ಮಡಿಕೇರಿ, ಫೆ. 7: ಇಲ್ಲಿನ ಮಹದೇವಪೇಟೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ 5ನೇ ವರ್ಷದ ಪುನರ್‍ಪ್ರತಿಷ್ಠಾಪನಾ ವಾರ್ಷಿಕೋತ್ಸವವು ನಿನ್ನೆ ಹಾಗೂ ಇಂದು ವಿವಿಧ ದೈವಿಕ ಕೈಂಕರ್ಯಗಳೊಂದಿಗೆ ನೆರವೇರಿತು. ನಿನ್ನೆ ವಾರ್ಷಿಕೋತ್ಸವ ಪ್ರಯುಕ್ತ ವಾಸವಿ ಹೋಮ, ವಾಸವಿ ಮಹಿಳಾ ಸಮಾಜದಿಂದ ಭಜನೆ, ಕೋಲಾಟ ಇತ್ಯಾದಿ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.

ಇಂದು ಬೆಳಿಗ್ಗೆ ಸನ್ನಿಧಿಯಲ್ಲಿ ಗಣಹೋಮ, ನವಗ್ರಹ ಹೋಮ, ವಾಸವಿ ಹೋಮ, ಅಭಿಷೇಕ ಸೇವೆಗಳೊಂದಿಗೆ ವಿಶೇಷ ಅಲಂಕಾರ ಪೂಜೆ ಬಳಿಕ ಮಹಾಪೂಜೆ ನಡೆಸಲಾಯಿತು. ಆ ನಂತರ ಪ್ರಸಾದ ವಿತರಣೆ, ಅನ್ನದಾನ ಏರ್ಪಡಿಸಲಾಗಿತ್ತು. ಅಧಿಕ ಸಂಖ್ಯೆಯಲ್ಲಿ ಸದ್ಭಕ್ತರೊಂದಿಗೆ ಸಾರ್ವಜನಿಕರು ದೈವಿಕ ಕೈಂಕರ್ಯದೊಂದಿಗೆ ಅನ್ನದಾನ, ಪ್ರಸಾದ ಸ್ವೀಕರಿಸಿ ಪುನೀತರಾದರು.

ಸಂಜೆಯ ಬಳಿಕ ಶ್ರೀ ಕನ್ನಿಕಾಪರಮೇಶ್ವರಿ ಸನ್ನಿಧಿಯಲ್ಲಿ ಪ್ರಾಕಾರೋತ್ಸವ, ಮಹಾಪೂಜೆ ಯೊಂದಿಗೆ ಭಜನೆ ನಡೆಸಲಾಯಿತು. ಮಡಿಕೇರಿ ಆರ್ಯವೈಶ್ಯ ಮಂಡಳಿ ಹಾಗೂ ದೇವಾಲಯ ಸಮಿತಿ ಪದಾಧಿಕಾರಿಗಳು ವಾರ್ಷಿಕೋತ್ಸವ ಉಸ್ತುವಾರಿಯಲ್ಲಿ ಪಾಲ್ಗೊಂಡಿದ್ದರು.

-ಶ್ರೀಸುತ.