ಗೋಣಿಕೊಪ್ಪ ವರದಿ, ಫೆ. 10: ಆಂಧ್ರ ಪ್ರದೇಶದ ಗುಂಟೂರುವಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್‍ನ 4ನೇ ದಿನದ ಕ್ರೀಡಾಕೂಟದಲ್ಲಿ ಕೊಡಗು ತಂಡಕ್ಕೆ 2 ಪದಕ ದೊರೆಕಿದೆ.

65 ವಯೋಮಿತಿಯ 200 ಮೀಟರ್ ಓಟದಲ್ಲಿ ಮುಲ್ಲೇರ ಪೊನ್ನಮ್ಮ ಪೂವಣ್ಣ ಪ್ರಥಮ ಸ್ಥಾನ ಪಡೆದು ಚಿನ್ನದ ಪಧಕ ಗೆದ್ದುಕೊಂಡರು. 35 ವಯೋಮಿತಿಯ ಶಾಟ್‍ಪುಟ್ ಎಸೆತದಲ್ಲಿ ಬೊಪ್ಪಂಡ ಕುಸುಮ ಭೀಮಯ್ಯ 2 ನೇ ಸ್ಥಾನದ ಮೂಲಕ ಬೆಳ್ಳಿ ಪಡೆದರು. 50 ವಯೋಮಿತಿಯ 80 ಮೀಟರ್ ಹರ್ಡಲ್ಸ್‍ನಲ್ಲಿ ಕೆ.ಎಸ್. ಕಮಲಮ್ಮ 4 ನೇ ಸ್ಥಾನ ಪಡೆದುಕೊಂಡು, ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಇದರಿಂದಾಗಿ ಇಲ್ಲಿವರೆಗೆ ಕೊಡಗು ತಂಡ 4 ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದಂತಾಗಿದೆ.