ಮಡಿಕೇರಿ, ಫೆ. 7: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್‍ಗಳು, ಖಾಸಗಿ ಪ್ರಯೋಗ ಶಾಲೆಗಳು, ಎಕ್ಸ್-ರೇ ಸೆಂಟರ್‍ಗಳು, ಐ-ಕ್ಲಿನಿಕ್‍ಗಳು, ಆಯುಷ್ ಕ್ಲಿನಿಕ್‍ಗಳು, ಸ್ಪಾ ಮತ್ತು ಮಸಾಜ್ ಸೆಂಟರ್‍ಗಳು, ಪಿಜಿಯೋಥರಪಿ ಸೆಂಟರ್‍ಗಳು ಕೆ.ಪಿ.ಎಂ.ಇ. ಕಾಯಿದೆ-2007ರ ಅಡಿಯಲ್ಲಿ 2018ರ ಜೂನ್ 14 ರಂದು ಹೊಸ ನೋಂದಣಿ ಮತ್ತು ನವೀಕರಣ ಮಾಡದೇ ಇರುವ ಸಂಸ್ಥೆಗಳು ಕಡ್ಡಾಯವಾಗಿ ಆನ್‍ಲೈನ್ ಮುಖಾಂತರ ಪರವಾನಿಗೆಗೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಈಗಾಗಲೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದ್ದರೂ ಸಹ ಕೆಲವೊಂದು ಖಾಸಗಿ ವೈದ್ಯಕೀಯ ಸಂಸ್ಥೆಯವರು ನೋಂದಣಿ ಮತ್ತು ನವೀಕರಣ ಮಾಡದಿರುವದು ಕಂಡು ಬಂದಿದೆ. ಈವರೆಗೆ ಅರ್ಜಿ ಸಲ್ಲಿಸದೇ ಇರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು ಈ ಕೂಡಲೇ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ತಪ್ಪಿದಲ್ಲಿ ಅಂತಹ ಕ್ಲಿನಿಕ್‍ಗಳ ವಿರುದ್ದ ಕೆ.ಪಿ.ಎಂ.ಇ. ಕಾಯಿದೆ-2007ರ ಮೇರೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವದು. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್: ಞಚಿಡಿhಜಿತಿ.gov.iಟಿ-ಞಠಿme ಚಿಛಿಣ ಔಡಿ ಞಠಿme ಚಿಛಿಣ googಟe seಚಿಡಿಛಿh ಮತ್ತು ಕಚೇರಿ ದೂ. 08272-225443 ನ್ನು ಸಂಪರ್ಕಿಸಬಹುದು.