ಮಡಿಕೇರಿ, ಫೆ. 7: ಮಡಿಕೇರಿಯ ಜ್ಯೋತಿ ಕ್ಯಾಲೀಗ್ರಫಿ ಮತ್ತು ಹ್ಯಾಂಡ್ ರೈಟಿಂಗ್ ತರಗತಿಗಳ ವತಿಯಿಂದ ಪ್ರಥಮ ಬಾರಿಗೆ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಹಿರಿಯರಿಗೆ ಕ್ಯಾಲೀಗ್ರಫಿ ಮತ್ತು ಹ್ಯಾಂಡ್ ರೈಟಿಂಗ್ (ಕೈಬರಹ) ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು.

ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಸಂತ ಮೈಕಲರ ಶಾಲೆ ಹಾಗೂ ಸಂತ ಜೋಸೆಫರ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕ್ಯಾಲೀಗ್ರಫಿ ಸ್ಪರ್ಧೆಯಲ್ಲಿ ವಿಜೇತರ ವಿವರ ಇಂತಿದೆ: 3 ರಿಂದ 5ನೇ ತರಗತಿ - ಪ್ರಥಮ ಸಿಂಚನಾ, ದ್ವಿತೀಯ ವೈಷ್ಣವಿ, ತೃತೀಯ ರಶ್ಮಿ. 6 ರಿಂದ 8ನೇ ತರಗತಿ ವಿಭಾಗ - ಪ್ರಥಮ ರಚನಾ ಎಂ, ದ್ವಿತೀಯ ರುಮಾನ, ತೃತೀಯ ಲಾಸ್ಯ. 9 ಮತ್ತು 10ನೇ ತರಗತಿ ವಿಭಾಗ - ಮನೀಷ್ ರೈ ಪ್ರಥಮ ಅವ್ಯಕ್ತ ದ್ವಿತೀಯ, ಮಮತಾ ಹೆಚ್. ತೃತೀಯ.

ಹಿರಿಯರ ಗುಂಪು: ಪ್ರಥಮ ಚೈತನ್ಯ, ದ್ವಿತೀಯ ಶ್ರೀಲತಾ ಗುಡ್ಡೇಹಿತ್ಲು, ತೃತೀಯ ನಮೃತಾ.

ಕೈಬರಹ (ಹ್ಯಾಂಡ್ ರೈಟಿಂಗ್) ಸ್ಪರ್ಧೆಯ ವಿಜೇತರು: ಪ್ರಥಮ ಪ್ರವೀಣಾ ಎಂ.ಎ, ದ್ವಿತೀಯ ಅಭೀಜ್ಞಾ ಹೆಚ್.ಪಿ. ತೃತೀಯ ಶ್ರೀದೇವಿ ಗುಡ್ಡೇಹಿತ್ಲು. ಸಮಾಧಾನಕರ ಬಹುಮಾನ - ಆಶಿತ್ ಡಿಸೋಜ, ಗಾನವಿ ಎಸ್.ಪಿ, ಪೃಥ್ವಿಕ್ ಎಂ.ಎಸ್., ಮಮತಾ ಶಾಸ್ತ್ರಿ ಮತ್ತು ಉಷಾ ಅಯ್ಯಣ್ಣ ಸ್ಪರ್ಧೆಗಳ ತೀರ್ಪು ಗಾರರಾಗಿದ್ದರು. ಜ್ಯೋತಿ ಕ್ಯಾಲೀಗ್ರಫಿ ಮತ್ತು ಹ್ಯಾಂಡ್ ರೈಟಿಂಗ್ ತರಗತಿಗಳ ಆಯೋಜಕಿ ನಮಿತಾ ಆರ್ ರಾವ್, ಜನರಲ್ ತಿಮ್ಮಯ್ಯ ಶಾಲೆಯ ಶಿಕ್ಷಕಿ ವೀಣಾ ಉಮೇಶ್ ಸ್ಪರ್ಧೆಗಳನ್ನು ನಿರ್ವಹಿಸಿದ್ದರು.