ಗೋಣಿಕೊಪ್ಪ ವರದಿ, ಫೆ. 10: ಮಡಿವಾಳ ಜಿಲ್ಲಾ ಸಂಘದ ಸಭೆ ಕರೆಯದೆ 2 ವರ್ಷಗಳು ಕಳೆದಿರುವದರಿಂದ ಸಂಘದ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ, ಇದರಿಂದಾಗಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಕೂಡಲೇ ಸಂಘದ ಸಭೆ ಕರೆಯುವ ಮೂಲಕ ಜನಾಂಗದ ಸಂಘಟನೆ ಚಟುವಟಿಕೆಗೆ ಅವಕಾಶ ನೀಡಬೇಕು ಎಂದು ಸಂಘದ ಪ್ರಮುಖರು ಒತ್ತಾಯಿಸಿದ್ದಾರೆ. ಹೇಳಿಕೆಯಲ್ಲಿ ಒತ್ತಾಯಿಸಿರುವ ಸಂಘದ ಉಪಾಧ್ಯಕ್ಷ ಶೋಬಿಕಾ, ಗೌರವ ಅಧ್ಯಕ್ಷ ಸುಶೀಲ ಹಾಗೂ ಸಹ ಕಾರ್ಯದರ್ಶಿ ವಿನೋದ್ ಇವರುಗಳು, ಕೂಡಲೇ ಸಂಘದ ಸಭೆ ಕರೆಯಬೇಕು. 2 ವರ್ಷಗಳ ಹಿಂದೆ ಜನಾಂಗದವರಿಗೆ ನಡೆದ ಕ್ರೀಡಾಕೂಟದ ನಂತರ ಯಾವ ಚಟುವಟಿಕೆ ನಡೆಯದೆ ಇರುವದರಿಂದ ಚಟುವಟಿಕೆಗೆ ಹಿನ್ನಡೆಯಾಗಿದೆ ಎಂದು ತಿಳಿಸಿದ್ದಾರೆ.