ಸೋಮವಾರಪೇಟೆ: ವಿಶ್ವದ ಗಮನವನ್ನು ಭಾರತದತ್ತ ಸೆಳೆದ ಮಹಾನ್ ದಾರ್ಶನಿಕ ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದು ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಎ. ಮುರುಳೀಧರ್ ಹೇಳಿದರು.
ಇಲ್ಲಿನ ಯಡೂರು ಬಿಟಿಸಿಜಿ ಪದವಿ ಕಾಲೇಜು ವತಿಯಿಂದ ಬೆಟ್ಟದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ವಿವೇಕಾನಂದರು ತಮ್ಮ ಜೀವಿತಾವಧಿಯಲ್ಲಿ ದೇಶ ಹಾಗೂ ಧರ್ಮದ ಘನತೆಯನ್ನು ಎತ್ತಿ ಹಿಡಿದರು. ಇವರಿಂದ ಪ್ರೇರಣೆಗೊಂಡ ಅಸಂಖ್ಯಾತ ಯುವಕರು ತಮ್ಮ ಜೀವನವನ್ನು ಉತ್ತಮ ಮಾರ್ಗದಲ್ಲಿ ರೂಪಿಸಿಕೊಂಡಿದ್ದಾರೆ. ಅದರಂತೆ ಇಂದಿನ ಯುವ ಜನಾಂಗವೂ ಸಹ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಚಿಕಾಗೋ ಭಾಷಣದ ಮೂಲಕ ವಿಶ್ವದ ಗಮನ ಸೆಳೆದ ವಿವೇಕಾನಂದರು, ಭಾರತದ ಧಾರ್ಮಿಕ ಪರಂಪರೆಯನ್ನು ದೇಶದ ಆಚೆಗೂ ಪಸರಿಸಿದ ಮೊದಲಿಗರು. ಇವರ ಜೀವನಾದರ್ಶ ಸಾರ್ವಕಾಲಿಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ಕುಮಾರ್ ಮಾತನಾಡಿ, ಪದವಿ ಸಮಯವು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದ್ದು, ಭವಿಷ್ಯದ ದೃಷ್ಟಿಯಿಂದ ಉತ್ತಮ ಮಾರ್ಗವನ್ನು ಕಂಡುಕೊಳ್ಳಬೇಕು. ವಿದ್ಯಾಭ್ಯಾಸದೊಂದಿಗೆ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜಮುಖಿಗಳಾಗಬೇಕು ಎಂದು ಕಿವಿಮಾತು ನುಡಿದರು.
ವೇದಿಕೆಯಲ್ಲಿ ಪತ್ರಕರ್ತರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ನಿರ್ದೇಶಕ ದಿನೇಶ್ ಮಾಲಂಬಿ, ಉಪನ್ಯಾಸಕ ಪ್ರವೀಣ್ಕುಮಾರ್ ಅವರುಗಳು ಉಪಸ್ಥಿತರಿದ್ದರು. ಉಪನ್ಯಾಸಕ ಸುನಿಲ್ಕುಮಾರ್, ರಮ್ಯ, ರಾಜು, ಜಯಲಕ್ಷ್ಮೀ, ಗ್ರಂಥಪಾಲಕ ಧರ್ಮಪ್ಪ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೀರಾಜಪೇಟೆ: ಯಾವದೇ ಸಾಧನೆ ಅಗಬೇಕಾದರೂ ಮಾನಸಿಕ ಆರೋಗ್ಯ ಅಗತ್ಯ ಎಂದು ಮಣಿಪಾಲ ಕೆ.ಎಂ.ಸಿ.ಯ. ಮನೋವೈದ್ಯ ಡಾ. ಗಿರೀಶ್ ಹೇಳಿದರು.
ಇಲ್ಲಿಗೆ ಸಮೀಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಆಯೋಜಿಸಿದ “ಮನಸ್ಸು, ನೆನಪಿನ ಶಕ್ತಿ ನಿರ್ವಹಣೆ ಮತ್ತು ವ್ಯಕ್ತಿತ್ವ ನಿರ್ಮಾಣ” ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ನಕರಾತ್ಮಕ ಮತ್ತು ಸಕರಾತ್ಮಕ ಆಲೋಚನೆಗಳಿರುತ್ತವೆ. ಅದನ್ನು ಸರಿಯಾಗಿ ಚಿಂತಿಸಿ ಪ್ರಯೋಗಿಸಿದಾಗ ಅದು ಸಾಧನೆಗೆ ಕಾರಣವಾಗುತ್ತದೆ. ನಕರಾತ್ಮಕ ಆಲೋಚನೆಗಳಿದ್ದಾಗ ಜೀವನದಲ್ಲಿ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಮಾನಸಿಕವಾಗಿ ಕುಗ್ಗಿ ಎಲ್ಲದರಲ್ಲೂ ಸೋಲು ಅನುಭವಿಸಬೇಕಾಗುತ್ತದೆ. ಅದ್ದರಿಂದ ಮನಸ್ಸನ್ನು ಸಕರಾತ್ಮಕ ಮಾಡಿಕೊಂಡು ಕೌಶಲ್ಯ ಬಳಸಿ ಯಶಸ್ಸು ಸಾಧಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ವಹಿಸಿದ್ದರು. ರೆಡ್ ಕ್ರಾಸ್ ಸಂಚಾಲಕ ಎಂ.ಎನ್. ವನಿತ್ಕುಮಾರ್ ಸ್ವಾಗತಿಸಿ, ಕಾಲೇಜಿನ ಉದ್ಯೋಗ ಸಮಿತಿಯ ಸಂಚಾಲಕ ಪ್ರೊ. ಹೆಚ್.ಎಸ್. ವೇಣುಗೋಪಾಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮೂರ್ನಾಡು: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹೆಚ್.ಕೆ. ಸರೋಜ ಅವರನ್ನು ಬೀಳ್ಕೊಡಲಾಯಿತು.
ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 41 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ 6 ವರ್ಷಗಳಿಂದ ಮೂರ್ನಾಡು ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಆಗಿ ಸೇವೆ ಮಾಡಿ ನಾಡಿನಲ್ಲಿ ಉತ್ತಮ ಶಿಕ್ಷಕಿ ಎನಿಸಿಕೊಂಡಿರುವ ಹೆಚ್.ಕೆ. ಸರೋಜ ಅವರನ್ನು ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಮತ್ತು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಶಿಕ್ಷಕಿ ಹೆಚ್.ಕೆ. ಸರೋಜ ಮಾತನಾಡಿ, ಅನುಭವವಿರುವ ಹಿರಿಯರ ಸಮ್ಮುಖದಲ್ಲಿ ಕರ್ತವ್ಯ ನಿರ್ವಹಿಸಿದರೆ ನಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ, ಸಮಯಪ್ರಜ್ಞೆಯನ್ನು ಅಳವಡಿಸಿಕೊಳ್ಳಬಹುದು. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಹೇಳಿದರು. ವಿದ್ಯಾರ್ಥಿಗಳು, ಶಿಕ್ಷಕರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಉಪಾಧ್ಯಕ್ಷ ಮನೋಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಾಧಿಕ್, ರವಿ, ಜಯಂತಿ, ಈರಸುಬ್ಬಯ್ಯ ಮತ್ತು ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಲತ ಉಪಸ್ಥಿತರಿದ್ದರು.
ಶೇಖರ ತಂಡ ಪ್ರಾರ್ಥಿಸಿ, ಶಿಕ್ಷಕಿ ಪುಷ್ಪಲತ ಸ್ವಾಗತಿಸಿ, ಬಿ.ಎನ್. ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿ, ನಿರ್ಮಲ ವಂದಿಸಿದರು.
*ಗೋಣಿಕೊಪ್ಪಲು: ಇಲ್ಲಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು. ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು.
ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ಯಮೌಳಿ ಮಾಹಿತಿ ನೀಡಿದರು ಈ ಸಂzರ್ಭ ಶಾಲಾ ಮುಖ್ಯ ಶಿಕ್ಷಕಿ ಶಾಂತಿ, ಶಿಕ್ಷಕರಾದ ಅರುಣಾ, ವಿದ್ಯಾ, ಹರಿಣಿ, ರೇವತಿ, ಶಾರದ, ನೂತನ್ಕುಮಾರ್ ಹಾಜರಿದ್ದರು.
ನಾಪೆÇೀಕ್ಲು: ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಸಪ್ತಾಹ ಜಾಥಾವನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ವಿವೇಕಾನಂದರ “ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ” ಎಂಬ ವೇದವಾಕ್ಯದೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.
ಜಾಥಾದ ನೇತೃತ್ವದಲ್ಲಿ ಕಾಲೇಜಿನ ಪ್ರಬಾರ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ವಹಿಸಿದ್ದರು. ಪ್ರಾಧ್ಯಾಪಕ ಮುದ್ದಪ್ಪ, ಮನೋಜ್ ಕುಮಾರ್, ನಂದೀಶ್, ಶಾಲಿನಿ, ವಿನೋದ್, ಗೌರಮ್ಮ ಇದ್ದರು.
ಸುಂಟಿಕೊಪ್ಪ: ತಮ್ಮ ಸಂಪಾದನೆಯೇ ಒಂದಿಷ್ಟು ಭಾಗವನ್ನು ಸೇವೆಗಾಗಿ ಮುಡಿಪಾಗಿಸಿ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶಾಂತಳ್ಳಿಯ ಬೆಟ್ಟದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎನ್ಎಸ್ಎಸ್ ವಿಶೇಷ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ವ್ಯಕ್ತಿತ್ವ ವಿಕಸನಕ್ಕೆ ಇಂತಹ ಶಿಬಿರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವನೆ ಬೆಳೆಯಬೇಕು, ಆಗಿದ್ದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲದು. ಇಂತಹ ಶಿಬಿರ ಭವಿಷ್ಯದ ಬದುಕಿನ ಅಡಿಪಾಯ ಎಂದರು.
ಮುಖ್ಯ ಭಾಷಣಕಾರ ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ಎನ್. ಹರೀಶ್ ಮಾತನಾಡಿ, ಯುವ ಜನಾಂಗ ಮೊಬೈಲ್ ಬಳಕೆಯಿಂದ ತಲ್ಲೀನರಾದರಿಂದ ಅವರಲ್ಲಿರುವ ಪಠ್ಯೇತರ ಚಟುವಟಿಕೆಗಳು ಕುಂಠಿತಗೊಂಡಿರುವದು ಬೇಸರ ತಂದಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನೆಲಕಚ್ಚಿದ್ದಾರೆ.ಇದರಿಂದ ಸ್ವಾಮಿ ವಿವೇಕಾನಂದರ ಚಿಂತನೆಗಳು ಮಣ್ಣುಪಾಲಾಗುತ್ತಿದೆ. ಯುವಜನಾಂಗದಲ್ಲಿ ಗುರಿ ಇಲ್ಲದಿದ್ದರೆ ಭವಿಷ್ಯದಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಮುಂದೆ ಭಾರತೀಯ ಜಾನಪದ ನಶಿಸಿಹೋಗುತ್ತಿರುವದು ದುರಂತ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜೆ. ದೀಪಕ್ ಅವರು, ಶಿಬಿರದಿಂದ ವ್ಯಕ್ತಿತ್ವ ವಿಕಸನ, ಬಾಂಧವ್ಯ, ನ್ಯೂನತೆಗಗಳನ್ನು ಸರಿಪಡಿಸಲು ಸಾದ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಶ್ರೀಧರ್ ವಹಿಸಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಶಾಲಾ ಮುಖ್ಯ ಶಿಕ್ಷಕ ಟಿ.ಜೆ. ವೆಂಕಟೇಶ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಬಿ.ಪಿ. ಪ್ರಿಯ, ಶಿಬಿರಾಧಿಕಾರಿ ಪ್ರವೀಣ್ಕುಮಾರ್ ಇದ್ದರು.ಒಡೆಯನಪುರ: ಸಮೀಪದ ನಿಡ್ತ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರಕಾರದಿಂದ ಬಿಡುಗಡೆಯಾದ ಉಚಿತ ಸೈಕಲ್ ವಿತರಿಸಲಾಯಿತು. ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದ ಬಳಿಕ ಮಾತನಾಡಿ, ವಿದ್ಯಾರ್ಥಿಗಳು ದೇಶದ ಆಸ್ತಿ ಹಾಗೂ ರಾಷ್ಟ್ರದ ಭವಿಷ್ಯಗಳಾಗಿದ್ದಾರೆ. ಈ ಕಾರಣದಿಂದ ವಿದ್ಯಾರ್ಥಿಗಳ ಉನ್ನತ್ತಿಗಾಗಿ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಪ್ರಯತ್ನಿಸುತ್ತಿವೆ ಎಂದರು. ಸರಕಾರ ಮತ್ತು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಉಚಿತ ಪುಸ್ತಕ, ಸಮವಸ್ತ್ರ ವಿತರಣೆ, ಉಚಿತ ಸೈಕಲ್ ವಿತರಣೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ದೇಶದ ರೂವಾರಿಗಳಾಗಿ ಬೆಳೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಡ್ತ ಗ್ರಾ.ಪಂ. ಸದಸ್ಯ ವಿಜಯ್ಕುಮಾರ್, ಶಾಲಾ ಎಸ್ಡಿಎಂಸಿ ಅಧ್ಯಕ್ಷ ರುದ್ರಪ್ಪ, ಮುಖ್ಯ ಶಿಕ್ಷಕ ಸಿದ್ದಯ್ಯ, ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಮತ್ತು ಪೋಷಕರು ಹಾಜರಿದ್ದರು.
ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನ ಬಿ.ಸಿ.ಎ. ವಿಭಾಗ ಹಾಗೂ ಶ್ರೀಪ್ರದ್ಯುಮ್ನ ಟೆಕ್ನಾಲಜಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಂತಿಮ ಬಿ.ಸಿ.ಎ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣದಲ್ಲಿ ಉನ್ನತ ಜ್ಞಾನ ಹೊಂದಲು ಐದು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ವೆಬ್ ಟೆಕ್ನಾಲಜಿಗೆ ಸಂಬಂಧಿಸಿದ ಹೆಚ್.ಟಿ.ಎಂ.ಎಲ್-5, ಸಿಎಸ್.ಎಸ್-3, ಪಿಹೆಚ್ಪಿ, ಜಾವಾ ಸ್ಕ್ರಿಪ್ಟ್, ಜೇಕ್ವೆರಿ, ಬೂತ್ಸ್ಟ್ರ್ಯಾಪ್ ಹಾಗೂ ಮೈ ಸೀಕ್ವೆಲ್ ಇವುಗಳ ಬಗ್ಗೆ ಪ್ರದ್ಯುಮ್ನ ಟೆಕ್ನಾಲಜಿಯ ಸಾಫ್ಟ್ವೇರ್ ಇಂಜಿನಿಯರ್ ವಿ. ಸುನೀತ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದರು. ಕಾರ್ಯಾಗಾರದ ಸಮಾರೋಪದಲ್ಲಿ ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತ, ಬಿ.ಸಿ.ಎ. ಉಪನ್ಯಾಸಕರಾದ ಆರ್. ಸೌಮ್ಯ, ಕೆ.ಕೆ. ಬೋಜಮ್ಮ, ಕೃತಿಕಾ, ಕಲ್ಪಿತ ಹಾಜರಿದ್ದರು. ವಿದ್ಯಾರ್ಥಿಗಳು ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಂಡರು. ಬಿ.ಸಿ.ಎ. ವಿಭಾಗದ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ ಕಾರ್ಯಾಗಾರವನ್ನು ಆಯೋಜಿಸಿದ್ದರು.
ವೀರಾಜಪೇಟೆ: ಇಲ್ಲಿಗೆ ಸಮೀಪದ ಬಿ.ಸಿ. ಪ್ರೌಢಶಾಲೆ ದೇವಣಗೇರಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ 2018-19ನೇ ಸಾಲಿನ ಸರಕಾರದಿಂದ ಸರಬರಾಜಾದ ಉಚಿತ ಬೈಸಿಕಲ್ ವಿತರಣಾ ಸಮಾರಂಭ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟಿರ ನಾಣಯ್ಯ ವಹಿಸಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತ ಪ್ರಕಾಶ್ ಬೈಸಿಕಲ್ ವಿತರಣೆ ಮಾಡಿ ಪ್ರಸ್ತುತ ಶಿಕ್ಷಣ ಪದ್ಧತಿ ಬಗ್ಗೆ ಹಾಗೂ ಫಲಿತಾಂಶ ಪ್ರಗತಿ ಬಗ್ಗೆ ತಿಳಿಯಪಡಿಸಿದರು. ಮತ್ತೋರ್ವ ಅತಿಥಿ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರೇಮ್ ನಾಣಯ್ಯ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಮಾಡಿ ಪಂಚಾಯಿತಿ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ನೀಡುವ ಬಗ್ಗೆ ಭರವಸೆ ನೀಡಿದರು.
ಅಧ್ಯಕ್ಷರ ಭಾಷಣದಲ್ಲಿ ಮಾತನಾಡಿದ ಮುಕ್ಕಾಟಿರ ಸುನಿಲ್ ನಾಣಯ್ಯ ಸರಕಾರದ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಪ್ರಗತಿಯತ್ತ ಮುನ್ನಡೆಯಬೇಕೆಂದು ಅತ್ಯುತ್ತಮ ಫಲಿತಾಂಶಕ್ಕೆ ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಆಡಳಿತ ಮಂಡಳಿ ಆಡಳಿತಾಧಿಕಾರಿ ಪಿ.ಎ. ಲಕ್ಷ್ಮೀ ನಾರಾಯಣ, ಶಾಲಾ ಸದಸ್ಯ ಬೀನಂಡ ಎಸ್. ಪೂಣಚ್ಚ, ಶಾಲಾ ಮುಖ್ಯ ಶಿಕ್ಷಕರು ಮತ್ತು ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, 8ನೇ ತರಗತಿ ವಿದ್ಯಾರ್ಥಿಗಳ ಪೋಷಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ಸ್ವಾಗತಿಸಿ, ಶಾಲಾ ಸಹ ಶಿಕ್ಷಕಿ ಎ.ಸಿ. ಸುನಿತ ವಂದಿಸಿದರು.ಮಡಿಕೇರಿ: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸುನ್ನಿ ಸುಡೆಂಟ್ಸ್ ಫೆಡರೇಷನ್ ವತಿಯಿಂದ ಜ.20 ರಂದು ರಾಜ್ಯ ವ್ಯಾಪಿ ಆಯೋಜಿಸಲಾಗಿದ್ದ ‘ಕಾನ್ಫಿಡೆಂಟ್ ಟೆಸ್ಟ್ನಲ್ಲಿ’ ಸುಮಾರು 10 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದು, ಶೀಘ್ರದಲ್ಲೆ ಅದರ ಫಲಿತಾಂಶ ಪ್ರಕಟಿಸಿ ಉತ್ತಮ ಅಂಕ ಗಳಿಸಿದವರಿಗೆ ಬಹುಮಾನ ವಿತರಿಸಲಾಗುವದೆಂದು ಸಂಘಟನೆಯ ಜಿಲ್ಲಾ ಮುಖಂಡರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶಾಫಿ ಸಅದಿ ಅವರು, ಕಳೆದ ನಾಲ್ಕು ವರ್ಷಗಳಿಂದ ಇಂತಹ ಪರೀಕ್ಷೆಯನ್ನು ಸಂಘಟನೆ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಜಾತಿ ಮತ ಭೇದವಿಲ್ಲದೆ ಎಲ್ಲಾ ವರ್ಗದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷವೂ ಕೊಡಗು ಜಿಲ್ಲೆಯ ಸುಮಾರು 22 ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1500 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆಂದು ಮಾಹಿತಿ ನೀಡಿದರು.
ಅದೇ ರೀತಿ ಸಂಘಟನೆಯು ಮಾದಕ ವಸ್ತುಗಳ ವಿರುದ್ಧ ಜಾಗೃತಿ, ಭಯೋತ್ಪಾದನೆ ವಿರುದ್ಧ ಆಂದೋಲನ, ಆಜಾದಿ ರ್ಯಾಲಿ, ಸೌಹಾರ್ದ ಸಮ್ಮೇಳನ, ಧಾರ್ಮಿಕ ಪ್ರವಚನಗಳಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯಸ್ಥರ ಅನುಮತಿ ಪಡೆದೇ ನಡೆಸಲಾಗುತ್ತಿದೆ. ಆದರೂ ಎಮ್ಮೆಮಾಡಿನ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪರೀಕ್ಷೆ ಸಂದರ್ಭ ಕೆಲವು ಪುಂಡರು ಪರೀಕ್ಷಾ ಕೇಂದ್ರಕ್ಕೆ ಅಕ್ರಮ ಪ್ರವೇಶ ಮಾಡಿ, ಅಲ್ಲಿದ್ದ ಪರೀಕ್ಷಾ ಸಹಾಯಕರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದು, ಇದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಘÀಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಅಜ್ಹೀಜ್ ಸಖಾಫಿ ಕೊಡ್ಲಿಪೇಟೆ, ಉಪಾಧ್ಯಕ್ಷ ಶಕೀರ್ ಪೊನ್ನತ್ಮೊಟ್ಟೆ, ಕಾರ್ಯದರ್ಶಿ ಮುಸ್ತಫ ನೆಲ್ಲಿಹುದಿಕೇರಿ ಹಾಗೂ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ ಉಪಸ್ಥಿತರಿದ್ದರು.
ವೀರಾಜಪೇಟೆ: ಕಾವೇರಿ ಕಾಲೇಜು ರಾಜ್ಯಶಾಸ್ತ್ರ ವಿಭಾಗದಿಂದ ಮತದಾನ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಪತ್ರಕರ್ತೆ ಉಷಾ ಪ್ರೀತಂ ಆಗಮಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಮತದಾನ ಒಂದು ಹಕ್ಕು ಮಾತ್ರವಲ್ಲ ಅದು ನಮಗಿರುವ ಶಕ್ತಿ. ರಾಜಕೀಯದಲ್ಲಿ ಇಂದು ಭ್ರಷ್ಟಾಚಾರ ತುಂಬಿ ಹೋಗಿದೆ. ಒಂದು ಮತಕ್ಕೆ ದೇಶದ ಅಳಿವು ಉಳಿವನ್ನು ನಿರ್ಧರಿಸಲು ಸಾಧ್ಯವಿದೆ. ನಮ್ಮ ಶಕ್ತಿಯನ್ನು ದೇಶದ ಒಳಿತಿಗಾಗಿ ಉಪಯೋಗಿಸೋಣ ಎಂದರು. ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ಅಕ್ಷತಾ ನಾಯಕ್, ಕೆ.ಪಿ. ಗಾಯತ್ರಿ ಆಯೋಜಿಸಿದ್ದರು. ವಿದ್ಯಾರ್ಥಿನಿ ಬಿ.ಎಂ. ಮೈನಾ ಸ್ವಾಗತಿಸಿದರೆ, ಲಕ್ಷ್ಮೀ ವಂದಿಸಿದರು. ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.