ನಾಪೆÇೀಕ್ಲು, ಫೆ. 15: ಸರಕಾರ ನಾಪೆÇೀಕ್ಲು ನಾಡು ಕಚೇರಿಯಲ್ಲಿ ಮತ್ತು ನಾಪೆÇೀಕ್ಲು ಅಂಚೆ ಕಚೇರಿಯಲ್ಲಿ ನೂತನ ಆಧಾರ್ ಕಾರ್ಡ್ ನೋಂದಾವಣಿಗೆ ಕ್ರಮಕೈಗೊಂಡಿದೆ. ಆದರೆ ಕಳೆದ ಎರಡು ತಿಂಗಳಿನಿಂದ ನಾಡು ಕಚೇರಿಯಲ್ಲಿ ನೆಟ್‍ವರ್ಕ್, ಕಂಪ್ಯೂಟರ್, ಕೇಬಲ್ ಸರಿಯಿಲ್ಲ ಎಂಬ ಕಾರಣದಿಂದ ಆಧಾರ್ ನೋಂದಾವಣಿ ಮಾಡಲಾಗುತ್ತಿಲ್ಲ. ಸಂಬಂಧಿಸಿದವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಪೆÇೀಕ್ಲು ಗ್ರಾ.ಪಂ. ಸದಸ್ಯ ಹಾಗೂ ನಾಪೆÇೀಕ್ಲು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಾಚೆಟ್ಟಿರ ಕುಶು ಕುಶಾಲಪ್ಪ ಒತ್ತಾಯಿಸಿದ್ದಾರೆ.