*ಗೋಣಿಕೊಪ್ಪಲು, ಫೆ. 2: ಕಾವೇರಿ ವೆಂಕಟಪ್ಪ ಲೇಔಟ್, ಕಾವೇರಿ ಒಕ್ಕೂಟದ ಕುಟುಂಬ ವಾರ್ಷಿ ಕೋತ್ಸವ ಮತ್ತು ಮಹಾ ಸಭೆ ನಡೆಯಿತು. ಕ್ರೀಡಾ ಚಟುವಟಿಕೆ, ಸಾಂಸ್ಕøತಿ ಕಾರ್ಯಕ್ರಮ, ಶೈಕ್ಷಣಿಕ ಪುರಸ್ಕಾರ, ಅತಿಥಿಗಳಿಗೆ ಸನ್ಮಾನ ಹಾಗೂ ಸಮಿತಿ ಪುನರ್ ರಚನೆ ಸೇರಿ ದಂತೆ ಹತ್ತು ಹಲವು ಕಾರ್ಯಕ್ರಮಗಳಿಗೆ ಕಾವೇರಿ ಒಕ್ಕೂಟದ ಅಧ್ಯಕ್ಷ ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು. ಕ್ರೀಡಾ ಕೂಟದಲ್ಲಿ ಹಿರಿಯರು ಕಿರಿಯರು ಎನ್ನದೆ ಒಕ್ಕೂಟದ ಎಲ್ಲಾ ಸದಸ್ಯರು ಭಾಗವಹಿಸಿದರು. ಕಿರಿಯರಿಗೆ ಬಲೂನ್ ಊದುವದು, ಕಾಳು ಹೆಕ್ಕುವದು, ಕಪ್ಪೆ ಜಿಗಿತ, ಓಟ, ಬಿಸ್ಕೇಟ್ ಹಾರಿ ಕಚ್ಚುವದು ಹಾಗೂ ಹಿರಿಯರಿಗೆ ಭಾರದ ಗುಂಡು ಎಸೆತ, ಸೂಜಿಗೆ ನೂಲು ಹಾಕಿ ಓಡುವದು, ವೇಗದ ನಡಿಗೆ, ಮಡಕೆ ಒಡೆಯುವದು, ವಿಷದ ಬಾಲ್ ಎಂಬ ಗ್ರಾಮೀಣ ಕ್ರೀಡೆಗಳು ನಡೆದು ನೋಡುಗರಿಗೆ ಉಲ್ಲಾಸವನ್ನು ನೀಡಿತು. ಒಕ್ಕೂಟದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿತು. ಕನ್ನಡ, ಹಿಂದಿ, ಇಂಗ್ಲೀಷ್ ಹಾಡುಗಳಿಗೆ ಪುಟಾಣಿ ಮಕ್ಕಳು ಹೆಜ್ಜೆ ಹಾಕಿದರೆ ಉಳಿದವರು ತಮ್ಮದೆ ದಾಟಿಯಲ್ಲಿ ಗಾಯನ ಗೋಷ್ಠಿ ನಡೆಸುವ ಮೂಲಕ ರಂಜಿಸಿದರು.

ಸಭಾ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯೆ ನೂರೆರ ರತಿ ಅಚ್ಚಪ್ಪ ಮಾತನಾಡಿ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲು ಪಂಚಾಯಿತಿ ಮಟ್ಟದಲ್ಲಿ ವ್ಯವಸ್ಥೆಗೆ ಮುಂದಾಗು ವದಾಗಿ ಭರವಸೆ ನೀಡಿದರು. ಇದೀಗಾಗಲೇ ಪಂಚಾ ಯಿತಿ ಅನುದಾನದಿಂದ ಚರಂಡಿ ತಡೆಗೋಡೆ ಟ್ಯಾಂಕ್ ಸುಚಿತ್ವ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಡಾವಣೆಯಲ್ಲಿ ಯಾವದೇ ಸಮಸ್ಯೆಗಳಿದ್ದರೆ ಮಾಹಿತಿ ನೀಡಿದರೆ ಸಮಸ್ಯೆ ಬಗೆಹರಿಸಲಾಗು ವದೆಂದು ತಿಳಿಸಿದರು. ಕಾವೇರಿ ಒಕ್ಕೂಟದ ಗೌರವ ಅಧ್ಯಕ್ಷ ಹಾಗೂ ಸಂಚಾಲಕ ಸಣ್ಣುವಂಡ ರಜನ್ ತಿಮ್ಮಯ್ಯ ಮಾತನಾಡಿ ದೇಶ ಪ್ರಗತಿ ಹೊಂದಲು ಬಡಾವಣೆಗಳು, ಹಳ್ಳಿಗಳು ಪ್ರಗತಿ ಹೊಂದ ಬೇಕು. ಇಂದಿನ ಒತ್ತಡದ ಕೆಲಸ ಕಾರ್ಯಗಳ ನಡುವೆ ನಮ್ಮ ಮನೆಯ ಸಮೀಪದವರೆ ನಮಗೆ ಅಪರಿಚಿತರಾಗಿರುತ್ತಾರೆ.

ನಮ್ಮ ಸುತ್ತ ಮುತ್ತಲಿನವರನ್ನು ಪರಿಚಯಿಸಿಕೊಳ್ಳಲು ಈ ಕಾರ್ಯಕ್ರಮಗಳ ಮೂಲಕ ಸಾಧ್ಯವಿದೆ ಎಂದರು.

ಉದ್ಯಮಿ ಅಜ್ಜಿಕುಟ್ಟಿರ ಸಜನ್ ಚಂಗಪ್ಪ ಅವರನ್ನು ಕಾವೇರಿ ಒಕ್ಕೂಟ ದಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸ ಲಾಯಿತು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ರಾಣಿ ನಾರಾಯಣ, ಲೆಕ್ಕ ಪತ್ರ ಮಂಡನೆ ಖಜಾಂಚಿ ರಶೀದ್ ಹಾಗೂ ಸ್ವಾಗತ ಹೇಮಾವತಿ ಜನಾರ್ಧನ, ಪ್ರಾರ್ಥನೆ ಭುಮಿಕ ಹಾಗೂ ಕಾವೇರಿ ನಡೆಸಿಕೊಟ್ಟರು. ಕಾವೇರಿ ಒಕ್ಕೂಟದ ಉಪಾಧ್ಯಕ್ಷ ಮದನ್ ಶೆಟ್ಟಿ ಸದಸ್ಯರುಗಳಾದ ಜಿತೇಂದ್ರ, ರಂಜಿ ನಂಜಪ್ಪ, ಶ್ಯಾಮ್ ಕಾಳಪ್ಪ, ಜಾನ ಕಿ ಬೋಜಮ್ಮ, ಕೊಳೇರ ಸರಳ,ಅನಿತ ವಿಶ್ವನಾಥ್, ಯಶೋದ ರವಿ, ವಿವೇಕ್ ರಾಯಿಕರ್, ಪ್ರಶಾಂತ್, ಮೊಹಮದ್ ಆಲಿ, ನೆಲ್ಲಮಕ್ಕಡ ಪ್ರೇಮ, ಚಿಣ್ಣಪ್ಪ ಉಪಸ್ಥಿತರಿದ್ದರು.