ಮಡಿಕೇರಿ, ಜ. 30 : ಕೊಳಕೇರಿ ಯಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಕೊಳಕೇರಿ ಮಖಾಂ ಉರೂಸ್ ಸಮಾರಂಭವು ಈ ಬಾರಿ ಫೆ.1 ರಿಂದ 5ರ ವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಳಕೇರಿಯ ಸುನ್ನಿಮುಸ್ಲಿಂ ಜಮಾಅತ್‍ನ ಅಧ್ಯಕ್ಷ ಟಿ.ಹೆಚ್. ಅಹಮ್ಮದ್, ಐದು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಫೆ.1 ರಂದು ಮಧ್ಯಾಹ್ನ 2 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, 2.15 ಗಂಟೆಗೆ ಜಮಾಅತ್‍ನ ಖತೀಬ್ ಬಹು ಹನೀಫ್ ರಹ್ಮಾನಿ ಅವರ ನೇತೃತ್ವದಲ್ಲಿ ಮಖಾಂ ಅಲಂಕಾರ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದರು.

ಅಂದು ರಾತ್ರಿ 8.30ಕ್ಕೆ ಬಹು ಸಯ್ಯಿದ್ ಜಅಫರ್ ಸ್ವಾದಿಖ್ ಕುಂಬೋಳ್ ಅವರ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್ ನಡೆಯಲಿದ್ದು, ವೇದಿಕೆಯಲ್ಲಿ ಕೊಡಗು ಸುನ್ನಿ ಸಂಯುಕ್ತ ಜಮಾಅತ್‍ನ ಅಧ್ಯಕ್ಷರಾದ ಕೆ.ಎಂ. ಹುಸೈನ್ ಸಖಾಫಿ, ಕರ್ನಾಟಕ ರಾಜ್ಯ ಎಸ್.ಎಸ್.ಎಫ್‍ನ ಅಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ, ಮಡಿಕೇರಿ ವಿಭಾಗದ ಎಸ್.ಎಸ್.ಎಫ್ ಅಧ್ಯಕ್ಷರಾದ ಸಯ್ಯಿದ್ ಖಾತಿಂ ಸಖಾಫಿ, ಕೊಡಗು ಸಂಯುಕ್ತ ಜಮಾಅತ್‍ನ ಕಾರ್ಯದರ್ಶಿ ಟಿ.ಹೆಚ್. ಮೊಯ್ದೀನ್ ಕುಟ್ಟಿ ಹಾಜಿ, ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್‍ನ ಉಪಾಧ್ಯಕ್ಷರಾದ ಕೆ.ಹೆಚ್. ಉಮ್ಮರ್ ಉಪಸ್ಥಿತರಿರುವರು.

ಫೆ. 2 ರಂದು ರಾತ್ರಿ 8.30ಕ್ಕೆ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರ ರಾಗಿ ಬಹು ಬಾದುಷ ಸಖಾಫಿ ಆಲಪ್ಪುಝ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹಳೇತಾಲೂಕು ಜಮಾಅತ್‍ನ ಖತೀಬ್ ಎಂ.ಎ. ಅಲಿ ಮುಸ್ಲಿಯಾರ್, ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್‍ನ ಕೋಶಾಧಿಕಾರಿ ಎಂ.ವೈ ಅಬ್ದುಲ್ಲ, ಸದಸ್ಯರಾದ ಕೆ.ಎಂ. ಝಬೈರ್, ಸಿ.ಎ. ಅಹಮದ್ ಹಾಗೂ ಕಣ್ಣಪಣೆ ರಾತೀಬ್ ಸಮಿತಿಯ ಅಧ್ಯಕ್ಷರಾದ ಕೆ.ವೈ. ಸುಲೈಮಾನ್ ಪಾಲ್ಗೊಳ್ಳಲಿದ್ದಾರೆ.

ಫೆ.3 ರಂದು ರಾತ್ರಿ 8.30ಕ್ಕೆ ಬಹು ಸುಯ್ಯಿದ್ ಸುಹೈಲ್ ಸಖಾಫಿ ಅಸ್ಸಖಾಫ್ ಮಡಕ್ಕರ ಕಣ್ಣೂರ್ ಇವರ ನೇತೃತ್ವದಲ್ಲಿ ಖತ್ತಂ ದುಅ ಹಾಗೂ ದ್ಸಿಕ್ರ್‍ಹಲ್ಖ ನಡೆಯಲಿದ್ದು, ವೇದಿಕೆಯಲ್ಲಿ ಪೊನ್ನತ್ ಮೊಟ್ಟೆಯ ಖತೀಬರಾದ ಸಿ.ಎ. ಶಾದುಲಿ ಸಖಾಫಿ, ಕೊಳಕೇರಿ ಸುನ್ನಿ ಮುಸ್ಲಿಂ ಸಮಾಅತ್‍ನ ಸಮಿತಿ ಸದಸ್ಯರಾದ ಎಂ.ಹೆಚ್. ಜಮಾಲ್, ಕೆ.ಎ. ಅಬ್ದುಲ್ ಸಲಾಂ, ಬಿ.ಎಂ. ಯಾಖುಬ್, ಎಂ. ಎಂ.ಮುಹಮ್ಮದ್, ಚೆರುಮಾನಿ ಸಿದ್ದೀಖ್ ಮಸೀದಿಯ ಅಧ್ಯಕ್ಷರಾದ ಕೆ.ಎ. ಮೂಸ ಹಾಜಿ, ಚಿಂಡಮಾಡು ಬದ್ರಿಯಾ ಮಸೀದಿಯ ಕೋಶಾಧಿಕಾರಿ ಕೆ.ಪಿ. ಶಾದುಲಿ ಹಾಜಿ, ಕೂವಲೆಕಾಡು ಹಂದ್ ಮಸೀದಿ ಅಧ್ಯಕ್ಷರಾದ ಕೆ.ಎ. ಎರಮು ಉಪಸ್ಥಿತರಿರುವರು.

ಫೆ. 4 ರಂದು ಬೆಳಿಗ್ಗೆ 10 ಗಂಟೆಗೆ ಪ್ರಾರ್ಥನಾ ಸಂಘಮ ನಡೆಯಲಿದ್ದು, ಇದರ ನೇತೃತ್ವವನ್ನು ಬಹು ಸಯ್ಯಿದ್ ಫಝಲ್ ಕೊಯಮ್ಮ (ಕೂರ ತಂಙಳ್) ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೊಡಗು ಎಸ್.ವೈ.ಎಸ್.ನ ಅಧ್ಯಕ್ಷರಾದ ಎಂ.ವೈ. ಅಬ್ದುಲ್ ಹಫೀಳ್ ಸಅದಿ, ಕುಂಜಿಲ ಸುನ್ನಿ ಮುಸ್ಲಿಂ ಜಮಾಅತ್‍ನ ಅಧ್ಯಕ್ಷರಾದ ಎ.ಎ. ಮುಹಮ್ಮದ್ ಹಾಜಿ, ಮಡಿಕೇರಿ ಎಂ.ಎಂ.ಜೆ ಅಬ್ದುಲ್ ಹಮೀದ್ ಮದನಿ, ವಿರಾಜಪೇಟೆಯ ಅನ್ವಾರುಲ್ ಹುದಾ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಬೆಂಗಳೂರಿನ ಸಿ.ಐ. ಎಂ.ಎ. ಮಹಮ್ಮದ್, ವಿರಾಜಪೇಟೆಯ ಅನ್ವಾರುಲ್ ಹುದಾ ಮುದರ್ರಿಸ್ ಎ.ಎ. ಅಬುಲ್ ರಹೀಂ ಅಹ್ಸನಿ, ಗಲ್ಫ್ ಪ್ರತಿನಿಧಿ ಟಿ.ಎ. ಮಾಹಿನ್ ಹಾಜಿ, ಕೊಳಕೇರಿಯ ಎಂ.ಎ. ಜುನೈದ್ ಅಝ್‍ಹರಿ, ಕೊಳಕೇರಿಯ ಸುನ್ನಿ ಮುಸ್ಲಿಂ ಜಮಾಅತ್‍ನ ಸಮಿತಿ ಸದಸ್ಯರಾದ ಸಿ.ಎ. ಅಬೂಬಕರ್ ಹಾಜಿ ಉಪಸ್ಥಿತರಿರುವರು.

ಅಂದು ಮದ್ಯಾಹ್ನ 1.30ಕ್ಕೆ ಸಾರ್ವಜನಿಕ ಸಮ್ಮೇಳ ನಡೆಯಲಿದ್ದು, ಸಮ್ಮೇಳನದ ಉದ್ಘಾಟನೆಯನ್ನು ಕೊಳಕೇರಿ ಜಮಾಅತ್‍ನ ಸುನ್ನಿ ಮುಸ್ಲಿಂ ಖತೀಬ್ ಬಹು ಹನೀಫ್ ರಹ್ಮಾನಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆ ಯನ್ನು ಕೊಳಕೇರಿ ಜಮಾಅತ್‍ನ ಅಧ್ಯಕ್ಷರಾದ ಟಿ.ಹೆಚ್.ಅಹಮದ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ. ರಾ. ಮಹೇಶ್, ಆಹಾರ ಇಲಾಖೆಯ ವಾಕ್ಫ್ ಹಾಗೂ ಹೆಚ್ಚುವರಿ ಸಚಿವರಾದ ಝಮೀರ್ ಅಹಮದ್, ವಸತಿ ಸಚಿವರಾದ ಯು.ಟಿ. ಖಾದರ್, ಕರ್ನಾಟಕ ರಾಜ್ಯ ಎಂ.ಎಲ್.ಸಿ. ಬಿ.ಎ. ಪಾರೂಖ್ ಭಾಗವಹಿಸಲಿದ್ದಾರೆ.

ಮುಖ್ಯ ಭಾಷಣಕಾರರಾಗಿ ಡಾ. ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ ಪಾಲ್ಗೊಳ್ಳಲಿದ್ದಾರೆ.

ರಾತ್ರಿ 8.30ಕ್ಕೆ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಬಹು ಬಿ.ಪಿ. ಅಬ್ದುಲ್ ರಹ್ಮಾನ್ ದಾರಿಮಿ (ಆಟೀರಿ ತಂಙಳ್) ಮುಖ್ಯ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಳಕೇರಿಯ ಒ.ಎಸ್.ಎಫ್. ಅಧ್ಯಕ್ಷರಾದ ಸಿ.ಎಂ. ಮೂಸ, ಸೋಮವಾರಪೇಟೆ ಮುಅಲ್ಲಿಂ ಸದರ್ ಸಿ.ಎಂ. ಮುನೀರ್ ಸಅದಿ, ಚಿಂಡಮಾಡು ಇಮಾಂ ಬದ್ರಿಯಾ ಮಸೀದಿಯ ಇಮಾಂ ಎಂ.ಎ. ಇಬ್ರಾಹೀಂ, ಗಲ್ಫ್ ಪ್ರತಿನಿಧಿ ಎಂ.ಎಂ. ಇಸ್ಮಾಯಿಲ್ ಉಪಸ್ಥಿತರಿರುವರು.

ಫೆ. 5 ರಂದು ರಾತ್ರಿ. 8.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೊಳಕೇರಿಯ ಸುನ್ನಿ ಮುಸ್ಲಿಂ ಜಮಾಅತ್‍ನ ಖತೀಬ್ ಬಹು ಹನೀಫ್ ರಹ್ಮಾನಿ ಉದ್ಭೋದನೆ ಮಾಡಲಿದ್ದಾರೆ.

ವೇದಿಕೆಯಲ್ಲಿ ಕೊಳಕೇರಿ ಡಿ.ಐ.ಎಂ. ಮುಅಲ್ಲಿಂ ಉಸ್ಮಾನ್ ಮುಸ್ಲಿಯಾರ್, ಕೆ.ಯು. ಮುಹಮ್ಮದ್ ಮುಸ್ಲಿಯಾರ್, ಅಬ್ದುಲ್ ರಶೀದ್ ಮುಸ್ಲಿಯಾರ್, ಉರೂಸ್ ಸಮಿತಿಯ ಚೇರ್‍ಮೇನ್ ಸಿ.ಎ. ಮಹಮೂದ್ ಹಾಜಿ, ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್‍ನ ಸದಸ್ಯರಾದ ವಿ.ಎ. ಇಸ್ಮಾಯಿಲ್ ಭಾಗವಹಿಸಲಿದ್ದಾರೆ ಎಂದು ಟಿ.ಹೆಚ್.ಅಹಮ್ಮದ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿಯ ಕನ್ವೀನರ್ ಸಿ.ಎಂ.ಹುಸೈನ್ ಮುಸ್ಲಿಯಾರ್, ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್‍ನ ಖತೀಬ್ ಹನೀಫ್ ರಹ್ಮಾನಿ, ಸದಸ್ಯರಾದ ಟಿ.ಎಸ್. ಶಿಹಾಬ್ ಅಲ್ ವಫಾ, ಗಲ್ಫ್ ಪ್ರತಿನಿಧಿ ಎಂ.ಎಂ.ಇಸ್ಮಾಯಿಲ್ ಹಾಗೂ ಚೆರುಮಾನಿ ಸಿದ್ದೀಖ್ ಮಸೀದಿಯ ಅಧ್ಯಕ್ಷರಾದ ಕೆ.ಎ.ಮೂಸ ಹಾಜಿ ಉಪಸ್ಥಿತರಿದ್ದರು.