ಸಂಪಾಜೆ, ಫೆ. 6: ಪ್ರಕೃತಿ ಸೊಬಗಿನ ಹಸುರಿನ ಮಧ್ಯೆ ಹೊದ್ದು ಮಲಗಿರುವ ವನಸಿರಿಯ ನಡುವೆ ಶೃಂಗಾರವಾಗಿ ಕಂಗೊಳಿಸುವ ಸಂಪಾಜೆಯಲ್ಲಿ ಕಳಸ ಹೊತ್ತ ಮಹಿಳೆಯರ ಕಲರವ, ಶಿವಮೊಗ್ಗ ಸಾಗರದಿಂದ ಬಂದಿದ್ದ ಮಹಿಳೆಯರ ಡೊಳ್ಳುಕುಣಿತ ಪುರುಷರನ್ನು ನಾಚಿಸುವಂತಹ ಚಿಕ್ಕಮಗಳೂರಿನ ಮಹಿಳೆಯರ ವೀರಗಾಸೆ, ಮಂಡ್ಯದ ಸವಿತಾ ಅವರ ತಂಡದಿಂದ ಪೂಜಾಕುಣಿತ, ಶಿವಮೊಗ್ಗ ಶೃತಿ ತಂಡದ ಲಂಬಾಣಿ ನೃತ್ಯ, ತರಿಕೆರೆ ತಾರಾದೇವಿ ತಂಡದ ನಂದಿಧ್ವಜ, ಕಂಸಾಳೆ, ಮಂಗಳೂರಿನ ನವೀನ ತಂಡದ ಗೊಂಬೆಕುಣಿತ, ಬಿ.ಸಿ.ರಸ್ತೆಯ ಮಹಿಳೆಯರಿಂದ ಕೀಲುಕುದುರೆ, ನಾಗರಹೊಳೆ ನಾಣಚ್ಚಿ ಹಾಡಿಯವರಿಂದ ಗಿರಿಜನ ನೃತ್ಯ, ಕೊಡಗಿನ ವಾಲಗ, ಕೋಲಾಟ, ರಾಮನಗರ ಜಿಲ್ಲೆಯ ಮೌನಶ್ರೀ ಅವರ ಪಠದ ಕುಣಿತ ಹೀಗೆ.., ಹತ್ತು ಹಲವಾರು ತಂಡಗಳು ಇವರೆಲ್ಲರಿಗೂ ಕಡಿಮೆ ಇಲ್ಲವೆಂಬಂತೆ ನೂರಾರು ಮಂದಿ ಸ್ವಸಹಾಯ, ಸ್ತ್ರೀಶಕ್ತಿ ಮಹಿಳೆಯರು ಸೇರಿ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಚಾಮರಕೊಡೆಗಳನ್ನು ಹಿಡಿದು ಸಾಗುವ ಅದ್ಧೂರಿ ಮೆರವಣಿಗೆ ನೋಡುವದೇ ಒಂದು ಚಂದ.
ಇಂತಹ ಅಪರೂಪದ ಕಾರ್ಯಕ್ರಮ ಕೊಡಗಿನ ಗಡಿಭಾಗ ಸಂಪಾಜೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಂಪಾಜೆ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಹಮ್ಮಿಕೊಂಡ ಮಹಿಳಾ ಸಾಂಸ್ಕøತಿಕ ಉತ್ಸವ ಕಾರ್ಯಕ್ರಮವು ಜನಮೆಚ್ಚುಗೆಗೆ ಪಾತ್ರವಾಯಿತು. ಹೊರಾಂಗಣದಲ್ಲಿ ಮಹಿಳೆಯರಿಂದ ಬಣ್ಣ ಬಣ್ಣದ ಚಿತ್ತಾರದ ರಂಗೋಲಿ ಭವ್ಯ ವೇದಿಕೆಯ ಮೇಲೆ ಕುಣಿದು ಕುಪ್ಪಳಿಸಿದ ಮೈಸೂರಿನ ದುರ್ಗಾ ಅಕಾಡೆಮಿ ಯುವತಿಯರು ಜಾನಪದ ನೃತ್ಯಕ್ಕೆ ನರ್ತನ ಮಾಡಿದರೆ, ವಿದೂಷಿ ಮಾಲಿನಿಯವರ ಹರಿಕಥೆ ಪ್ರೇಕ್ಷಕರು ತಲೆದೂಗುವಂತಿತ್ತು. ಜಯಲಕ್ಷ್ಮಿ ಸಹೋದರಿಯರ ಸ್ಯಾಕ್ಸೋವಾದನ ಕಂಡು ಕೇಳರಿಯದ ಸಂಗೀತ ಕಿವಿಗೆ ಇಂಪು ಕೊಡುತ್ತಿದ್ದರೆ ಮೈಸೂರಿನ ಆನಂದ್‍ರವರ ನಗೆಹನಿ ಯಾವದೋ ಲೋಕÀಕ್ಕೆ ಕೊಂಡೊಯ್ದು ಹೊಟ್ಟೆ ಹುಣ್ಣಾಗುವ ಹಾಗೆ ನಗೆಗಡಲಲ್ಲಿ ತೇಲಿಬಂತು, ಮೈಸೂರಿನ ಮಲ್ಲಿಗೆಯವರು ನಡೆಸಿಕೊಟ್ಟ ಸುಗಮ ಸಂಗೀತದ ಝೇಂಕಾರ, ಜನಪದ ಗೀತೆ, ಲಾವಣಿ, ಮೀನಾಕುಮಾರಿ ಯವರ ಗೀಗೀಪದ, ಲೀಲಾವತಿ ಕಲಾಯಿಯವರ ಜನಪದ ಗೀತೆ, ಸಂಗೀತ, ನೃತ್ಯ, ಭರತನಾಟ್ಯ ಒಂದಲ್ಲ ಎರಡಲ್ಲ ಹತ್ತು ಹಲವಾರು ಸಂಗೀತ ಕಾರ್ಯಕ್ರಮಗಳು ಜನಮನ ರಂಜಿಸಿದವು. ಸೇರಿದ ಸಾವಿರಾರು ಗ್ರಾಮಸ್ಥರು ಕಾರ್ಯಕ್ರಮದ ಸವಿಯನ್ನುಂಡು ಬಂದವರಿಗೆಲ್ಲಾ ರುಚಿಯಾದ ಊಟದೊಂದಿಗೆ ಸಂಪಾಜೆಯ ಇತಿಹಾಸವನ್ನು ಮರುಕಳಿಸಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ನಮ್ಮ ದೇಶದ ಆಚಾರ ವಿಚಾರ ಬೇರೆ ಬೇರೆ ಆದರೂ ಅನೇಕತೆಯಲ್ಲಿ ಏಕತೆ ಇದೆ. ಹಾಗೂ ಸಧೃಡÀ ಸಮಾಜ ನಿರ್ಮಾಣದ ಹೊಣೆ ಮಹಿಳೆಯರದ್ದಾಗಿದ್ದು, ಸಧೃಡ ಕುಟುಂಬದಲ್ಲಿ ತಾಯಿಯ ಹಾಗೂ ಪುರುಷರ ಯಶಸ್ವಿನ ಹಿಂದೆ ಮಹಿಳೆ ಪಾತ್ರ ಮುಖ್ಯ ಎಂದರು. ಇಂದಿನ ಯುಗದಲ್ಲಿ ಜಾನಪದ ಸಂಸ್ಕøತಿ ಉಳಿಸಿ ಬೆಳೆಸುವ ವ್ಯವಸ್ಥೆಯಾಗಬೇಕು. ಇವತ್ತಿನ ಭವ್ಯ ಮೆರವಣಿಗೆ ನೋಡಿದಾಗ ಸಂಪಾಜೆ ಒಂದು ಹೊಸತನ ಕಂಡಿದೆ; ಇದಕ್ಕೆ ಕಾರಣಕರ್ತರಾದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ದರ್ಶನ ಹಾಗೂ ಸಿಬ್ಬಂದಿಯವರು ಮೂಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗದೆ ನಮ್ಮ ನಾಡಿನ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದರು. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ. ಇದಕ್ಕೆ ಕಾರಣ ನಮ್ಮ ದೇಶದ ಮೂಲ ಸಂಸ್ಕøತಿ ಇದನ್ನು ಪ್ರತಿಬಿಂಬಿಸುವ ಕೆಲಸ ನಮ್ಮ ಯುವ ಜನಾಂಗದಿಂದ ಸಾಧ್ಯ ಎಂದರು.
ಸಮಾಜದಲ್ಲಿ ಮಹಿಳೆ ಎಂಬ ವಿಷಯದ ಮೇಲೆ ವಿಚಾರ ಮಂಡನೆ ಮಾಡಿದ ಸುಳ್ಯ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ|| ಯಶೋಧ ರಾಮಚಂದ್ರ ; ಇವತ್ತು ಎಲ್ಲಾ ರಂಗಗಳಲ್ಲೂ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ರಾಜಕೀಯವಾಗಿ ಸಾಮಾಜಿಕ ಕ್ಷೇತ್ರಗಳಲ್ಲಿ ಅಲ್ಲದೆ ಮನೆ ಮನೆಯಲ್ಲಿ ದೀಪ ಉರಿಸುವ ಕ್ರಿಯಾಶೀಲನೆ ಮಹಿಳೆಯಿಂದ ಆಗುತ್ತಿದ್ದು, ಕ್ರಿಯಾಶೀಲ ಮಹಿಳೆ ಇಲ್ಲದಿದ್ದಲ್ಲಿ ಆಯೋಗ್ಯ ಪುರುಷರು ಇರಲು ಸಾಧ್ಯವಿಲ್ಲ ಎಂದರು.
ಅಭಿವೃದ್ಧಿ ಎಂದರೆ ಅದು ಮಹಿಳೆಯ ಅಭಿವೃದ್ಧಿ ಅವಕಾಶಗಳಿಗೆ ತಕ್ಕಂತೆ ಸವಾಲುಗಳನ್ನು ಎದುರಿಸುವ ಛಲ ಮಹಿಳೆಯಲ್ಲಿದೆ ಎಂದರು ಗ್ರಾಮ ವಿಕಾಸವಾಗಬೇಕಾದರೆ ಮಹಿಳೆಯರ ಪಾತ್ರ ಮುಖ್ಯ ಸಜ್ಜನರ ನಿಷ್ಕ್ರಿಯತೆಯಿಂದ ಮಹಿಳೆಯರಿಗೆ ಅಧಿಕಾರ ಬಂದಿದೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮಹಿಳೆ ಪಾತ್ರ ಅವಶ್ಯಕ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ ಕುಂದಲ್ಪಾಡಿ ಮಾತನಾಡಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ ಕುಟುಂಬದಲ್ಲಿ ಮಹಿಳೆಯರ ತಾತ್ಸಾರ ಮಾಡಬಾರದು ಎಂದು ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿ ಸಂಪಾಜೆ ವಿ.ಎಸ್.ಎಸ್.ಎನ್. ಅಧ್ಯಕ್ಷ ಬಾಲಚಂದ್ರ ಕಳಗಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಮಹಿಳೆಯರಲ್ಲಿ ಜಾಗೃತಿ ಭಾವನೆ ಮೂಡುತ್ತದೆ. ಮಹಿಳೆ ಕುಟುಂಬದ ಆಧಾರಸ್ತಂಭ ಎಂದು ಹೇಳಿದರು. ಸಭಾ ಅಧ್ಯಕ್ಷತೆ ವಹಿಸಿದ್ದ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಚಿದ್ಕಾರ್ ಮಾತನಾಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇಂತಹ ಕಾರ್ಯಕ್ರಮವನ್ನು ನಮ್ಮ ಗ್ರಾಮದಲ್ಲಿ ಆಯೋಜಿಸಿರುವದು ಹೆಮ್ಮೆ ಎಂದರು
ವೇದಿಕೆಯಲ್ಲಿ ಕರ್ನಾಟಕ ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್, ಶ್ರೀ ಪಂಚಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ರಾಜರಾಮ ಕಳಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಎಂ. ಶೋಭಾರಾಣಿ, ಧರ್ಮಸ್ಥಳ ಒಕ್ಕೂಟದ ಭಾರತಿ ಚಂದ್ರಶೇಖರ, ವಾಣಿಜಗದೀಶ್, ಹಿರಿಯ ಕಲಾವಿದ ಕೆ.ಕೆ.ದೇವಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಅರ್.ಸುಂದರ ಮತ್ತಿತರರು ಇದ್ದರು.
ಕಾರ್ಯಕ್ರಮ ಸಂಯೋಜನೆ ಮಾಡಿದ ಸಂಪಾಜೆ ಹೋಬಳಿ ಘಟಕದ ಕ.ಸಾ.ಪ.ಅಧ್ಯಕ್ಷ ಹಾಗೂ ಸಂಪಾಜೆ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಹೆಚ್.ಜಿ.ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ಸ್ವಾಗತಿಸಿ, ಮಣಜೂರು ಮಂಜುನಾಥ್ ವಂದಿಸಿದರು.