ಕೂಡಿಗೆ, ಫೆ. 10: ಸೋಮವಾರಪೇಟೆ ವಲಯ ಅರಣ್ಯ ಇಲಾಖೆ, ಹೆಬ್ಬಾಲೆ ಅರಣ್ಯ ಉಪ ವಲಯ ವತಿಯಿಂದ ಕಣಿವೆ ಸಮೀಪದಲ್ಲಿರುವ ಅರಣ್ಯ ಸಸ್ಯ ಕ್ಷೇತ್ರದಲ್ಲಿ ರೈತರಿಗೆ ನೀಡಲು ಮತ್ತು ಅರಣ್ಯದಲ್ಲಿ ನೆಡಲು ಸಿದ್ಧಗೊಳ್ಳುತ್ತಿರುವ ಸಸಿಗಳನ್ನು ಸೋಮವಾರಪೇಟೆ ತಾಲೂಕು ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್ ಪರಿಶೀಲಿಸಿದರು. ಈ ಸಾಲಿನಲ್ಲಿ ವಿವಿಧ ಸಸ್ಯ ಕ್ಷೇತ್ರಗಳ ಮೂಲಕ ಲಕ್ಷಗಟ್ಟಲೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಅವುಗಳನ್ನು ಅವಶ್ಯಕತೆಗನುಗುಣವಾಗಿ ರೈತರಿಗೆ ವಿತರಿಸಿ, ಕಾಡಿನಲ್ಲೂ ನೆಡುವದು ಮುಖ್ಯ ಉದ್ದೇಶವಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಶ್ರೀಗಂಧದ ಗಿಡಗಳನ್ನು ವಿವಿಧ ಸಸ್ಯ ಕ್ಷೇತ್ರಗಳಲ್ಲಿ ಬೆಳೆಯಲಾಗಿದೆ ಎಂದರು. ಈ ಸಂದರ್ಭ ಬಾಣಾವರ ಉಪ ವಲಯಾಧಿಕಾರಿ ಮಹದೇವನಾಯಕ್, ಹೆಬ್ಬಾಲೆ ಉಪ ವಲಯದ ಅರಣ್ಯಾಧಿಕಾರಿ ಶಶಿಕಾಂತ್, ಹುದುಗೂರು ಸತೀಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.