*ಗೋಣಿಕೊಪ್ಪಲು, ಫೆ. 17: ಶಿಕ್ಷಣದೊಂದಿಗೆ ಸಾಹಿತ್ಯವನ್ನು ಅಳವಡಿಸಿಕೊಂಡರೆ ಮಾನವತವದಿ ಯಾಗಿ ಬೆಳೆಯಲು ಸಾಧ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದರು.
ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿ ಸಿದ ಮೊಣ್ಣಂಡ ಕೆ. ಚಂಗಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನಸ್ಸಿನ ನೆಮ್ಮದಿಗೆ ಸಾಹಿತ್ಯ ಓದು ಅಗತ್ಯ. ಪಠ್ಯ ಪುಸ್ತಕಗಳ ಅಭ್ಯಾಸ ದೊಂದಿಗೆ ಸಾಹಿತ್ಯದ ಅಭಿರುಚಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೊಡವ ಕನ್ನಡ ಭಾಷ ಬಾಂಧವ್ಯ ವಿಚಾರದ ಬಗೆ ಮಡಿಕೇರಿ ಪದವಿಪೂರ್ವ ಕಾಲೇಜು ಸಹ ಶಿಕ್ಷಕಿ ಚೋಕಿರ ಅನಿತಾ ದೇವಯ್ಯ ಉಪನ್ಯಾಸದಲ್ಲಿ ಕೊಡವ ಭಾಷೆ ಕನ್ನಡ ಭಾಷೆಯಷ್ಟೆ ಪ್ರಾಚೀನವಾದದ್ದು. ಕೊಡವ ಭಾಷೆ ನಾಲ್ಕು ಸಾವಿರ ವರ್ಷಗಳ ಹಿಂದೆ ಇತ್ತು ಎಂಬದನ್ನು ತಿಳಿಸಿದರು. ಕೊಡವ ಭಾಷೆ ಎನ್ನುವದು ಕನ್ನಡದ ಉಪಭಾಷೆಯಲ್ಲ. ಇದು ಸ್ವತಂತ್ರ್ಯ ಭಾಷೆಯಾಗಿದೆ. ಲಿಪಿ ಇಲ್ಲದ ಕಾರಣ ಕನ್ನಡದ ಲಿಪಿಯನ್ನು ಬಳಸಲಾಗುತ್ತಿದೆ. ಹಿಂದೆ ಹಿರಿಯರು ಕೊಡವ ಭಾಷೆಯಲ್ಲಿದ್ದ ಎಲ್ಲಾ ಜಾನಪದ ಹಾಡುಗಳನ್ನು ಕನ್ನಡದಲ್ಲಿ ದಾಖಲಿಸುವ ಮೂಲಕ ಕೊಡವ ಕನ್ನಡ ಭಾಷೆಯ ಬಾಂಧವ್ಯಕ್ಕೆ ಕಾರಣ ರಾಗಿದ್ದಾರೆ. ಕೊಡವ ಭಾಷೆಯೊಳಗೆ ಇಂದು ಕಲಬೆರಿಕೆಯಾಗುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದ ಅವರು, ಕೊಡವ ಭಾಷೆಯ ಮೇಲೆ ಕನ್ನಡದ ಧಾಳಿಯಾಗದಿದ್ದರೆ ಕೊಡವ ಕನ್ನಡ ಭಾಷ ಬಾಂಧವ್ಯ ಉಳಿದುಕೊಳ್ಳಲಿದೆ ಎಂದರು. ಹಿರಿಯ ಪತ್ರಕರ್ತ ಜೀವನ್ ಚಿಣ್ಣಪ್ಪ ಮಾತನಾಡಿ, ಅನ್ಯ ಭಾಷೆಗಳ ಪ್ರಭಾವದಿಂದ ಕೊಡವ ಹಾಗೂ ಕನ್ನಡ ಭಾಷೆ ಸೊರಗುತ್ತಿದೆ ಎನ್ನುವದನ್ನು ಬಿಟ್ಟು ನಮ್ಮ ಭಾಷೆಯನ್ನು ಬೆಳೆಸುವಲ್ಲಿ ಆಸಕ್ತಿ ಹೊಂದಬೇಕು. ಭಾಷೆ ಬೆಳೆಸುವಲ್ಲಿ ನಾವು ವಿಫಲಾರುಗುತ್ತಿದ್ದೇವೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ನಾಚಪ್ಪ, ಭಾಷೆ ಎನ್ನುವದು ಒಂದು ಬಾಂಧವ್ಯದ ಕೊಂಡಿ. ಭಾಷೆ ಅಳಿದರೆ ಮನುಕುಲವೆ ನಾಶವಾಗುತ್ತದೆ. ವ್ಯವಹಾರಕ್ಕೆ ಇತರೆ ಭಾಷೆಯನ್ನು ಬಳಸಿಕೊಂಡು ನಮ್ಮ ತನಕ್ಕೆ ಮಾತೃ ಭಾಷೆ ಬೆಳೆಸುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಜ್ಞಾನಪೀಠ ಸಿಗದೇ ಇರುವ ಕಾರಣವೆ ಕನ್ನಡ ಭಾಷೆಯ ಮೇಲೆ ಇರುವ ಅಭಿಮಾನ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ತಾಲೂಕು ಕ.ಸ.ಪ. ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಕ.ಸ.ಪ. ಪ್ರಧಾನ ಕಾರ್ಯದರ್ಶಿ ಚಮ್ಮಟೀರ ಪ್ರವೀಣ್ ಉತ್ತಪ್ಪ, ರೇಖಾ ಶ್ರೀಧರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಲಕ್ಷ್ಮಿ ಹಾಗೂ ಮೈನಾ ನಿರೂಪಿಸಿ, ಮಧೋಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.