ಮಡಿಕೇರಿ, ಫೆ.3: ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ, ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸುರಯ್ಯಾ ಅಬ್ರಾರ್ ಅವರು ನೇಮಕಗೊಂಡಿದ್ದಾರೆ. ಎ.ಐ.ಸಿ.ಸಿ. ಮಹಿಳಾ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ಜನತ್ ಡಿಸೋಜಾ ಅವರು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಪ್ರಸಕ್ತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಅವರ ರಾಜೀನಾಮೆಯಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಸುರಯ್ಯಾ ಅಬ್ರಾರ್ ನೇಮಕಗೊಂಡಿದ್ದಾರೆ.

‘ಮೂಡಾ’ ಅಧ್ಯಕ್ಷರಾಗಿ ತನ್ನ ಕೆಲಸ ಗಮನಿಸಿ ವರಿಷ್ಠರು ಉತ್ತಮ ಹೊಣೆಗಾರಿಕೆ ವಹಿಸಿದ್ದಾರೆ ಎಂದು ಸುರಯ್ಯಾ ಅಬ್ರಾರ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ತಾ. 11ರಂದು ಕೆಪಿಸಿಸಿಯಿಂದ ಅಧಿಕೃತ ಆದೇಶ ಪತ್ರ ಲಭಿಸಲಿದ್ದು, ಆ ಬಳಿಕ ಅಧಿಕಾರ ವಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗುವದಾಗಿ ನುಡಿದರು.

ಈ ಹೊಣೆಗಾರಿಕೆ ಕಲ್ಪಿಸಿರುವ ರಾಷ್ಟ್ರ ಹಾಗೂ ರಾಜ್ಯ ಮುಖಂಡರೊಂದಿಗೆ ಜಿಲ್ಲಾ ಪ್ರಮುಖರ ಆಶಯದಂತೆ ಹೊಣೆಗಾರಿಕೆ ನಿಭಾಯಿಸುವೆ ಎಂದು ಮಾರ್ನುಡಿದರು.