ಮಡಿಕೇರಿ, ಜ. 27: ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ರಾತ್ರಿ ಹೊತ್ತು ವ್ಯಾಸಂಗ ಮಾಡಲು ತೊಡಕು ಉಂಟಾಗದಂತೆ ‘ಅಭಿವೃದ್ಧಿ’ ಸಂಸ್ಥೆ, ತುಮಕೂರು ಹಾಗೂ ಶೆಲ್ ಇಂಡಿಯಾ ಹ್ಯಾಬಿಟೇಟ್ ಫಾರ್ ಹ್ಯುಮಾನಿಟಿ ಬೆಂಗಳೂರು, ಇವರ ಸಹಯೋಗದೊಂದಿಗೆ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಮ್ಮುಖದಲ್ಲಿ ಉಚಿತವಾಗಿ 40 ಸೋಲಾರ್ ದೀಪಗಳನ್ನು ನೀಡಿದರು.