ಚೆಟ್ಟಳ್ಳಿ, ಫೆ.1: ಕೊಡಗು ಸೇವಾ ಕೇಂದ್ರದ ಸಹಯೋಗದಲ್ಲಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿಯವರು ತಮ್ಮ ತಂಡದೊಡಗೂಡಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರ ಬೇಡಿಕೆಗಳನ್ನು ಪರಿಶೀಲಿಸಿದರು. ದೇವಸ್ತೂರು ಮಾರ್ಗವಾಗಿ ತೆರಳಿ, ಪಾಣತ್ತಲೆ ಜನಾರ್ದನ್ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿ, ಅವರ ಮನೆಯ ಪರಿಸ್ಥಿತಿಯನ್ನು ಕಂಡು ಹೊಸ ಮನೆಯನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದರು. ಜನಾರ್ಧನ ಅವರ ಪತ್ನಿ ಸರಕಾರದ ವಿಳಂಬ ನೀತಿ ಹಾಗೂ ಜಿಲ್ಲಾಡಳಿತದ ವೈಫಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲಿಂದ ಕುಕ್ಕೇರ ಪಳಂಗಪ್ಪ ಅವರ ಮನೆಗೆ ತೆರಳಿ ಅವರ ಮನೆ ಕುಸಿತಗೊಂಡಿದ್ದನ್ನು ಕಂಡು ಅವರಿಗೂ ಬದಲಿ ಮನೆ ನಿರ್ಮಿಸುವ ಭರವಸೆ ನೀಡಿದರು. ದೇವಸ್ತೂರು ಅಂಗನವಾಡಿಗೆ ತೆರಳಿ ಅಂಗನವಾಡಿಯ ಪರಿಸ್ಥಿತಿಯನ್ನು ವೀಕ್ಷಿಸಿ ಅದರ ದುರಸ್ತಿ ಕಾರ್ಯಕ್ಕೆ ನೆರವು ನೀಡುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದರು. ದೇವಸ್ತೂರಿನ ಅರ್ಧ ಕುಸಿದಿರುವ ಶಾಲೆಯನ್ನು ಮಕ್ಕಳ ಹಿತದೃಷ್ಟಿಯಿಂದ ಪೂರ್ಣ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ತಿಳಿಸುವಂತೆ ಕೊಡಗು ಸೇವಾಕೇಂದ್ರದ ಪದಾಧಿಕಾರಿಗಳಿಗೆ ತಿಳಿಸಿದರು.

ಸುಧಾಮೂರ್ತಿಯವರು ಕಾಲೂರಿನ ಅಪ್ಪನೆರವಂಡ ಚಿನ್ನವ್ವ ಅವರ ಗದ್ದೆಯನ್ನು ವೀಕ್ಷಿಸಿ ಅಲ್ಲಿ ನೆರೆದಿದ್ದ ಗ್ರಾಮಸ್ಥರನ್ನು ಮಾತನಾಡಿಸಿದಾಗ, ತಮಗೆ ತರಕಾರಿ ಬೆಳೆಯಲು ಒಂದು ಹಸಿರು ಮನೆ

(ಮೊದಲ ಪುಟದಿಂದ) (ಪಾಲಿ ಹೌಸ್) ನಿರ್ಮಿಸಿಕೊಡಬೇಕೆಂದು ಕೋರಿದರು. ಅದಕ್ಕೆ ಸ್ಥಳ ಪರಿಶೀಲನೆ ನಡೆಸಿದ ಕೊಡಗು ಸೇವಾ ಕೇಂದ್ರದ ಪದಾಧಿಕಾರಿಗಳು ಅಪ್ಪನೆರವಂಡ (ಮೊದಲ ಪುಟದಿಂದ) (ಪಾಲಿ ಹೌಸ್) ನಿರ್ಮಿಸಿಕೊಡಬೇಕೆಂದು ಕೋರಿದರು. ಅದಕ್ಕೆ ಸ್ಥಳ ಪರಿಶೀಲನೆ ನಡೆಸಿದ ಕೊಡಗು ಸೇವಾ ಕೇಂದ್ರದ ಪದಾಧಿಕಾರಿಗಳು ಅಪ್ಪನೆರವಂಡ ಮೂರ್ತಿಯವರಿಗೆ ಪ್ರದರ್ಶಿಸಿದರು.

ಮಾಂದಲಪಟ್ಟಿ ಮಾರ್ಗವಾಗಿ ಸೂರ್ಲಬ್ಬಿ ಶಾಲೆಗೆ ಭೇಟಿ ನೀಡಿ ಶಾಲೆಯ ವ್ಯವಸ್ಥೆ ಬಗ್ಗೆ ಪರಿಶೀಲಿಸಿ, ಮಡಿಕೇರಿಗೆ ಬಂದು ಅವರಿಗಾಗಿ ಕಾಯುತಿದ್ದ, ಉಸ್ತುವಾರಿ ಸಚಿವರು ಮತ್ತು ಇತರ ಜನಪ್ರತಿನಿಧಿಗಳನ್ನು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಭೆÉೀಟಿಮಾಡಿ ಪ್ರಕೃತಿ ವಿಕೋಪದ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭ ಇನ್ಫೋಸಿಸ್ ಸಂಸ್ಥೆಯ ಸಿಬ್ಬಂದಿಗಳು, ಕೊಡಗು ಸೇವಾ ಕೇಂದ್ರದ ಪದಾಧಿಕಾರಿಗಳಾದ ಅಜ್ಜೀನಂಡÀ ತಮ್ಮು ಪೂವಯ್ಯ, ಬಿದ್ದಾಟಂಡ ತಮ್ಮಯ, ತೇಲಪಂಡ ಪ್ರಮೋದ್, ಪುತ್ತರಿರ ಪಪ್ಪು ತಿಮ್ಮಯ್ಯ, ಕೊಡಂದೇರ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ, ಮದನ್ ವಿ.ಟಿ. ಮುಂತಾದವರು ಹಾಜರಿದ್ದರು.