ಸೋಮವಾರಪೇಟೆ, ಫೆ. 12: ಮಾರಣಾಂತಿಕ ಹಲ್ಲೆಯೊಂದಿಗೆ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾನ್ವೆಂಟ್ ಬಾಣೆ ನಿವಾಸಿ ವಾಸು ಎಂಬಾತ ತನ್ನ ನೆರೆಮನೆಯ ದೇವಿ ಪ್ರಸನ್ನ ಎಂಬವನಿಗೆ ಕತ್ತಿಯಿಂದ ಬೆನ್ನಿನ ಭಾಗಕ್ಕೆ ಕಡಿದು ಕೊಲೆಯತ್ನ ನಡೆಸಿದ್ದು, ಗಾಯಾಳು ಸೋಮವಾರಪೇಟೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ನಿನ್ನೆ ರಾತ್ರಿ ದೇವಿಪ್ರಸನ್ನನ ಸಹೋದರ ಪುನೀತ್ ಮತ್ತು ಪಕ್ಕದ ಮನೆಯ ಲೋಕೇಶ್ ಅವರುಗಳ ನಡುವೆ ಜಗಳ ನಡೆಯುತ್ತಿದ್ದ ಸಂದರ್ಭ ದೇವಿಪ್ರಸನ್ನ ಜಗಳ ಬಿಡಿಸಲು ಹೋಗಿದ್ದು, ಈ ಸಂದರ್ಭ ಆರೋಪಿ ವಾಸು, ತನ್ನ ಬಳಿಯಿದ್ದ ಕತ್ತಿಯಿಂದ ದೇವಿ ಪ್ರಸನ್ನನ ಬೆನ್ನಿಗೆ ಕಡಿದಿದ್ದಾನೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಆರೋಪಿ ವಾಸುನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.