ವೀರಾಜಪೇಟೆ, ಫೆ. 13: ಮಗುವಿಗೆ ತಾಯಿ ಮೊದಲ ಗುರು, ಮನೆಯೇ ಪಾಠಶಾಲೆ, ಮಕ್ಕಳನ್ನು ಸುಸಂಸ್ಕøತರಾಗಿ ಬೆಳೆಸಿದರೆ ಸಮಾಜದಲ್ಲಿ ಪೋಷಕರಿಗೆ ಹೆಚ್ಚಿನ ಗೌರವ ದೊರಕುತ್ತದೆ. ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ ಎಂದು ವೀರಾಜಪೇಟೆಯ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಹೇಳಿದರು. ವೀರಾಜಪೇಟೆ ಕೊಡವ ಸಮಾಜ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೊಮ್ಮಕ್ಕಡ ಕೂಟದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂತಿ ಸತೀಶ್ ಪ್ರಾಥಮಿಕ ಹಂತದಿಂದಲೇ ಮಕ್ಕಳ ನಡೆನುಡಿ, ಚಲನವಲನಗಳ ಬಗ್ಗೆ ಪೋಷಕರು ನಿಗಾವಹಿಸಬೇಕು ಎಂದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ತಾತಂಡ ಗಂಗಮ್ಮ ಪೂವಯ್ಯ, ನಿವೃತ್ತ ಉಪಾಧ್ಯಾಯಿನಿ ಕರ್ನಂಡ ಬೊಳ್ಳಮ್ಮ, ಸಲಹಾ ಸಮಿತಿ ಸದಸ್ಯರಾದ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಕುಪ್ಪಂಡ ಪುಷ್ಪ ಮುತ್ತಣ್ಣ, ಚಲ್ಮಂಡ ಗೌರಿ ಮೊಣ್ಣಪ್ಪ, ಉಪಾಧ್ಯಕ್ಷೆ ಪಳೆಯಂಡ ಮನು ಸುಬ್ಬಯ್ಯ, ಖಜಾಂಚಿ ಪೊಯ್ಯೇಟಿರ ಬಾನು ಭೀಮಯ್ಯ, ಅಣ್ಣರ್ಕಂಡ ಪೂಜಾ ಶ್ಯಾಂ ಉಪಸ್ಥಿತರಿದ್ದರು.
ಇದೇ ಸಮಾರಂಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯೆ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ಬೊವ್ವೇರಿಯಂಡ ಆಶಾ ಸುಬ್ಬಯ್ಯ, ಸಾಹಿತಿ ನಾಯಕಂಡ ಬೇಬಿ ಚಿಣ್ಣಪ್ಪ, ಚೆಯ್ಯಂಡಾಣೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹಾಗೂ ವೀರಾಜಪೇಟೆ ಯಲ್ಲಿರುವ ಜಿಲ್ಲಾ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ, ಕಾಕೋಟುಪರಂಬು ವಿಎಸ್ಎಸ್ಎನ್ ನಿರ್ದೇಶಕಿ ಮೇವಡ ವಸ್ಮಾ ಕರುಂಬಯ್ಯ ಇವರುಗಳನ್ನು ಸನ್ಮಾನಿಸಲಾಯಿತು. ಸೀತಾ ತಂಡದಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ಸ್ವಾಗತಿಸಿದರು. ಕೂಟದ ತಾತಂಡ ಪ್ರಭಾ ನಾಣಯ್ಯ ನಿರೂಪಿಸಿ, ಕಾಣತಂಡ ಬೀನಾ ಜಗದೀಶ್ ವಂದಿಸಿದರು.