ಮಡಿಕೇರಿ, ಫೆ. 7: ಮೂರ್ನಾಡು ಪದವಿ ಕಾಲೇಇನ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿಚಾರಧಾರೆಗಳನ್ನು ಪ್ರಚುರಪಡಿಸಲು ‘ಕ್ಯಾಂಪಸ್ ಕ್ರೋನಿಕಲ್’ ಸಂಚಿಕೆಯನ್ನು, ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಅವರು ಇಂದು ಬಿಡುಗಡೆಗೊಳಿಸಿದರು. ಕಾಲೇಜಿನಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಈ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಕರ ಪ್ರಯತ್ನಕ್ಕೆ ಒತ್ತು ನೀಡುವ ಮೂಲಕ ಹೆಚ್ಚು ಹೆಚ್ಚು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಅಲ್ಲದೆ, ಕಾಲೇಜಿನ ಉಪನ್ಯಾಸಕ ವೃಂದದೊಡಗೂಡಿ, ವಿದ್ಯಾರ್ಥಿಗಳು ಇಂತಹ ಸಂಚಿಕೆಯ ಅಧ್ಯಯನದ ಮಡಿಕೇರಿ, ಫೆ. 7: ಮೂರ್ನಾಡು ಪದವಿ ಕಾಲೇಇನ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿಚಾರಧಾರೆಗಳನ್ನು ಪ್ರಚುರಪಡಿಸಲು ‘ಕ್ಯಾಂಪಸ್ ಕ್ರೋನಿಕಲ್’ ಸಂಚಿಕೆಯನ್ನು, ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಅವರು ಇಂದು ಬಿಡುಗಡೆಗೊಳಿಸಿದರು. ಕಾಲೇಜಿನಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಈ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಕರ ಪ್ರಯತ್ನಕ್ಕೆ ಒತ್ತು ನೀಡುವ ಮೂಲಕ ಹೆಚ್ಚು ಹೆಚ್ಚು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಅಲ್ಲದೆ, ಕಾಲೇಜಿನ ಉಪನ್ಯಾಸಕ ವೃಂದದೊಡಗೂಡಿ, ವಿದ್ಯಾರ್ಥಿಗಳು ಇಂತಹ ಸಂಚಿಕೆಯ ಅಧ್ಯಯನದ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.

ವಿದ್ಯಾರ್ಥಿ ಜೀವನದಲ್ಲಿ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜ ಹಾಗೂ ದೇಶಕ್ಕೆ ಕೊಡುಗೆ ನೀಡುವಲ್ಲಿ ಪ್ರಯತ್ನಶೀಲರಾಗುವಂತೆ ತಿಳಿ ಹೇಳಿದ ಅವರು, ಏಕಾಗ್ರತೆಯಿಂದ ಪಠ್ಯಕ್ರಮಗಳನ್ನು ಆಲಿಸುವದು ಮತ್ತು ಸತತ ಪರಿಶ್ರಮದಿಂದ ಆದರ್ಶ ವ್ಯಕ್ತಿತ್ವ ರೂಪಸಿಕೊಳ್ಳಲು ಸಾಧ್ಯವೆಂದು ನೆನಪಿಸಿದರು.

‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಉಪನ್ಯಾಸಕ ಕಿಗ್ಗಾಲು ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರು ಗಳಾದ ಕಲ್ಪನ, ನವೀನ್, ವಿಲ್ಮಾ ಮೊದಲಾದವರು ಉಪಸ್ಥಿತರಿದ್ದರು.