ಮಡಿಕೇರಿ, ಫೆ. 3: ರೈತರೊಬ್ಬರು ಸಾಲಬಾಧೆ ತಾಳಲಾರದೆ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಬೆಟ್ಟತ್ತೂರು ಗ್ರಾಮ ನಿವಾಸಿ ಕುಶಾಲಪ್ಪ (73) ಅವರು ಇಂದು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಧರ್ಮಸ್ಥಳ ಸಂಘ ಹಾಗೂ ಇತರೆಡೆ ಸಾಲವಿದ್ದುದಾಗಿ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.