ಮಡಿಕೇರಿ, ಫೆ. 2: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವು 2017-18 ನೇ ವರ್ಷದ ಕಾರ್ಯನಿರ್ವಹಣೆ ಪರಿಶೀಲನೆ ಹಾಗೂ 5 ನೇ ನಿಯಂತ್ರಣಾ ಅವಧಿಯ ಮತ್ತು ಹಣಕಾಸು ವರ್ಷ ಆರ್ಥಿಕ ವರ್ಷ - 20 ಕ್ಕೆ ವಿದ್ಯುತ್ ದರಗಳ ಪರಿಷ್ಕರಣೆಯ ಅರ್ಜಿ ಅನುಮೋದನೆಗೆ ಸಲ್ಲಿಸಿದ್ದು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತಾ. 5 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿರುವ ನ್ಯಾಯಾಲಯ ಸಭಾಂಗಣದಲ್ಲಿ ಅರ್ಜಿಯ ಸಂಬಂಧ ಸಾರ್ವಜನಿಕ ವಿಚಾರಣೆಯನ್ನು ಏರ್ಪಡಿಸಿದೆ. ಆಸಕ್ತರು ವಿಚಾರಣೆಯಲ್ಲಿ ಭಾಗವಹಿಸುವಂತೆ ಮೈಸೂರು ಚಾವಿಸನಿನಿ ಪ್ರಧಾನ ವ್ಯವಸ್ಥಾಪಕರು (ವಾಣಿಜ್ಯ) ತಿಳಿಸಿದ್ದಾರೆ.