ಚೆಟ್ಟಳ್ಳಿ, ಫೆ. 12: ಪೊನ್ನಂಪೇಟೆ ಸಮೀಪದ ಮಾಪಿಳ್ಳೆÀತೋಡುವಿನ ಸ್ನೇಹ ಯುವಕ ಸಂಘದ ವತಿಯಿಂದ ನಡೆದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಓಯಸಿಸ್ ಹೊದವಾಡ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಫೈನಲ್ ಪಂದ್ಯಾಟ ಓಯಸಿಸ್ ಹೊದವಾಡ ಹಾಗೂ ಕುಶಾಲನಗರ ಸಮೀಪದ ಕೂಡಿಗೆ ತಂಡಗಳ ನಡುವೆ ನಡೆಯಿತು. ಇದಕ್ಕೂ ಮೊದಲು ಮೊದಲನೇ ಸೆಮಿಫೈನಲ್ ಹೊದವಾಡ ಹಾಗೂ ಹಾಕತ್ತೂರು ತಂಡಗಳ ನಡುವೆ ನಡೆಯಿತು. ಹಾಕತ್ತೂರು ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದರು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೂಡಿಗೆ ತಂಡವು ಆತಿಥೇಯ ಮಾಪಿಳ್ಳೆತೋಡು ತಂಡವನ್ನು ಮಣಿಸಿ ಫೈನಲ್‍ಗೆ ಲಗ್ಗೆಯಿಟ್ಟಿತು. ಪಂದ್ಯಾಟ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಹೊದವಾಡ ತಂಡದ ಕಿಶನ್ ಪಡೆದರು. ಪಂದ್ಯಾಟದಲ್ಲಿ ಒಟ್ಟು 25ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.