ಗೋಣಿಕೊಪ್ಪ ವರದಿ, ಫೆ. 3: ಬದುಕು ಕಟ್ಟಿಕೊಳ್ಳಲು ಸಾಕಷ್ಟು ಕ್ಷೇತ್ರಗಳಲ್ಲಿ ಅವಕಾಶವಿರುವದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕದೆ ಶಿಕ್ಷಣದಲ್ಲಿ ಮುಂದುವರಿಯಬೇಕು ಎಂದು ಅಥ್ಲೀಟ್ ಅರ್ಜುನ್ ದೇವಯ್ಯ ಸಲಹೆ ನೀಡಿದರು.
ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳಿಗೆ ಆಸಕ್ತಿ ಇರುವ ವಿಷಯದಲ್ಲಿ ಹೆಚ್ಚು ಒತ್ತು ನೀಡುವದರಿಂದ ಹೆಚ್ಚು ಬೆಳೆಯಲು ಸಹಕಾರಿಯಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ವಿಪುಲ ಅವಕಾಶವಿರುವದರಿಂದ ಶಿಕ್ಷಣ ಸಂದರ್ಭ ಉದ್ಯೋಗದ ವಿಚಾರದಲ್ಲಿ ಅನವಶ್ಯಕ ಗೊಂದಲಕ್ಕೆ ಒಳಗಾಗುವದು ಬೆಳವಣಿಗೆ ಕುಂಠಿತಕ್ಕೆ ಕಾರಣವಾಗುತ್ತದೆ ಎಂದರು.
ಮಕ್ಕಳ ವಯಸ್ಸಿಗೆ ಅನುಗುಣವಾಗಿ ಬದಲಾವಣೆಯನ್ನು ಗಮನಿಸಿ ಮಾಹಿತಿ ನೀಡುವ ಶಿಕ್ಷಣ ಹೆಚ್ಚಾಗಬೇಕಿದೆ. ಇದರಿಂದ ಅವರಲ್ಲಿ ಭಯವನ್ನು ಹೋಗಲಾಡಿಸಬಹುದು ಎಂದರು.