ಚೆಟ್ಟಳ್ಳಿ, ಫೆ. 2: ಬೆಂಗಳೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಕೊಡಗಿನವರಾದÀ ಚಲನಚಿತ್ರರಂಗದಲ್ಲಿ ಹೆಸರು ಗಳಿಸಿರುವ ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ಮಾಪಕತ್ವದ ಸ್ಮಶಾನ ಮೌನ ಚಲನಚಿತ್ರ ಆಯ್ಕೆಗೊಂಡಿದೆ.

ತಾ. 7 ರಿಂದ ತಾ. 14 ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯಲಿದ್ದು 65 ಕನ್ನಡ ಸಿನಿಮಾಗಳಲ್ಲಿ 15 ಸಿನಿಮಾ ಆಯ್ಕೆಗೊಂಡಿತ್ತು. ಇದರಲ್ಲಿ ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪರವರ ಪತ್ನಿಯ ಶೋಧ ಪ್ರಕಾಶ್ ಅವರ ಎಂಡಟೈನ್‍ಮೆಂಟ್ ಸಂಸ್ಥೆಯಡಿ ಪ್ರಕಾಶ್ ಕಾರ್ಯಪ್ಪ ನಿರ್ಮಾಪಕತ್ವದ “ಸ್ಮಶಾನಮೌನ” ಕನ್ನಡ ಸಿನಿಮಾ ಆಯ್ಕೆಯಾಗಿದೆ. ಹಿರಿಯ ಸಾಹಿತಿ ಕೆ. ಸೋಮಶೇಖರ್ ರಾವ್ ರಚಿಸಿರುವ ಸ್ಮಶಾನಮೌನ ಕಾದಂಬರಿ ಆಧಾರಿತ ಕಲಾತ್ಮಕ ಕನ್ನಡ ಚಲನಚಿತ್ರವಾಗಿದ್ದು ಈ ಚಲನ ಚಿತ್ರದಲ್ಲಿ ನಿಖಿಲ್ ಮಂಜು ಸಹಯೋಗದೊಂದಿಗೆ ಪ್ರಕಾಶ್ ಕಾರ್ಯಪ್ಪ ಅವರು ಕಥಾನಾಯಕನಾಗಿ ನಟಿಸಿದ್ದಾರೆ. ಮೂಲತಃ ಕೊಡಗಿನ ಚೇರಂಬಾಣೆಯವರಾದ ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪ ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ ಸೈನ್ಯಕ್ಕೆ ಸೇರ್ಪಡೆಗೊಂಡು ಕಾರ್ಗಿಲ್ ಯದ್ಧದಲ್ಲಿ ಪಾಲ್ಗೊಂಡಿದ್ದರು. ಶ್ರೀನಗರ, ಶೀಲಂಕಾ, ಗ್ವಾಲಿಯರ್, ಅಸ್ಸಾಂ, ನಾಗಲ್ಯಾಂಡ್ ಹಾಗೂ ರಾಜಸ್ಥಾನದಲ್ಲಿ ಸೇವೆ ಸಲ್ಲಿಸಿ 2000ನೇ ಇಸವಿಯಲ್ಲಿ ಹುಟ್ಟೂರಾದ ಕೊಡಗಿಗೆ ಬಂದು ನೆಲೆಸಿದರು.

ಆ ಸಮಯದಲ್ಲಿ ಕೊಡಗಿನ ಹಿರಿಯ ನಿರ್ದೇಶಕ ಎ.ಟಿ. ರಘು ಅವರ ಮಾರ್ಗದರ್ಶನದಲ್ಲಿ ಗೆಜ್ಜೆತಂಡ್, ಜಮ್ಮಭೂಮಿ, ನಂಗಕೊಡವ, ಇನ್ನೂ ಹಲವು ಧಾರಾವಾಹಿಗಳಲ್ಲಿ ಉತ್ತಮ ಪಾತ್ರದಲ್ಲಿ ನಟಿಸಿದ್ದರು. ಜನ ಮನ್ನಣೆಗೆ ಪಾತ್ರವಾದ ಬಾಕೆಮನೆ ಕೊಡವ ಚಲನ ಚಿತ್ರವನ್ನು ನಿರ್ಮಿಸಿದರು. ಬಾಕೆಮನೆ ಚಲನಚಿತ್ರ ಕೂಡ ಅಂತಾರ್ರಾಷ್ಟ್ರೀಯ ಕಲಾತ್ಮಕ ಸಿನಿಮೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿತ್ತು.

ಕೊಡಗಿನ ಬರಹಗಾರ್ತಿ ಉಳುವಂಗಡ ಕಾವೇರಿ ಉದಯ ಬರೆದಿರುವ ಪ್ರಕಾಶ್ ಕಾರ್ಯಪ್ಪ ನಿರ್ಮಾಪಕತ್ವದÀ ಕೊಡಗ್‍ರ ಸಿಪಾಯಿ ಕಾದಂಬರಿ ಆಧಾರಿತ ಕೊಡವ ಚಲನ ಚಿತ್ರ, ಆಶ್ರಯಧಾಮ ಮಕ್ಕಳ ಚಲನಚಿತ್ರ, ಮೇಸ್ಟೆದೇವರು ಕನ್ನಡ ಚಲನಚಿತ್ರವನ್ನು ಟಿ. ಜಯರಾಮರೆಡ್ಡಿ ನಿರ್ದೇಶನದಲ್ಲಿ ಪ್ರಕಾಶ್ ಕಾರ್ಯಪ್ಪನವರ ಕೂರ್ಗ್ ಕಾಫಿ ಉಡ್ ಸಂಸ್ಥೆಯಡಿ ಕೆಲವು ತಿಂಗಳಲ್ಲಿ ತೆರೆಕಾಣಲಿದೆ.

ಸೈನ್ಯದಲ್ಲಿ ಸಿವಿಲ್ ಸೇವೆಸಲ್ಲಿಸಿ ಅನುಭವವಿದ್ದದರಿಂದ ಸಿವಿಲ್ ಕೆ¯ಸದಲ್ಲಿ ಉದÀ್ಯಮಿಯಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಕಾರ್ಯಪ್ಪ ಅವರು 2004 ರಲ್ಲಿ ಯಶೋಧಳನ್ನು ವಿವಾಹವಾಗಿ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಾರೆ. ಪತ್ನಿ ಕೂಡ ಚಲನಚಿತ್ರ ರಂಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಕೊಡವ ಹಾಗೂ ಕನ್ನಡದಲ್ಲಿ ಇನ್ನೂ ಹಲವು ಚಲನಚಿತ್ರ ಹಾಗೂ ಧಾರಾವಾಹಿ ಗಳನ್ನು ನಿರ್ಮಿಸಲು ಹಂಬಲವಿದೆ ಯೆಂದು ಪ್ರಕಾಶ್ ಕಾರ್ಯಪ್ಪ ಹೇಳುತ್ತಾರೆ.

-ಪುತ್ತರಿರಕರುಣ್ ಕಾಳಯ್ಯ