ಚೆಟ್ಟಳ್ಳಿ, ಫೆ. 4: ಸಮೀಪದ ಕೊಂಡಂಗೇರಿಯ ಇಂದಾದುಲ್ ಇಸ್ಲಾಂ ಸಂಘದಿಂದ ಇಲ್ಲಿನ ಎರಡು ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅಲ್ ಹಾಜ್ ಉಮ್ಮರ್ ಸಖಾಫಿ ನೆರವೇರಿಸಿದರು.

ನಂತರ ಮಾತನಾಡಿದ ಉಮ್ಮರ್ ಸಖಾಫಿ ಇಂದಾದುಲ್ ಇಸ್ಲಾಂ ಸಂಘ ಕಳೆದ ಹಲವಾರು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವದರ ಮೂಲಕ ಬಡ ಕುಟುಂಬಗಳಿಗೆ ಸಹಾಯ ಹಸ್ತ ನೀಡುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.

ಈ ಸಂದರ್ಭ ಹನೀಫ್ ಸಖಾಫಿ, ಮಹಮ್ಮದ್ ಮುಸ್ಲಿಯಾರ್, ಅಬ್ದುರಹಮಾನ್ (ಅಂದಾಯಿ) ಇದ್ದರು.