ಮಡಿಕೇರಿ, ಫೆ. 3: ಕೊಡಗಿನ ಕಥೆಗಾರ್ತಿ ದಿವಂಗತ ಗೌರಮ್ಮ ಅವರ ನೆನಪಿಗಾಗಿ ಅವರ ಪುತ್ರ ದಿ. ವಸಂತ್ ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಸ್ಪರ್ಧಾ ದತ್ತಿ ಕಾರ್ಯಕ್ರಮದ ಅಂಗವಾಗಿ ತಾ. 16 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಸಣ್ಣ ಕಥೆಗಳ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
ಆಸಕ್ತ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಶಾಲಾ ಮುಖ್ಯ ಶಿಕ್ಷಕರು ದೃಢೀಕರಿಸಿದ ಪತ್ರದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಕನ್ನಡ ಸಾಹಿತ್ಯ ಪರಿಷತ್ತು ತಿಳಿಸಿದೆ. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಾದವರಿಗೆ ನಗದು ಬಹುಮಾನ, ಪ್ರಶಂಸನಾ ಪತ್ರ ಮತ್ತು ಬಹುಮಾನವನ್ನು ಮಾರ್ಚ್ 5 ರಂದು ಕೊಡಗಿನ ಸಾಹಿತ್ಯ ದಿನವೆಂದು ಆಚರಿಸುತ್ತಿರುವ ದಿ. ಗೌರಮ್ಮ ಅವರ ಹುಟ್ಟುಹಬ್ಬದ ದಿನದಂದು ನೀಡಲಾಗುವದು. ಹೆಚ್ಚಿನ ಮಾಹಿತಿಗೆ ಬಿ.ಎಸ್. ಲೋಕೇಶ್‍ಸಾಗರ್ ಅಧ್ಯಕ್ಷರು, ಕ.ಸಾ.ಪ. 8277066123 ಸಂಪರ್ಕಿಸಲು ತಿಳಿಸಲಾಗಿದೆ.