ವೀರಾಜಪೇಟೆ, ಫೆ. 17: ಮಕ್ಕಳ ಚಲನವಲನದ ಬಗ್ಗೆ ಎಚ್ಚರ ವಹಿಸಿ ಎಂದು ಮಡಿಕೇರಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಕೂಪದೀರ ಸುನೀತಾ ಮುತ್ತಣ್ಣ ಪೆÇೀಷಕ ಶಿಕ್ಷಕರ ಸಭೆಯಲ್ಲಿ ಹೇಳಿದರು.

ತಮ್ಮ ಮಕ್ಕಳ ಚಲನವಲನದ ಬಗ್ಗೆ ನಿಗಾ ವಹಿಸಬೇಕು. ಮೊದಲು ಸ್ನೇಹ, ನಂತರ ಪ್ರೀತಿ ಅನಂತರ ದೈಹಿಕ ಸಂಬಂಧ ಬೆಳೆದು ಅಸುರಕ್ಷಿತ ಲೈಂಗಿಕತೆಯಿಂದ ಹೆಚ್.ಐ.ವಿ/ಏಡ್ಸ್ ನಂತಹ ಕಾಯಿಲೆಗೆ ಯುವ ಜನರು ತುತ್ತಾಗುತ್ತಿದ್ದಾರೆ. ಆದ್ದರಿಂದ ಯುವ ಜನತೆ ಮೇಲೆ ಪೆÇೀಷಕ ಮತ್ತು ಶಿಕ್ಷಕರು ಗಮನ ಹರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ, ಪೆÇೀಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಸಮಯವನ್ನು ಮೀಸಲಾಗಿರಿಸಿ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ಕೇವಲ ಪಾಠ ವಿಚಾರಗಳಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗುವಂತೆ ನೋಡಿಕೊಂಡು ಎರಡು ಸರಿದೂಗಿಸಿ ಸಾಗಿದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.

ಹಿರಿಯ ಪ್ರಾಧ್ಯಾಪಕ ಪೆÇ್ರ. ವೇಣುಗೋಪಾಲ ಮಾತನಾಡಿ, ಮೊಬೈಲ್ ಬಳಕೆ ಬಗ್ಗೆ ಎಚ್ಚರವಹಿಸಬೇಕು ಹಾಗೂ ವಿದ್ಯಾರ್ಥಿಗಳನ್ನು ಬಯ್ಯುವ ಬದಲು ಸಮಾಧಾನದಿಂದ ಮನಪರಿವರ್ತನೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಸಂಯೋಜಕ ಹಾಗೂ ಪೆÇೀಷಕ ಶಿಕ್ಷಕ ಸಂಘದ ಸಂಚಾಲಕ ಮಂದೆಯಂಡ ಎನ್. ವನಿತ್‍ಕುಮಾರ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.