ಮಡಿಕೇರಿ, ಫೆ. 5: ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ಟವರ್, ಆಂಟನಾ ಹಾಗೂ ಪ್ರಸಾರ ಯಂತ್ರದ ಉನ್ನತೀಕರಣ ಕಾರ್ಯ ನಡೆಯುತ್ತಿದ್ದು, ರೇಡಿಯೋ ಪ್ರಸಾರದಲ್ಲಿ ವ್ಯತ್ಯಯ ಉಂಟಾಗಿದೆ. ಒಂದೆರಡು ದಿನಗಳಲ್ಲಿ ದುರಸ್ತಿಕಾರ್ಯ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಪ್ರಸಾರದ ಗುಣಮಟ್ಟ ದ್ವಿಗುಣಗೊಳ್ಳಲಿದೆ ಎಂದು ಆಕಾಶವಾಣಿಯ ಪ್ರಕಟಣೆ ತಿಳಿಸಿದೆ.