ಮಡಿಕೇರಿ, ಫೆ. 12: ಭಾರತೀಯ ವಿದ್ಯಾಭವನ ಯೋಗಕೇಂದ್ರ, ಅಶ್ವಿನಿ ಯೋಗ ಕೇಂದ್ರ, ಪಥಂಜಲಿ ಯೋಗ ಶಿಕ್ಷಣ ಸಮಿತಿ, ಎಫ್‍ಎಂಸಿ ಯೋಗಿಸೈನ್ಸ್ ಇವುಗಳನ್ನೊಳ ಗೊಂಡು ರಥ ಸಪ್ತಮಿಯ ಪ್ರಯುಕ್ತ ಇಂದು ಮುಂಜಾನೆ ರಾಜಾಸೀಟಿನಲ್ಲಿ 108 ಸೂರ್ಯ ನಮಸ್ಕಾರ ನಡೆಯಿತು. ಸುಮಾರು 136 ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ಮುಂಜಾನೆ 5.45 ರಿಂದ 7 ಗಂಟೆಯವರೆಗೆ ಮಂತ್ರಗಳೊಂದಿಗೆ ಸೂರ್ಯನಮಸ್ಕಾರ ನಡೆಯಿತು. 81 ವರ್ಷದ ವೃದ್ಧ ಸೋಮಣ್ಣ, 5 ವÀರ್ಷದ ವಯಸ್ಸಿನ ಸಾನ್ವಿ ಠಾಕೂರ್ ಎಂಬ ಮಗು ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.ಹೊನ್ನಮ್ಮನ ಕೆರೆ ದಡದಲ್ಲಿ ನಮಸ್ಕಾರ ಸೋಮವಾರಪೇಟೆ : ರಥ ಸಪ್ತಮಿ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಐತಿಹಾಸಿಕ ಹೊನ್ನಮ್ಮನ ಕೆರೆ ದಡದಲ್ಲಿ 108 ಸೂರ್ಯ ನಮಸ್ಕಾರ ಮಾಡಲಾಯಿತು.ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ರಾಗಿಣಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ 108 ಸೂರ್ಯ (ಮೊದಲ ಪುಟದಿಂದ) ನಮಸ್ಕಾರ ಮಾಡಿದರು. ನಂತರ ಪ್ರಾಣಾಯಾಮ, ಶ್ರೀ ಹೊನ್ನಮ್ಮ ತಾಯಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕಾರ್ಯಕರ್ತರಾದ ಮೃತ್ಯುಂಜಯ, ವಿಜಯ್, ಪ್ರಮುಖರಾದ ಗೌಡಳ್ಳಿ ಸುನಿಲ್, ಕೊಮಾರಪ್ಪ, ಕವಿತ, ಮೇನಕ, ಶ್ರೀನಿವಾಸ್, ಸಂತೋಷ್, ಭರತ್ ಸೇರಿದಂತೆ ಇತರರು ಭಾಗವಹಿಸಿದ್ದರು.