ ಪೂರ್ಣ ಅಧಿಕಾರ ನೀಡಿರುವದು ಸ್ವಾಗತಾರ್ಹವೆಂದ ಶಾಸಕರು; ಪಾಕಿಸ್ತಾನಕ್ಕೆ ಇತಿಹಾಸದಲ್ಲಿ ಮಡಿಕೇರಿ, ಫೆ. 17: ಭಾರತದ ಸಾರ್ವಭೌಮತ್ವದೊಂದಿಗೆ ಏಕತೆಗೆ ಭಂಗವೊಡ್ಡುತ್ತಿರುವ ವಿದ್ರೋಹಿಗಳಿಗೆ; ದೇಶದೊಳಗೆ ಆಸರೆಯೊಂದಿಗೆ ಆರ್ಥಿಕ ನೆರವು ನೀಡುತ್ತಿರುವ ವಿಕೃತ ಮಂದಿಯನ್ನು ಮೊದಲಿಗೆ ಸದೆ ಬಡಿಯುವ ಮೂಲಕ, ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸ ಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಆಗ್ರಹಿಸಿದ್ದಾರೆ. ವಿದ್ರೋಹಿಗಳ ದುಷ್ಕøತ್ಯಕ್ಕೆ ಕಾಶ್ಮೀರದಲ್ಲಿ ಬಲಿದಾನಗೈದಿರುವ ಯೋಧರಿಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಶ್ರದ್ಧಾಂಜಲಿಯೊಂದಿಗೆ ಬಿಜೆಪಿ ಆಯೋಜಿಸಿದ ಪ್ರತಿಭಟನಾ ಸಂದರ್ಭ ಅವರು ಮಾತನಾಡುತ್ತಿದ್ದರು.ಈ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇನೆಗೆ ಪೂರ್ಣ ಅಧಿಕಾರ ನೀಡಿರುವದು ಸ್ವಾಗತಾರ್ಹವೆಂದ ಶಾಸಕರು; ಪಾಕಿಸ್ತಾನಕ್ಕೆ ಇತಿಹಾಸದಲ್ಲಿ ಸಮಸ್ಯೆಯಾಗಿದ್ದು, ದೇಶ ವಿಭಜನೆ ಯಾದಂದಿನಿಂದಲೂ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿದ್ದು; ಶತ್ರು ದೇಶಕ್ಕೆ ಉತ್ತರ ನೀಡುತ್ತಾ ಬಂದಿದ್ದೇವೆ. ದೇಶದಲ್ಲಿರುವ ವಿಕೃತ ಜನರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಾನೂನಿಗೆ ಹೊರತಾಗಿ ನಡೆದುಕೊಳ್ಳುವವರನ್ನು ಶಿಕ್ಷಿಸು ವಂತಾಗಬೇಕು. ದೇಶದಲ್ಲಿರುವ ಎಲ್ಲಾ ಭಯೋತ್ಪಾದಕ ಅಡಗು ತಾಣಗಳು ಹಾಗೂ ದೇಶದ್ರೋಹಿಗಳಿಗೆ ಆಶ್ರಯ ನೀಡುವಂತವರನ್ನು ಭಯೋತ್ಪಾದಕರಿಗೆ ಸಹಾಯ ಮಾಡುವ ವಿಕೃತ ಮನಸ್ಸಿನವರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ದೇಶ ವಿರಮಿಸಬಾರದು ಎಂದರು.
ಸೇನೆಯ ತಾಕತ್ತು: ನಿವೃತ ಯೋಧ ಮೇಜರ್ ಚಿಂಗಪ್ಪ ಮಾತನಾಡಿ, ಭಾರತೀಯ ಸೇನೆಯ ತಾಕತ್ತು ತೋರಿಸುವ ದಿನ ಬಂದಿದೆ. ಭಾರತೀಯ ಸೇನೆ ಪಾಕ್ನ ಎಲ್ಲಾ ಕುಕೃತ್ಯಗಳನ್ನೂ
(ಮೊದಲ ಪುಟದಿಂದ) ಸಹಿಸಿಕೊಂಡು ಬರುತ್ತಿದ್ದು; ಕಾರ್ಗಿಲ್ ಯುದ್ದ, ಸರ್ಜಿಕಲ್ ಸ್ಟ್ರೈಕ್ ಮೂಲಕ ಅವರಿಗೆ ತಕ್ಕ ಉತ್ತರ ನೀಡುತ್ತಾ ಬಂದಿದೆ. ಇದೀಗ ನಡೆದಿರುವ ಕೃತ್ಯಕ್ಕೆ ಸೇನೆ ತಕ್ಕ ಉತ್ತರ ನೀಡಲಿದ್ದು ಮುಂದೆ ಇಂತಹ ಘಟನೆ ಮರುಕಳಿಸಬಾರದು ಎಂದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ರವಿಕುಶಾಲಪ್ಪ, ರಾಬಿನ್ ದೇವಯ್ಯ, ಬಾಲಚಂದ್ರ ಕಳಗಿ, ಎಸ್.ಕೆ. ಸತೀಶ, ಉಷಾ ದೇವಮ್ಮ, ಕನ್ನಿಕೆ, ಮನು ಮಂಜುನಾಥ್, ಬಿ.ಕೆ. ಅರುಣ್, ಬಿಜೆಪಿ ಮಡಿಕೇರಿ ನಗರಾಧ್ಯಕ್ಷ ಮಹೇಶ್ ಜೈನಿ, ನಗರಸಭಾ ಸದಸ್ಯ ಕೆ.ಎಸ್.ರಮೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ, ಸದಸೆÀ್ಯ ಅನಿತಾ ಪೂವಯ್ಯ, ಬಿ.ಎಂ. ರಾಜೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ, ಎ.ಪಿ.ಎಂ.ಸಿ.ಯ ಕಾಂಗೀರ ಸತೀಶ್, ಬೆಪ್ಪುರನ ಮೇದಪ್ಪ, ಸಿ.ಕೆ. ಬಾಲಕೃಷ್ಣ ಸೇರಿದಂತೆ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.