ಮಡಿಕೇರಿ, ಫೆ. 5: ಮಡಿಕೇರಿ ನಗರ ಸಭೆಯ ಮುಂಭಾಗದ ಸನಿಹ ಇಂದು ಸಂಜೆ ಕೇರಳ ರಾಜ್ಯದ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಮಾರಾಟ ದಂಧೆ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ತಾಳತ್‍ಮನೆಯ ಕೆ.ಆರ್. ಕುಶಾಲಪ್ಪ ಬಂಧಿನತಾಗಿದ್ದು, ಆತನಿಂದ ರೂ.8,430 ನಗದು ಹಾಗೂ ಮೊಬೈಲ್ ವಶಪಡಿಸಿ ಕೊಳ್ಳಲಾಗಿದೆ. ಡಿವೈಎಸ್‍ಪಿ ಸುಂದರ್‍ರಾಜ್, ಸಿಐ ಅನೂಪ್‍ಮಾದಪ್ಪ, ಠಾಣಾಧಿಕಾರಿ ಷಣ್ಮುಗಂ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಹರೀಶ್, ಮಧುಸೂದನ್, ನಾಗರಾಜ್ ಕಾರ್ಯಾಚರಣೆ ನಡೆಸಿದ್ದಾರೆ.