ಮಡಿಕೇರಿ, ಫೆ. 15: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಿನ್ನೆ ದಿನ ಉಗ್ರರ ಕೃತ್ಯಕ್ಕೆ ಬಲಿಯಾದ ಭಾರತೀಯ ಯೋಧರಿಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಂಬನಿ ವ್ಯಕ್ತಗೊಂಡಿದೆ. ಹುತಾತ್ಮರಾದ ಸಿಆರ್‍ಪಿಎಫ್‍ನ ಯೋಧರಿಗೆ ಗೌರವ ಸೂಚಿಸಿ ಹಲವೆಡೆ ವಿವಿಧ ಸಂಘ - ಸಂಸ್ಥೆಗಳು, ವಿದ್ಯಾರ್ಥಿಗಳು ನಮನ ಸಲ್ಲಿಸಿದ್ದಾರೆ.

ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರ ಬಳಿ ನಿನ್ನೆ ಉಗ್ರರು ಮಾನವಬಾಂಬ್ ಸಹಿತ 44 ಅರೆಸೇನಾ ಪಡೆಯ ಯೋಧರನ್ನು ಬಲಿ ಪಡೆದಿರುವ ದುಷ್ಕøತ್ಯ ಖಂಡಿಸಿ, ಇಂದು ನಗರದ ಸುದರ್ಶನ ವೃತ್ತದಲ್ಲಿ ಫೀ.ಮಾ. ಕಾರ್ಯಪ್ಪ ಪ್ರತಿಮೆ ಎದುರು ಕೊಡಗು ಪ್ರೆಸ್‍ಕ್ಲಬ್ ನೇತೃತ್ವದಲ್ಲಿ ಶ್ರದ್ಧಾಂಜಲಿಯೊಂದಿಗೆ ಕೊಡಗು ಕಂಬನಿ ಮಿಡಿಯಿತು. ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೊಡಗು ಪ್ರೆಸ್‍ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಏರ್‍ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು, ಸಿಆರ್‍ಪಿಎಫ್ ಯೋಧರ ಬಲಿದಾನ ವ್ಯರ್ಥವಾಗ ದಂತೆ ಕೇಂದ್ರ ಕ್ರಮಕೈ ಗೊಳ್ಳುವಂತೆಯೂ ಬಲಿದಾನಗೈದ ಸೈನಿಕರ ಕುಟುಂಬ ನೋವಿನಲ್ಲಿ ದೇಶದ ಜನತೆ ಭಾಗಿಯಾಗುವ ನವದೆಹಲಿ, ಫೆ. 15: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ಧಾಳಿಯನ್ನು ತೀವ್ರವಾಗಿ ಖಂಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ನೆರೆಯ ದೇಶ ಭಾವಿಸಿದರೆ ಅದನ್ನು ಮರೆತುಬಿಡಲಿ, ಅದು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು.

ಭದ್ರತಾ ಪಡೆ ಯೋಧರ ಮೇಲೆ ಧಾಳಿ ನಡೆಸಿ ಉಗ್ರರು ಭಾರೀ ದೊಡ್ಡ ತಪ್ಪು ಮಾಡಿದ್ದಾರೆ, ಅದಕ್ಕೆ ತಕ್ಕ ಬೆಲೆಯನ್ನು ಅವರು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇಂತಹ ಕೃತ್ಯಗಳಿಂದ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದು ಕೂಡ ಸ್ಪಷ್ಟ ಸಂದೇಶ ರವಾನಿಸಿದರು.

ಇಂತಹ ಭಯೋತ್ಪಾದಕ ಧಾಳಿ ಗಳಿಂದ ಭಾರತವನ್ನು ದುರ್ಬಲ ಗೊಳಿಸಬಹುದು ಎಂದು ನಮ್ಮ ನೆರೆಯ ರಾಷ್ಟ್ರ ಭಾವಿಸಿದೆ. ಅದು ಸಾಧ್ಯವಿಲ್ಲ ಎಂದರು. ಅವರು ಇಂದು ಕೇಂದ್ರ ಸಚಿವ ಸಂಪುಟದ ಹಿರಿಯ ಸಚಿವರು ಮತ್ತು ಭದ್ರತಾ ಸಿಬ್ಬಂದಿ ಗಳನ್ನು ಆಹ್ವಾನಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದರು.

ಬಳಿಕ ಅವರು ಜಾನ್ಸಿಯಲ್ಲಿ ನಡೆದ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಪುಲ್ವಾಮ ಧಾಳಿಯಲ್ಲಿನ ಧಾಳಿಕೋರರನ್ನು ಶಿಕ್ಷೆಗೆ ಗುರಿಪಡಿ ಸಲಾಗುವದು. ಧಾಳಿಯಲ್ಲಿ ಹುತಾತ್ಮರಾದವರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ. ನಮ್ಮ ಭದ್ರತಾ ಪಡೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರ ಧೈರ್ಯ, ಸಾಹಸಗಳ ಮೇಲೆ ನಮಗೆ ನಂಬಿಕೆ ಯಿದೆ. ಜಗತ್ತಿನಿಂದ ಸಂಪೂರ್ಣ ವಾಗಿ ದೂರ ಉಳಿದಿರುವ ನಮ್ಮ ನೆರೆಯ ದೇಶ ತನ್ನ ತಂತ್ರ ಮತ್ತು ಪಿತೂರಿಯಿಂದ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಭಾವಿಸಿದರೆ ಅದು ಖಂಡಿತಾ ಸಾಧ್ಯವಿಲ್ಲ ಎಂದು ಸಂದೇಶ ರವಾನಿಸಿದರು.

(ಮೊದಲ ಪುಟದಿಂದ) ಇಂದಿಗೂ ಇಂತಹ ಅಪಾಯ ಎದುರಿಸ ಬೇಕಾಗಿದೆ ಎಂದು ಅವರು ವಿಷಾದಿಸಿದರು.

ಆಂತರಿಕ ಭದ್ರತೆ ಅವಶ್ಯ: ಕಾರ್ಯಕ್ರಮ ಆಯೋಜಿಸಿದ್ದ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕ ನುಡಿಯೊಂದಿಗೆ ಜಾಗತಿಕ ಭಯೋತ್ಪಾದನೆಯನ್ನು ಹತ್ತಿಕ್ಕುವ ಮೂಲಕ ರಕ್ತಪಾತ ತಪ್ಪಿಸಿ ಮನುಕುಲದ ಶಾಂತಿಗೆ ಪ್ರಯತ್ನಿಸಬೇಕೆಂದು ಆಶಿಸಿದರು. ದೇಶದೊಳಗಿನ ಆಂತರಿಕ ಶತ್ರುಗಳ ಹೆಡೆಮುರಿ ಕಟ್ಟುವದರೊಂದಿಗೆ, ಭಾರತದ ಏಕತೆ ಕಾಯ್ದುಕೊಳ್ಳುವ ಅನಿವಾರ್ಯ ಸಂದರ್ಭ ಇದಾಗಿದೆ ಎಂದು ಪ್ರತಿಪಾದಿಸಿದರು. ದೇಶದ ವಿಚಾರ ಬಂದಾಗ ಜಾತಿ, ಮತ,ಧರ್ಮಗಳ ಹೊರತಾಗಿ ಒಗ್ಗೂಡುವಂತೆ ತಿಳಿಹೇಳಿದರು.

ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯಚಿಣ್ಣಪ್ಪ, ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ನಗರಸಭಾ ಸದಸ್ಯ ಪೀಟರ್, ಜಿಲ್ಲಾ ಗೌಡ ಸಮಾಜ ಒಕ್ಕೂಟ ಅಧ್ಯಕ್ಷ ಪೊನ್ನಚನ ಮೋಹನ್, ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಮೊದಲಾದವರು ಯೋಧರ ಬಲಿದಾನವನ್ನು ವ್ಯರ್ಥಗೊಳಿಸದಂತೆ ಕೇಂದ್ರ ಸರಕಾರ ಪಾಕಿಸ್ತಾನ ವಿರುದ್ಧ ಕಠಿಣ ಹೆಜ್ಜೆ ಇರಿಸಬೇಕೆಂದು ಆಗ್ರಹಿಸಿದರು.

‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಅವರು ಕಾರ್ಯಕ್ರಮ ನಿರೂಪಣೆ ಯೊಂದಿಗೆ, ಸ್ವಯಂಪ್ರೇರಿತವಾಗಿ ಶ್ರದ್ಧಾಂಜಲಿ ಸಭೆಯ ಕೂಗಿಗೆ ಓಗೊಟ್ಟಿರುವ ಸರ್ವರು, ಅಭಿನಂದನಾರ್ಹರೆಂದು ಬಣ್ಣಿಸಿದರಲ್ಲದೆ, ದೇಶಭಕ್ತಿ ಗಾಯನದ ಮೂಲಕ, ಎಲ್ಲಾ ಕಾಲಕ್ಕೂ ದೇಶದ ಗಡಿ ಕಾಯುವ ಸೈನಿಕರಿಗಾಗಿ ಕೊಡಗಿನ ಜನತೆಯ ಮಿಡಿತ ಹಾಗೂ ತುಡಿತ ಸದಾ ಇರುವದಾಗಿ ಆಶಿಸಿದರು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಇತರ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪತ್ರಿಕಾ ಬಳಗ, ರಾಜಕೀಯ ಪ್ರಮುಖರು ಪಾಲ್ಗೊಂಡು ದೇಶಕ್ಕಾಗಿ ಮಡಿದ ಯೋಧರಿಗಾಗಿ ಮೌನ ಶ್ರದ್ಧಾಂಜಲಿ ಅರ್ಪಿಸಿದರು.

ಅರೆಸೇನಾ ಬಳಗ ನಮನ : ಇಲ್ಲಿನ ಹ¼ಯ ಖಾಸಗಿ ಬಸ್ ನಿಲ್ದಾಣದ ಬಳಿ ನಿವೃತ್ತ ಅರೆಸೇನಾ ಪಡೆ ಯೋಧರ ಒಕ್ಕೂಟ ಪ್ರತ್ಯೇಕವಾಗಿ ಸೇರಿ ದೇಶಕ್ಕಾಗಿ ಬಲಿದಾನಗೈದಿರುವ ಹುತಾತ್ಮ ಸಿಆರ್‍ಪಿಎಫ್ ಯೋಧರಿಗಾಗಿ ಕಂಬನಿಯೊಂದಿಗೆ ನಮನ ಸಲ್ಲಿಸಿದರು. ಅರೆಸೇನಾ ಪಡೆ ಯೋಧರ ಬಲಿದಾನ ವ್ಯರ್ಥವಾಗದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಕ್ಷಣಾ ಮತ್ತು ಗೃಹ ಸಚಿವರು ಕಠಿಣ ಸಂದೇಶದೊಂದಿಗೆ ಪಾಕಿಸ್ತಾನಕ್ಕೆ ಉತ್ತರಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಅರೆಸೇನಾ ಪಡೆ ನಿವೃತ್ತ ಯೋಧರ ಸಂಘದ ಅಧ್ಯಕ್ಷ ಎಂ.ಜಿ. ಯತೀಶ್, ಕಾರ್ಯದರ್ಶಿ ಎನ್.ಎಂ. ಭೀಮಯ್ಯ, ಪ್ರಮುಖರಾದ ಕೆ.ಎಸ್. ಆನಂದ್, ಎ.ಡಿ. ಗಣಪತಿ, ಸಿ.ಕೆ. ರಮೇಶ್, ಸುಬ್ರಾಯ ಮೊದಲಾದವರು ಹಾಜರಿದ್ದರು.

ಯುಕೋ ಸಂಘಟನೆ

ಶ್ರೀಮಂಗಲ: ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಾ ಅದಕ್ಕೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದೊಂದಿಗೆ ಭಾರತ ಎಲ್ಲಾ ವ್ಯವಹಾರವನ್ನು ಕಡಿತಗೊಳಿಸಬೇಕು. ಭಯೋತ್ಪಾದನೆಯ ಹುಟ್ಟಡಗಿಸಲು ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಕೊಡಗಿನ ನಿವೃತ ಸೇನಾಧಿಕಾರಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು, ಜಮ್ಮು ಕಾಶ್ಮೀರದಲ್ಲಿ ಉಗ್ರರ ಧಾಳಿಗೆ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೈತಿಕ ಬೆಂಬಲ ನೀಡುವ ಮೂಲಕ ಈ ಭಯೋತ್ಪಾದನೆ ವಿರುದ್ಧ ದೇಶದ ಎಲ್ಲಾ ನಾಗರಿಕರು ಒಂದಾಗಿ ಸರ್ಕಾರ ಭಯೋತ್ಪಾದನೆಯ ವಿರುದ್ಧ ಕೈಗೊಳ್ಳುವ ಕ್ರಮಕ್ಕೆ ಬೆಂಬಲ ನೀಡಬೇಕಾಗಿದೆ ಎಂದು ಫೀ.ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರಂತಂಡ ಸುಬ್ಬಯ್ಯ ಹೇಳಿದರು.

ಗೋಣಿಕೊಪ್ಪದ ಫೀ.ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಪ್ರತಿಮೆ ಎದುರು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ಧಾಳಿಗೆ ತುತ್ತಾಗಿ ಹುತಾತ್ಮರಾದ ಯೋಧರಿಗೆ ಯುಕೋ ಸಂಘಟನೆ ಆಶ್ರಯದಲ್ಲಿ ಆಯೋಜಿಸಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು.

ಕೊಡಗು ವನ್ಯಜೀವಿ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ ಮಾತಾನಾಡಿ, ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ. ಭಾರತವನ್ನು ನೇರವಾಗಿ ಎದುರಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದೆ ಪ್ರಪಂಚದ 5ನೇ ಬಲಾಡ್ಯ ಸೇನೆಯನ್ನು ಹೊಂದಿರುವ ಭಾರತದ ಎದುರು ಭಯೋತ್ಪಾದನೆ ಮೂಲಕ ಯುದ್ಧ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ರಿಗೇಡಿಯರ್ ಮಾಳೇಟೀರ ದೇವಯ್ಯ ಮಾತಾನಾಡಿ, ಭಾರತ ಪಾಕ್‍ನೊಂದಿಗೆ ಎಲ್ಲಾ ವ್ಯಾಪಾರ ಒಪ್ಪಂದ ಕ್ರೀಡೆ ಸಿನಿಮಾ ಮನೋರಂಜನೆ ಕಡಿತಗೊಳಿಸಬೇಕು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರು ರೂ. 10 ದೇಣಿಗೆ ನೀಡುವಂತಾಗಬೇಕು. ವಾರ್ಷಿಕ 2 ತಿಂಗಳ ಅವಧಿಯಲ್ಲಿ ರಜೆಯಲ್ಲಿ ಊರಿಗೆ ಬರುವ ಯೋಧರಿಗೆ ಅವರ ಎಲ್ಲಾ ಸೌಲಭ್ಯ, ಸರ್ಕಾರಿ ದಾಖಲೆ ಕೆಲಸ ಕಾರ್ಯಗಳನ್ನು ವಿಶೇಷ ಪ್ರಾಮುಖ್ಯತೆ ನೀಡಿ ಮಾಡಿಕೊಡುವಂತಾಗಬೇಕು. ಈ ಮೂಲಕ ಅವರು ದೇಶಕ್ಕಾಗಿ ಗಡಿಯಲ್ಲಿ ನೆಮ್ಮದಿಯಿಂದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕರ್ನಲ್ ಮುಕ್ಕಾಟಿರ ಅಯ್ಯಣ್ಣ ಮಾತನಾಡಿ ಕೊಡಗಿನ ಫೀ.ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಅವರಿಗೆ ಅವರ ಸೇವಾವಧಿಯಲ್ಲಿ ಅಂದಿನ ಸರ್ಕಾರ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅಧಿಕಾರ ನೀಡಿದ್ದರೆ ಇಂದು ಈ ಜಿಹಾದಿ ಭಯೋತ್ಪಾದನೆ ಮತ್ತು ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಇರುತ್ತಿರಲಿಲ್ಲ ಎಂದು ಹೇಳಿದರು.

ಆರ್.ಎಸ್.ಎಸ್ ಮುಖ್ಯಸ್ಥ ಚೆಕ್ಕೆರ ಮನು ಸೋಮಯ್ಯ ಮಾತನಾಡಿ ಪುಲ್ವಾಮದಲ್ಲಿ ಯೋಧರನ್ನು ಉಗ್ರರು ಕೊಂದಿದ್ದಾರೆ; ಆದರೆ ಈ ಉಗ್ರಗಾಮಿಗಳ ವಿರುದ್ಧ ದೇಶವೇ ಹೋರಾಟ ಮಾಡುವ ಮೂಲಕ ಪ್ರತಿಯೊಬ್ಬ ನಾಗರಿಕ ಯೋಧನಾಗಿ ನಿಲ್ಲಬೇಕಾಗಿದೆ ಎಂದರು.

ಕಾರ್ಯಕ್ರಮ ಆಯೋಜಿಸಿದ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತಾನಾಡಿ ಪುಲ್ವಾಮ ಧಾಳಿಯಲ್ಲಿ ಮಡಿದ ನಮ್ಮ ಹುತಾತ್ಮ ಯೋಧರಿಗೆ ಮತ್ತು ಅವರ ಕುಟುಂಬಕ್ಕೆ ನೈತಿಕ ಬೆಂಬಲವಾಗಿ ದೇಶದ ಪ್ರತಿಯೊಬ್ಬ ನಾಗರಿಕ ನಿಲ್ಲುವ ಮೂಲಕ ದೇಶಾಭಿಮಾನ ಮೂಡಿಸಬೇಕಾಗಿದೆ ಉಗ್ರವಾದವನ್ನು ಸಂಪೂರ್ಣವಾಗಿ ದಮನ ಮಾಡುವ ಸರ್ಕಾರದ ಕಾರ್ಯಕ್ಕೆ ಬೆಂಬಲ ನೀಡಬೇಕಾಗಿದೆ ನಮ್ಮ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಗೌರವದಿಂದ ನೆನೆಯುವದು ನಮ್ಮ ಕರ್ತವ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುಕೊ ಸಂಘಟನೆಯ ಪ್ರಮುಖರು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಗೋಣಿಕೊಪ್ಪ ಕೊಡವ ಸಮಾಜದ ಸಿ.ಡಿ. ಮಾದಪ್ಪ, ಗೋಣಿಕೊಪ್ಪ ಕಾವೇರಿ ಕಾಲೇಜು ಮತ್ತು ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಇತರ ನಾಗರಿಕ ಪ್ರಮುಖರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹುತಾತ್ಮ ಯೋಧರಿಗೆ 2 ನಿಮಿಷ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಭಾರತಿ ಕಾಲೇಜು - ಪತ್ರಕರ್ತರ ಸಂಘ - ಸೈನಿಕರ ಸಂಘ

ಒಡೆಯನಪುರ: ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜು, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ನಿವೃತ್ತ ಸೈನಿಕರ ಸಂಘದ ವತಿಯಿಂದ ಹುತ್ಮಾತರಾದ ಸಿಆರ್‍ಪಿಎಫ್ ಯೋಧರಿಗೆ ಶ್ರದ್ಧಾಂಜಲಿ ಸಭೆ ಮತ್ತು ಉಗ್ರರ ಕೃತ್ಯವನ್ನು ಖಂಡಿಸಿ ಹಾಗೂ ಭಯೋತ್ಪಾದÀನೆ ವಿರುದ್ಧ ಮೌನ ಪ್ರತಿಭಟನೆ ಮೆರವಣಿಗೆಯನ್ನು ನಡೆಸಲಾಯಿತು.

ಕಾಲೇಜು ಆವರಣದಲ್ಲಿ ಉಗ್ರರÀ ಧಾಳಿಗೆ ಹುತಾತ್ಮರಾದ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ನಿವಾಸಿ ಸಿಆರ್‍ಪಿಎಫ್ ಯೋಧ ಎಚ್.ಗುರು ಸೇರಿದಂತೆ ಹುತಾತ್ಮರಾದ ಸಿಆರ್‍ಪಿಎಫ್ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್.ಧರ್ಮಪ್ಪ ಮಾತನಾಡಿ-ನಮ್ಮ ರಾಷ್ಟ್ರದ ನೆರೆ ದೇಶ ಪಾಕಿಸ್ತಾನ ಉಗ್ರರನ್ನು ತಯಾರಿಸುವ ಅತ್ಯಂತ ಕೆಟ್ಟ ದೇಶವಾಗಿದೆ, ನಮ್ಮ ದೇಶಕ್ಕೆ ಸೇರಿದ ಕಾಶ್ಮಿರದಲ್ಲಿ ಉಗ್ರರನ್ನು ಪಾಕಿಸ್ತಾನ ಬೆಳೆಸುತ್ತಿದ್ದಾರೆ, ಈ ಮೂಲಕ ನಮ್ಮವರಿಂದಲೇ ನಮ್ಮ ರಾಷ್ಟ್ರದ ಸೈನಿಕರು, ಸಿಆರ್‍ಪಿಎಫ್, ಗಡಿ ಭದ್ರತಾ ಪಡೆಯನ್ನು ಕೇಂದ್ರವನ್ನಾಗಿ ಮಾಡಿಕೊಂಡು ಧಾಳಿ ಮಾಡಿಸುತ್ತಿದ್ದಾರೆ, ಇದೊಂದು ಅತ್ಯಂತ ಹೇಯ ಮತ್ತು ರಾಕ್ಷಸ ಪ್ರವೃತಿಯ ಕೃತ್ಯವಾಗಿದೆ ಎಂದು ಖಂಡಿಸಿದರು.

ವಿದ್ಯಾಸಂಸ್ಥೆ ಅಧ್ಯಕ್ಷ ಎ.ಎಂ.ಆನಂದ್ ಮಾತನಾಡಿ-ಯೋದರು ನಮ್ಮ ದೇಶದ ಆಸ್ತಿ ಮತ್ತು ರಾಷ್ಟ್ರದ ರಕ್ಷಕರಾಗಿದ್ದಾರೆ, ಆದರೆ ಉಗ್ರರು ನಮ್ಮ ಯೋಧರ ಮೇಲೆ ಅಮಾನುಷ ಧಾಳಿ ನಡೆಸಿ ಅವರ ವೀರ ಮರಣಕ್ಕೆ ಕಾರಣರಾಗಿರುವದು ತುಂಬಾ ನೋವಿನ ವಿಚಾರವಾಗಿದೆ, ಭಯೋತ್ಪಾದನೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು, ನಾವೆಲ್ಲರೂ ರಾಷ್ಟ್ರದ ಯೋಧರ ಜೊತೆಯಲ್ಲಿದ್ದೇವೆ ಎಂದರು.

ಗ್ರಾ.ಪಂ.ಅಧ್ಯಕ್ಷ ಮಹಮ್ಮದ್‍ಗೌಸ್ ಮಾತನಾಡಿ-ಪಾಕಿಸ್ತಾನ ಎಂದೆಂದೂ ನಮ್ಮ ರಾಷ್ಟ್ರದ ಶತ್ರು ದೇಶವಾಗಿದೆ, ಉಗ್ರನ ಧಾಳಿಗೆ ಸಿಆರ್‍ಪಿಎಫ್ ಯೋಧರು ಬಲಿಯಾಗಿರುವ ಪ್ರಕರಣ ನಾವೆಲ್ಲರೂ ದುಃಖ ಪಡುವ ದಿನವಾಗಿದೆ ಎಂದರು. ಭಯೋತ್ಪಾದನೆಯನ್ನು ಮಟ್ಟ ಹಾಕಲು ನಾವೆಲ್ಲರೂ ಸರಕಾರ ರಕ್ಷಣ ಇಲಾಖೆ, ಯೋಧರಿಗೆ ನೈತಿಕ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಇ.ಎಂ.ದಯಾನಂದ್, ಕಾರ್ಯನಿರತ ಪತ್ರಕರ್ತರ ಸಂಘದ ದಿನೇಶ್ ಮಾಲಂಬಿ, ಬಾಸ್ಕರ್ ಮುಳ್ಳೂರು ಮುಂತಾದವರಿದ್ದರು. ನಂತರ ಕಾಲೇಜು ವಿದ್ಯಾರ್ಥಿ ಸಮೂಹ, ಉಪನ್ಯಾಸಕರು, ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪ್ರಮುಖರು ಕಾಲೇಜು ಆವರಣದಿಂದ ಮುಖ್ಯ ರಸ್ತೆ ಮೂಲಕ ಉಗ್ರರ ಧಾಳಿ ಖಂಡಿಸಿ ಹಾಗೂ ಭಯೋತ್ಪಧನೆ ವಿರುದ್ಧ ಪಟ್ಟಣದ ಕೆಆರ್‍ಸಿ ವೃತ್ತದವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಶನಿವಾರಸಂತೆ

ಒಡೆಯನಪುರ: ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಕಿಯರ ಸಂಯುಕ್ತ ಪ.ಪೂ.ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಕಾಲೇಜು ಆವರಣದಲ್ಲಿ ಅಗಲಿದ ಸಿಆರ್‍ಪಿಎಫ್ ಯೋಧರಿಗೆ 1 ನಿಮಿಷ ಮೌನಚರಣೆ ದಾಗಿಯೂ ಘೋಷಿಸಿದರು. ವಾರದ ಹಿಂದೆ ಗುಪ್ತಚರ ವಿಭಾಗ ಧಾಳಿಯ ಸುಳಿವು ನೀಡಿದ್ದು, ಆ ಬಗ್ಗೆ ಕೆಲವರು ಹೊಣೆಗಾರಿಕೆ ಹೊರಬೇಕಿದೆ ಎಂದು ನೆನಪಿಸಿದರು.

ನಿವೃತ್ತ ಹವಾಲ್ದಾರ್ ಹಾಗೂ ಪೊನ್ನಂಪೇಟೆ ನಿವಾಸಿ ಚೇಂದುವಂಡ ಎ. ದೇವಯ್ಯ ಮಾತನಾಡಿ, ಕೊಡಗಿನಲ್ಲಿ ಹುಟ್ಟುವ ಪ್ರತಿಯೊಬ್ಬರು ದೇಶ ಕಾಯುವ ಸೈನಿಕರಾಗಿ ಒಮ್ಮೆಯಾದರೂ ಕಾರ್ಗಿಲ್ ಕಣಿವೆಯಲ್ಲಿ ಹೊಣೆಗಾರಿಕೆ ನಿಭಾಯಿಸಬೇಕೆಂದು ಆಶಿಸಿದರು. ನಿನ್ನೆಯ ಘಟನೆಯಿಂದ ರಕ್ತ ಕುದಿಯುತ್ತಿದ್ದು, ತಾವು ಸ್ವಯಂ ನಿವೃತ್ತಿಯಿಂದ ಮನೆಯಲ್ಲಿದ್ದರೂ, ಕಾಶ್ಮೀರಕ್ಕೆ ಹತ್ತರವಿದ್ದರೇ ನಿನ್ನೆಯೇ ಮತ್ತೆ ಕರ್ತವ್ಯಕ್ಕೆ ತೆರಳುತ್ತಿದ್ದೆ ಎಂದು ಆಕ್ರೋಶಭರಿತ ಅಶ್ರಧಾರೆ ಮಿಡಿದರು.

ಹಿರಿಯ ಕಲಾವಿದೆ ಮೊಣ್ಣಂಡ ಶೋಭಾ ಸುಬ್ಬಯ್ಯ, ದೇಶಭಕ್ತಿ ಗೀತೆಯೊಂದಿಗೆ ನಿನ್ನೆ ದೇಶಕ್ಕಾಗಿ ಬಲಿದಾನಗೈದಿರುವ ಹುತಾತ್ಮ ಯೋಧರು ಮತ್ತೆ ಭಾರತಾಂಭೆಯ ಸೇವೆಗಾಗಿ ಹುಟ್ಟಿ ಬರಲೆಂದು ಆಶಿಸಿದರು. ಅಲ್ಲದೆ ದೇಶದಲ್ಲಿ ರಾಜಕೀಯ ಮಾಡುವವರಿಗೆ ಕನಿಷ್ಟ 10 ವರ್ಷ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶವಿರಬೇಕೆಂದು ಅಭಿಪ್ರಾಯಪಟ್ಟರು.

ಇಂದು ಸಮಸ್ಯೆ ಇರುತ್ತಿರಲಿಲ್ಲ: ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂಧ್ರ ಅವರು ಮಾತನಾಡಿ, ಸ್ವಾತಂತ್ರ್ಯದ ಬೆನ್ನಲ್ಲೇ ಕಾಶ್ಮೀರ ವಿವಾದ ಹುಟ್ಟಿಕೊಂಡಾಗ, ಕೊಡಗಿನ ವೀರ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಮಾತುಕೇಳಿ ಕೆಲವೇ ಗಂಟೆಗಳ ಕಾಲಾವಕಾಶ ನೀಡಿದ್ದರೆ, ಎಂದಿಗೂ ಕಾಶ್ಮೀರ ಸಮಸ್ಯೆ ಮರುಕಳಿಸುತ್ತಿರಲಿಲ್ಲ ಎಂದು ನೆನಪಿಸಿದರು. ಅಂದಿನ ರಾಜಕಾರಣಿಗಳು ಸೈನ್ಯಾಧಿಕಾರಿಯ ಕೈಕಟ್ಟಿ ಹಾಕಿದ್ದರಿಂದ

(ಮೊದಲ ಪುಟದಿಂದ) ಭಾರತ ನವಭಾರತ ಎಂಬದನ್ನು ನೆರೆಯ ರಾಷ್ಟ್ರ ಮರೆತಂತಿದೆ.

ಉಗ್ರರ ಧಾಳಿಯಿಂದ ವೀರಯೋಧರು ಹುತಾತ್ಮರಾಗಿದ್ದು ನೋಡಿ ನಿಮ್ಮ ರಕ್ತ ಕುದಿಯುತ್ತಿರುತ್ತದೆ ಎಂದು ನನಗೆ ಗೊತ್ತಿದೆ. ಇದೊಂದು ಭಾವನಾತ್ಮಕ ಮತ್ತು ಸೂಕ್ಷ್ಮ ಸಮಯ. ಆಡಳಿತದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ ಈ ಸಂದರ್ಭದಲ್ಲಿ ನಾವು ರಾಜಕೀಯ ದಿಂದ ದೂರವುಳಿ ಯಬೇಕು. ದೇಶದ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.

ಪುಲ್ವಾಮಾ ಭಯೋತ್ಪಾದಕ ಧಾಳಿಯನ್ನು ಖಂಡಿಸಿ ಈ ಸಂದರ್ಭದಲ್ಲಿ ಭಾರತಕ್ಕೆ ಬೆಂಬಲ ಸೂಚಿಸಿದ ಎಲ್ಲಾ ದೇಶಗಳಿಗೆ ಪ್ರಧಾನಿ ಧನ್ಯವಾದ ಹೇಳಿದರು. ಭಯೋತ್ಪಾದನೆಯನ್ನು ಹತ್ತಿಕ್ಕಲು ಎಲ್ಲರೂ ಒಗ್ಗಟ್ಟಿನಿಂದ ಹೋರಾ ಡೋಣ ಎಂದು ಕರೆ ನೀಡಿದರು.

ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಭಿಕ್ಷೆ ಬೇಡುವಂತಾಗಿದೆ ಎಂಬ ಸುದ್ದಿ ಹರಡಿದ್ದು, ವಿಶ್ವದ ಯಾವದೇ ರಾಷ್ಟ್ರಗಳೂ ನೆರವು ನೀಡಲು ಮುಂದೆ ಬರುತ್ತಿಲ್ಲ ಎಂದು ನೆನಪಿಸಿದರು.

ರಾಯಭಾರಿಗೆ ತರಾಟೆ

ಈ ನಡುವೆ ಪುಲ್ವಾಮಾ ಧಾಳಿ ಸಂಬಂಧ ಪಾಕಿಸ್ತಾನ ರಾಯಭಾರಿ ಯನ್ನು ಭಾರತೀಯ ವಿದೇಶಾಂಗ ಕಾರ್ಯಾಲಯಕ್ಕೆ ಕರೆಸಿಕೊಂಡ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತದ ಸೂಚನೆ ಮೇರೆಗೆ ಹಾಜರಾಗಿದ್ದ ಪಾಕಿಸ್ತಾನದ ಹೈಕಮಿಷನರ್ ಮೊಹಮದ್ ಅವರಿಗೆ, ಹೇಯ ಧಾಳಿ ನಡೆಸಿದ ಉಗ್ರ ಸಂಘಟನೆ ಜೈಸ್-ಇ-ಮೊಹಮ್ಮದ್ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ, ತಮ್ಮ ಗಡಿಯೊಳಗೆ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ತಕ್ಷಣ ನಿಗ್ರಹಿಸದಿದ್ದರೆ ಕಠಿಣ ಪ್ರತಿಧಾಳಿಯ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆÉ.

ಪುಲ್ವಾಮಾದಲ್ಲಿ ನಿನ್ನೆ ಸೈನಿಕರ ಆಶ್ರಯ ತಾಣದ ಮೇಲೆ ನಡೆದ ಧಾಳಿಯಲ್ಲಿ ಸುಮಾರು 40 ಮೀಸಲು ಪಡೆಯ ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಮೂಲದ ಜೈಷ್‍ಇ-ಮೊಹಮದ್ (ಜೆಇಎಂ) ಧಾಳಿಯ ಹೊಣೆ ಹೊತ್ತುಕೊಂಡಿದೆ.

ಹೆಗಲು ಕೊಟ್ಟ ಗೃಹ ಸಚಿವ

ಪುಲ್ವಾಮ ಧಾಳಿಯಲ್ಲಿ ಭಯೋತ್ಪಾದಕರ ಧಾಳಿಗೆ ಹುತಾತ್ಮರಾದ ಸಿಆರ್‍ಪಿಎಫ್ ಯೋಧರ ಪಾರ್ಥಿವ ಶರೀರವಿದ್ದ ಪೆಟ್ಟಿಗೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಬುದ್‍ಗಾಂ ನಲ್ಲಿಂದು ಹೆಗಲು ನೀಡಿದರು.

ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಮತ್ತು ಸೇನಾ ಉತ್ತರ ವಲಯದ ಕಮಾಂಡ್ ಚೀಫ್ ಲೆÀಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಕೂಡಾ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.