ಕರಿಕೆ, ಫೆ. 3: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ಚೆತ್ತುಕಾಯ ಶಾಸ್ತಾವು ದೇವಸ್ಥಾನ ರಸ್ತೆ, ಆಲತ್ತಿಕಾಡವು ಕರ್ವಚಾಲು ಕಾಲೋನಿ ರಸ್ತೆ, ಕುಂಡತ್ತಿಕಾನ ಗಿರಿಜನ ಕಾಲೋನಿ ರಸ್ತೆ, ಕೊಳಂಗಾರೆ ಸೇತುವೆ ನಿರ್ಮಾಣ ಸೇರಿದಂತೆ ಇತರ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಇನ್ನುಳಿದ ರಸ್ತೆಗಳ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಗ್ರಾಮ ಪಂಚಾಯಿತಿ ಸದಸ್ಯೆ ಉಷಾಕುಮಾರಿ, ಜಿ.ಪಂ. ಇಂಜಿನಿಯರ್ ಶಂಕರ್, ಪ್ರಮುಖರಾದ ಹರೀಶ್ ಹೊಸಮನೆ, ನಿಡ್ಯಮಲೆ ಬಾಲಕೃಷ್ಣ, ಆರ್‍ಎಂಸಿ ಸದಸ್ಯ ಕೆ.ಎ. ನಾರಾಯಣ, ಗುತ್ತಿಗೆದಾರರಾದ ಪ್ರಭಾಕರ್, ರಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.