*ಗೋಣಿಕೊಪ್ಪಲು, ಜ. 27: ಪಟ್ಟಣದ ಟೀಮ್ ಮೋದಿ ಸಂಘಟನೆÉಯ ವತಿಯಿಂದ ನಿನ್ನೆ ನಡೆದ ದ್ವಿಚಕ್ರ ವಾಹನ ಜಾಥಾದ ಬಳಿಕ ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, 2014 ರಿಂದ ಇತ್ತೀಚೆಗೆ ಭಾರತ ಬದಲಾವಣೆಯನ್ನು ಕಂಡಿದೆ. ಪ್ರಪಂಚದ ಉತ್ತುಂಗ ಶಿಖರವನ್ನೇರಿದೆ. ಬಯೋತ್ಪಾದಕರ ಅಟ್ಟಹಾಸ ಶಮನಗೊಂಡಿದೆ. ಜನಪರÀ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇದಕ್ಕೆಲ್ಲ ಮೂಲ ಕಾರಣವೇ ಮೋದಿ ಸರ್ಕಾರ ಎಂಬವದು ನಮ್ಮ ಹೆಮ್ಮೆ ಎಂದು ಮೋದಿ ಸರ್ಕಾರದ ಬಗ್ಗೆ ಶಾಸಕರು ವಿಶ್ಲೇಷಿದರು.
ಬಳ್ಳಾರಿ ಜಿಲ್ಲೆಯ ಟೀಮ್. ಮೋದಿ ಸಂಘಟನೆಯ ಸಂಚಾಲಕ ಸಂತೋಷ್ ಸಾಂಬ್ರಾಟ್ ಮಾತನಾಡಿ ಇಂದಿನ ಯುವ ಸಮುದಾಯದ ಧ್ವನಿ ಮತ್ತು ದ್ಯೇಯ ಮೋದಿಯನ್ನು ಮತ್ತೆ ಪ್ರಧಾನಿಯಾಗಿಸಬೇಕು ಎಂಬವದೆ ಆಗಿದೆ ಎಂದರು.
ಮೋದಿ ಸರ್ಕಾರದಲ್ಲಿ ದೇಶದ ವ್ಯವಸ್ಥೆ ಬದಲಾಗಿದೆ. ವಿದೇಶಿಗಳಲ್ಲೂ ಭಾರತದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಹಾರುತ್ತಿದೆ. ಕುಟುಂಬ ರಾಜಕಾರಣದ ವ್ಯವಸ್ಥೆಯಿಂದ ಹೊರತಾದ ಮೋದಿಯನ್ನು ದೇಶಕ್ಕಾಗಿ ಮತ್ತೆ ಪ್ರಧಾನಿಯಾಗಿಸುವದು ಅನಿವಾರ್ಯತೆ ಮತ್ತು ಅವಶ್ಯಕತೆ ಇದೆ ಎಂದು ಹೇಳಿದರು.
ಮೋದಿ ಸರ್ಕಾರದಲ್ಲಿ ನೋಟ್ ಬ್ಯಾನ್ ಮಾಡುವ ಮೂಲಕ ಉಗ್ರಗಾಮಿಗಳ ಚಟುವಟಿಕೆಗಳನ್ನು ಧಮನ ಮಾಡಿದ ಹೆಗ್ಗಳಿಕೆಯೊಂದಿಗೆ ಐದು ಸಾವಿರ ಜನ ಔಷದಿ ಕೇಂದ್ರ, ದೇಶದ ಸೈನಿಕರಿಗಾಗಿ ಯೋಜನೆ, ಆರು ಕೋಟಿಗೂ ಹೆಚ್ಚು ಅನಿಲ ಸಂಪರ್ಕ, ಶೌಚಾಲಯಗಳ ನಿರ್ಮಾಣ, ಯುವ ಸಮುದಾಯಕ್ಕೆ ಉದ್ಯೋಗ ಅವಕಾಶ ಸೇರಿದಂತೆ ನೂರಾರು ಯೋಜನೆಗಳನ್ನು ನೀಡಿದ ಹೆಮ್ಮೆ ಮೋದಿ ಸರ್ಕಾರದಾಗಿದೆ ಎಂದರು. ಭಾರತ ಇಂದು ಉದ್ಯಮದಲ್ಲಿ ಬೆಳೆಯುತ್ತಿದೆ. ದೇಶ ಅಭಿವೃದ್ಧಿ ಹೊಂದಲು ಮತ್ತೆ ಮೋದಿ ಸರ್ಕಾರದ ಆಡಳಿತ ಅವಶ್ಯ ಎಂದು ಕಾರ್ಯಕರ್ತರಿಗೆ ಮನದಟ್ಟು ಮಾಡಿಸಿದರು.
ರಾಜ್ಯ ಬಿ.ಜೆ.ಪಿ. ಉಪಾಧ್ಯಕ್ಷ ಮನುಮುತ್ತಪ್ಪ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಜಿ.ಪಂ. ಸದಸ್ಯ ಮುಕೊಂಡ ಶಶಿಸುಬ್ರಮಣಿ, ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಅರುಣ್ ಬೀಮಯ್ಯ, ಕಾರ್ಯದರ್ಶಿ ಲಾಲ ಬೀಮಯ್ಯ, ಖಜಾಂಚಿ ಶ್ಯಾಮ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನ ನಾಣಯ್ಯ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಜಿತ್ ಕರುಂಬಯ್ಯ,ಉಪಾಧ್ಯಕ್ಷ ತೋರೆರ ವಿನು, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷ್ಷೆ ಚೇದಂಡ ಸುಮಿ ಸುಬ್ಬಯ್ಯ, ತಾ.ಪಂ ಉಪಾಧ್ಯಕ್ಷ ನೆಲ್ಲಿರ ಚಲನ್, ಸದಸ್ಯ ಜಯ ಪೂವಯ್ಯ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಸದಸ್ಯರುಗಳಾದ ರತಿ ಅಚ್ಚಪ್ಪ, ಮಂಜುರೈ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ. ರಾಜೇಶ್, ಟೀಮ್ ಮೋದಿ ಜಿಲ್ಲಾ ಸಂಚಾಲಕ ಕುಲ್‍ದೀಪ್, ತಾಲೂಕು ಸಂಚಾಲಕ ಸಚಿನ್ ಮಂದಣ್ಣ ಭರತ್, ಕುಮಾರ್, ವೇಣು, ಪ್ರದೀಪ್ ಆಂಟೋನಿ, ಅಕಿಲ್ ಶರವಣ, ಶ್ರೀನಿವಾಸ್, ಪುನಿತ್ ಸೇರಿದಂತೆ ಹಲವರು ಭಾಗವಹಿಸಿದರು.