ಮಡಿಕೇರಿ, ಜ. 29: ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟೀನ್‍ನಲ್ಲಿ ಪ್ರಸ್ತುತ ಮಾಜಿ ಸೈನಿಕರಿಗೆ ಸಾಮಗ್ರಿಗಳು ಮಾತ್ರ ಸಿಗುತ್ತಿದೆ. ಈ ಕ್ಯಾಂಟೀನ್‍ನಲ್ಲಿ ಸಾಮಗ್ರಿಯೊಂದಿಗೆ ಮದ್ಯವನ್ನು ವಿತರಿಸಲು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಕ್ಯಾಂಟೀನ್‍ನಲ್ಲಿ ಸೌಲಭ್ಯವನ್ನು ಪಡೆಯಲು ಇಚ್ಚಿಸುವವರು ಈ ಕ್ಯಾಂಟೀನ್‍ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮಾಜಿ ಸೈನಿಕರ ಸಂಘ ಕೋರಿದೆ. ಹೆಚ್ಚಿನ ಮಾಹಿತಿಗೆ ಸಂಘದ ಕಾರ್ಯದರ್ಶಿ ಮೇಜರ್ ಓ.ಎಸ್. ಚಿಂಗಪ್ಪ (9845331431) ಅವರನ್ನು ಸಂಪರ್ಕಿಸಬಹುದು.