ಮಡಿಕೇರಿ, ಫೆ. 5: ಬಿಳಿಗೇರಿಯ ಶ್ರೀ ಪನ್ನಂಗಾಲತಮ್ಮೆ ದೇವಾಲಯದ ವಾರ್ಷಿಕ ಉತ್ಸವ ತಾ. 11 ಮತ್ತು 12 ರಂದು ನಡೆಯಲಿದೆ. ಇದರ ಅಂಗವಾಗಿ ತಾ. 11 ರಂದು ಶ್ರೀ ಕಾಳೆಘಾಟ ಇಲ್ಲಿತ್‍ನ ಸಂದೀಪ್ ತಂತ್ರಿಯವರಿಂದ ಬೆಳಿಗ್ಗೆ 8 ಗಂಟೆಯಿಂದ ಗಣಹೋಮ, ಶುದ್ಧ ಕಲಶ ನಂತರ 12 ಗಂಟೆಗೆ ಕುದುರೆಯಾಟ, ಹಬ್ಬದ ಕಟ್ಟು ಮುರಿಯುವದು ಹಾಗೂ ದೇವರು ಬಲಿಬರುವದು, ಅನ್ನದಾನ, ಜಳಕ ಕಾರ್ಯಕ್ರಮ ನಡೆಯಲಿದೆ.