ಸೋಮವಾರಪೇಟೆ, ಫೆ. 12: ವಕೀಲರ ಕ್ಷೇಮಾಭಿವೃದ್ಧಿಗಾಗಿ ರಾಷ್ಟ್ರಮಟ್ಟದಲ್ಲಿ ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ, ಬಜೆಟ್‍ನಲ್ಲಿ ವಕೀಲ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಸೋಮವಾರಪೇಟೆ ವಕೀಲರ ಸಂಘದ ಸದಸ್ಯರುಗಳು, ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟಿಸಿದರು.

ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ಅವರ ನೇತೃತ್ವದಲ್ಲಿ ಕಲಾಪದಿಂದ ಹೊರಬಂದ ಸದಸ್ಯರುಗಳು, ತಕ್ಷಣ ಸರ್ಕಾರಗಳು ವಕೀಲರ ಪರಿಷತ್‍ನ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ವಕೀಲರ ಕ್ಷೇಮಾಭಿವೃದ್ಧಿಗಾಗಿ ಕಾಯ್ದೆಯನ್ನು ಜಾರಿಗೆ ತರುವಂತೆ ಈ ಹಿಂದೆಯೇ ಬೇಡಿಕೆ ಇಟ್ಟಿದ್ದರೂ ಸಹ ಯಾವದೇ ಸ್ಪಂದನ ದೊರೆತಿಲ್ಲ. ಇದರೊಂದಿಗೆ ಬಜೆಟ್‍ನಲ್ಲಿಯೂ ವಕೀಲರ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಈ ಹಿನ್ನೆಲೆ ಪರಿಷತ್‍ನ ಸೂಚನೆಯಂತೆ ಕಲಾಪದಿಂದ ಹೊರಗುಳಿಯಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ಹೇಳಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೆ.ಎಸ್. ಪದ್ಮನಾಭ್, ಜಯೇಂದ್ರ, ಕಾಟ್ನಮನೆ ವಿಠಲ್ ಗೌಡ, ಚನ್ನಬಸವಯ್ಯ, ಹೆಚ್.ಎಸ್. ಪ್ರಕಾಶ್, ಪೂವಯ್ಯ, ಬಿ.ಜೆ. ದೀಪಕ್, ಪ್ರೀತಿ, ಪವಿತ್ರ, ರೂಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಮಡಿಕೇರಿಯಲ್ಲಿ...

ಮಡಿಕೇರಯಲ್ಲೂ ಕುಡ ವಕೀಲರ ಸಂಘದ ಅಧ್ಯಕ್ಷ ಕವನ್ ಮಾದಪ್ಪ ಅವರ ನೇತೃತ್ವದಲ್ಲಿ ವಕೀಲರು ಪ್ರತಿಭಟಿಸಿದರು.