ಮಡಿಕೇರಿ, ಫೆ. 17: ವಿದ್ಯಾರ್ಥಿಗಳಲ್ಲಿ ಹಲ್ಲಿನ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ವೀರಾಜಪೇಟೆಯ ಕೊಡಗು ದಂತ ವಿಜ್ಞಾನ ಸಂಸ್ಥೆ ತಾ. 19 ರಂದು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ದಂತ ತಪಾಸಣೆ ಹಾಗೂ ಜಾಗೃತಿ ಕಾರ್ಯಾಗಾರವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.