ವೀರಾಜಪೇಟೆ, ಜ. 28: ಜಾತ್ಯಾತೀತವಾಗಿ ವರ್ಗ ರಹಿತವಾಗಿ ಕಾಂಗ್ರೆಸ್ ಪಕ್ಷದ ಸರಕಾರ ಸಾರ್ವಜನಿಕವಾಗಿ ನೀಡಿರುವ ಕಾಂಕ್ರಿಟ್ ರಸ್ತೆಯನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು. ಈ ಹಿಂದೆ ಇದ್ದ ಸರಕಾರ ರಸ್ತೆಗೆ ಆದ್ಯತೆ ನೀಡಿದ ಪರಿಣಾಮವಾಗಿ ನಗರ ಪಟ್ಟಣಗಳಲ್ಲಿ ಆಯ್ದ ಭಾಗದಲ್ಲಿ ರಸ್ತೆ ದುರಸ್ತಿಗೊಂಡು ಹೊಸ ರಸ್ತೆಯ ನಿರ್ಮಾಣವು ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವುಮಾದಪ್ಪ ಹೇಳಿದರು.

ಮುಖ್ಯಮಂತ್ರಿಗಳ ನಗರಾಭಿವೃದ್ಧಿ ಯೋಜನೆಯಡಿಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಉಸ್ತುವಾರಿ ಯಲ್ಲಿ ವಿದ್ಯಾನಗರದಲ್ಲಿ ರೂ 15ಲಕ್ಷ ವೆಚ್ಚದಲ್ಲಿ ಕೈಗೊಂಡು ಕಾಮಗಾರಿ ಪೂರ್ಣಗೊಂಡ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿದ ಶಿವುಮಾದಪ್ಪ ಅವರು ನಿರ್ಮಾಣವು ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವುಮಾದಪ್ಪ ಹೇಳಿದರು.

ಮುಖ್ಯಮಂತ್ರಿಗಳ ನಗರಾಭಿವೃದ್ಧಿ ಯೋಜನೆಯಡಿಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಉಸ್ತುವಾರಿ ಯಲ್ಲಿ ವಿದ್ಯಾನಗರದಲ್ಲಿ ರೂ 15ಲಕ್ಷ ವೆಚ್ಚದಲ್ಲಿ ಕೈಗೊಂಡು ಕಾಮಗಾರಿ ಪೂರ್ಣಗೊಂಡ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿದ ಶಿವುಮಾದಪ್ಪ ಅವರು ಹಿಂದಿನ ಸರಕಾರ ಯಾವದೇ ತಾರತಮ್ಯವಿಲ್ಲದೆ ವಿವಿಧ ಜನಪರ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಆರಂಭಿಸಿದ್ದು ಇನ್ನು ಕೆಲವು ಕಾಮಗಾರಿಗಳು ಮುಕ್ತಾಯ ಹಂತದಲ್ಲಿದೆ.ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಹಿಂದಿಗಿಂತಲೂ ಕಾಂಗ್ರೆಸ್ ಪಕ್ಷದ ಅಧಿಕ ಸದಸ್ಯರುಗಳಿದ್ದಾರೆ. ಎಲ್ಲರೂ ವೀರಾಜ ಪೇಟೆ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸಿ ವೀರಾಜಪೇಟೆ ಪಟ್ಟಣವನ್ನು ಮಾದರಿ ಪಟ್ಟಣ ಪಂಚಾಯಿತಿಯಾಗಿ ಮಾರ್ಪಡಿಸಲಿ ಎಂದರು.

ಕಾಂಗ್ರೆಸ್ ಪಕ್ಷದ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ.ಅಬ್ದುಲ್ ಸಲಾಂ, ಎಂ.ಎಸ್.ಪೂವಯ್ಯ, ಎಸ್.ಎಚ್.ಮೈನುದ್ದೀನ್, ರಾಫಿ ಮಹಮ್ಮದ್, ಎಸ್.ಎಚ್.ಮತೀನ್ ಮತ್ತಿತರರು ಮಾತನಾಡಿದರು.

ವೇದಿಕೆಯಲ್ಲಿ ಪಕ್ಷದ ನಗರ ಸಮಿತಿ ಅಧ್ಯಕ್ಷ ಮೋಹನ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ, ನೂತನ ಸದಸ್ಯರು ಗಳಾದ ಸಿ.ಕೆ.ಪೃಥ್ವಿನಾಥ್, ತಬಸಂ, ಆಗಸ್ಟಿನ್ ಬೆನ್ನಿ, ವಿ.ಆರ್. ರಜನಿ ಕಾಂತ್, ಎಂ.ಕೆ.ಜಲೀಲ್, ಪಟ್ಟಡ ರಂಜಿ ಪೂಣಚ್ಚ, ಡಿ.ಪಿ.ರಾಜೇಶ್, ಆರ್.ಎಂ.ಸಿ ಸದಸ್ಯ ಎಂ.ಕೆ.ಬೋಪಣ್ಣ ಮತ್ತಿತರರು ಉಪಸ್ಥಿತರಿದ್ದರು. ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಎಂ.ಎಂ.ಶಶಿಧರನ್ ನಿರೂಪಿಸಿದರು.