ಗೋಣಿಕೊಪ್ಪ ವರದಿ, ಫೆ. 17 : ಅಸ್ವಸ್ತಗೊಂಡು ಚಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಅಂದಾಜು 45 ವರ್ಷದ ವ್ಯಕ್ತಿಯಾಗಿದ್ದು, ವಾರಸುದಾರರು ಇಲ್ಲದ ಕಾರಣ ಗೋಣಿಕೊಪ್ಪ ಸಮುದಾಯ ಕೇಂದ್ರದ ಶವಗಾರದಲ್ಲಿ ಇಡಲಾಗಿದೆ. ತಾ. 16 ರಂದು ಜೋಡುಬೀಟಿ ಗ್ರಾಮದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ವ್ಯಕ್ತಿಯನ್ನು ಪೊಲೀಸರು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಅವರು ಭಾನುವಾರ ಬೆಳ್ಗಗೆ ನಿಧನರಾಗಿದ್ದಾರೆ. ವಾರಸುದಾರರು ಪೊನ್ನಂಪೇಟೆ ಪೊಲೀಸ್ ಠಾಣೆಯನ್ನು 08274-249044 ಸಂಪರ್ಕಿಸಬಹುದಾಗಿದೆ.